ಮುಖ್ಯವಾಗಿ ನಾವೆಲ್ಲಾ ಒಂದಾಗಿ ಕಾರ್ಯನಿರ್ವಹಿಸಬೇಕು. ಯುದ್ಧ ನಿಲ್ಲಿಸಲು ನಾವು 2ನೇ ಶಾಂತಿ ಸಮ್ಮೇಳನ ಆಯೋಜಿಸಬೇಕಿದೆ. ಇದಕ್ಕೆ ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ. ಭಾರತಕ್ಕೆ ಈಗಾಗಲೇ ಆಹ್ವಾನ ನೀಡಿದ್ದೇನೆ' ಎಂದ ಉಕ್ರೇನ್ ಅಧ್ಯಕ್ಷ ವೊಲೊಡಿ ಮಿರ್ ಜೆಲೆನ್‌ಸ್ಕಿ
ವಿಶ್ವಸಂಸ್ಥೆ(ಸೆ.26): ರಷ್ಯಾದೊಂದಿಗೆ ನಡೆಯುತ್ತಿರುವ ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿ 2ನೇ ಶಾಂತಿ ಸಮ್ಮೇಳನ ಆಯೋಜನೆಗೆ ಕೈಜೋಡಿಸುವಂತೆ ಭಾರತ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿ ಮಿರ್ ಜೆಲೆನ್‌ಸ್ಕಿ ಕರೆ ನೀಡಿದ್ದಾರೆ.
ಮಂಗಳವಾರ ವಿಶ್ವಸಂಸ್ಥೆ ಸಭೆಯಲ್ಲಿ ಮಾತನಾಡಿದ ಅವರು, 'ರಷ್ಯಾದ ಯುದ್ಧ ಸ್ಥಗಿತಗೊಳಿಸಲು ಮತ್ತು ಶಾಂತಿಯುತ ಗೊತ್ತುವಳಿಯತ್ತ ಸಾಗಲು ಒಗ್ಗಟ್ಟಿನ ಪ್ರಯತ್ನದ ಅವಶ್ಯಕತೆ ಇದೆ. ನಾವು ಪರಿಸ್ಥಿತಿಯನ್ನು ಪ್ರಾಮಾಣಿಕವಾಗಿ ಪರಿಶೀಲಿಸಿ ದರೆ ಮತ್ತು ನಿಜವಾಗಿಯೂ ರಷ್ಯಾ ಯುದ್ಧವನ್ನು ನಿಲ್ಲಿಸಬೇಕು ಎಂದಾದಲ್ಲಿ ನಾವೇನು ಮಾಡಬೇಕಿದೆ ಎಂಬುದು ನಮಗೆಲ್ಲರಿಗೂ ಗೊತ್ತು.
undefined
ಉಕ್ರೇನ್-ರಷ್ಯಾ ಶಾಂತಿಗೆ ನೆರವು: ಪ್ರಧಾನಿ ಮೋದಿ
ಮುಖ್ಯವಾಗಿ ನಾವೆಲ್ಲಾ ಒಂದಾಗಿ ಕಾರ್ಯನಿರ್ವಹಿಸಬೇಕು. ಯುದ್ಧ ನಿಲ್ಲಿಸಲು ನಾವು 2ನೇ ಶಾಂತಿ ಸಮ್ಮೇಳನ ಆಯೋಜಿಸಬೇಕಿದೆ. ಇದಕ್ಕೆ ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ. ಭಾರತಕ್ಕೆ ಈಗಾಗಲೇ ಆಹ್ವಾನ ನೀಡಿದ್ದೇನೆ' ಎಂದರು.