
ಇಸ್ಲಾಮಾಬಾದ್ (ಡಿ.23) ಪಾಕಿಸ್ತಾನದ ಪ್ರಧಾನಿ ಶಬಬಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಮ್ ಲೀಗ್ ಪಕ್ಷದ ನಾಯಕನೊಬ್ಬ ಭಾರತಕ್ಕೆ ವಾರ್ನಿಂಗ್ ನೀಡಿದ್ದಾನೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಕಲಹದ ಹಿಂದೆ ಭಾರತ ಕೈವಾಡವಿದೆ ಎಂದು ಪಾಕಿಸ್ತಾನ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ ಆರೋಪಿಸಿದ್ದಾನೆ. ಆದರೆ ಈ ಯುವಕ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ, ಭಾರತ ಹಾಗೂ ಪ್ರಧಾನಿ ಮೋದಿ ಸರ್ಕಾರಕ್ಕೆ ವಾರ್ನಿಂಗ್ ನೀಡಿದ್ದಾನೆ. ಪಾಕಿಸ್ತಾನದ ಮಿಸೈಲ್‌ಗೆ ಭಾರತ ಅತೀ ದೂರದ ದೇಶವಲ್ಲ. ನಮ್ಮ ಮಿಸೈಲ್ ರೇಂಜ್‌ನಲ್ಲಿ ಭಾರತವಿದೆ ಎಂದಿದ್ದಾನೆ.
ಬಾಂಗ್ಲಾದೇಶಧ ಸಾರ್ವಭೌಮತ್ವದ ಮೇಲೆ ಭಾರತ ದಾಳಿ ಮಾಡಿದರೆ ಪಾಕಿಸ್ತಾನ ಸುಮ್ಮನೆ ಕೂರಲ್ಲ. ಬಾಂಗ್ಲಾದೇಶದ ಸ್ವಾತಂತ್ರ, ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ, ಅಥವಾ ಬಾಂಗ್ಲಾದೇಶವನ್ನು ಎದುರಿಸುವ ಧೈರ್ಯ ತೋರಿದರೆ ಪಾಕಿಸ್ತಾನ ಜನ, ಪಾಕಿಸ್ತಾನ ಸೇನೆ ಬಾಂಗ್ಲಾದೇಶದ ನೆರವಿಗೆ ನಿಲ್ಲಲಿದೆ. ಪಾಕಿಸ್ತಾನದ ಬಳಿ ಇರುವ ಮಿಸೈಲ್‌ಗೆ ಭಾರತ ಅತೀ ದೂರದಲ್ಲಿ ಇಲ್ಲ ಎಂದು ಉಸ್ಮಾನಿ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾರತದ ಅಖಂಢ ಭಾರತ ಪರಿಕಲ್ಪನೆಗೆ ಉಸ್ಮಾನಿ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶ ಪ್ರತ್ಯೇಕ ರಾಷ್ಟ್ರ. ಬಾಂಗ್ಲಾದೇಶಕ್ಕೆ ಎಲ್ಲಾ ನೆರವು ಪಾಕಿಸ್ತಾನ ನೀಡಲಿದೆ. ಬಾಂಗ್ಲಾದೇಶದಲ್ಲಿ ಭಾರತ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಭಾರತ ಒಂದು ಹೆಜ್ಜೆ ಇಟ್ಟರೆ ಪಾಕಿಸ್ತಾನ ಅನಿವಾರ್ಯವಾಗಿ ಯುದ್ಧಕ್ಕೆ ಇಳಿಯಲಿದೆ ಎಂದು ಉಸ್ಮಾನಿ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಶೇಕ್ ಹಸೀನಾ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಾಯಕ ಶರೀಪ್ ಹದಿಯನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಪ್ರತೀಕಾರವಾಗಿ ಬಾಂಗ್ಲಾದೇಶದಲ್ಲಿ ಭಾರಿ ಹಿಂಸಾಚಾರ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಯಲ್ಲಿ ಹಿಂದೂ ದೀಪು ಚಂದ್ರದಾಸ್‌ನ ಮೇಲೆ ದಾಳಿ ಮಾಡಿ ಹತ್ಯೆ ಮಾಡಲಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ದೀಪು ಚಂದ್ರದಾಸ್ ಮೇಲೆ ಉದ್ರಿಕ್ತರ ಗುಂಪು ಹಲ್ಲೆ ಮಾಡಿ ಹತ್ಯೆ ಮಾಡಿದೆ. ಪ್ರವಾದಿ ಮೊಹಮ್ಮದ್ ಅವಮಾನಿಸಿದ್ದಾನೆ ಎಂದು ಆರೋಪಿಸಿ ಹತ್ಯೆ ಮಾಡಲಾಗಿತ್ತು. ಆದರೆ ದೀಪು ಚಂದ್ರದಾಸ್ ಯಾವುದೇ ಅವಮಾನ ಮಾಡಿರಲಿಲ್ಲ. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಟಾರ್ಗೆಟ್ ಮಾಡಿ ನಡೆಯುತ್ತಿರುವ ಪ್ರತಿಭಟನೆ, ದಾಳಿಯಲ್ಲಿ ದೀಪು ಚಂದ್ರದಾಸ್ ಹತನಾಗಿದ್ದಾನೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ದಾಳಿ ವಿರೋಧಿಸಿ ಭಾರತದ ದೆಹಲಿಯಲ್ಲಿ ಬಾಂಗ್ಲಾದೇಶದ ಹೈಕಮಿಶನರ್ ಕಚೇರಿ ಮಂಭಾಗದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ