Unmarried Ladies Offers: ವಯಸ್ಸಾದ್ರೂ ಮದ್ವೆಯಾಗದವರಿಗೆ ಭರ್ಜರಿ ಗುಡ್​ ನ್ಯೂಸ್​: ಹಣದ ಜೊತೆ ಭಾರಿ ಕೊಡುಗೆ!

Published : Jul 04, 2025, 07:19 PM IST
Unmarried ladies offers

ಸಾರಾಂಶ

ಈಗ ಸರಿಯಾದ ವಯಸ್ಸಿನಲ್ಲಿ ಮದ್ವೆಯಾಗುವವರೇ ಕಮ್ಮಿ ಎನ್ನಬಹುದೇನೋ. ಆದರೆ 30 ವಯಸ್ಸು ದಾಟಿದರೂ ಮದುವೆಯಾಗದ ಹೆಣ್ಣುಮಕ್ಕಳಿಗೆ ಭರ್ಜರಿ ಗುಡ್​ ನ್ಯೂಸ್​ ಕೊಟ್ಟಿದೆ ಇಲ್ಲಿಯ ಸರ್ಕಾರ. ಏನಿದು ನೋಡಿ! 

ಇದೀಗ ಮದುವೆ ಎನ್ನೋದೇ ಈಗಿನ ಜನರೇಷನ್​ವರಿಗೆ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಅದರಲ್ಲಿಯೂ ಕರಿಯರ್​ ಅದೂ ಇದೂ ಎಂದೆಲ್ಲಾ ಹೆಚ್ಚಿನ ಹೆಣ್ಣುಮಕ್ಕಳು ಮದುವೆಯೆನ್ನುವ ಬಂಧನದಲ್ಲಿ ಸಿಲುಕಲು ರೆಡಿಯಾಗಿಲ್ಲ. ಅತ್ತ ಹುಡುಗಿಯರ ಡಿಮಾಂಡ್​ ಪೂರೈಸಲು ಆಗದೇ ಯುವಕರಿಗೆ ಮದುವೆ ಇಲ್ಲ ಎನ್ನುವ ಸ್ಥಿತಿ ಉಂಟಾಗಿದೆ. ಇತ್ತೀಚಿನ ದಿನಗಳಲ್ಲಿ 30 ವಯಸ್ಸು ದಾಟಿದ್ರೂ ಮದ್ವೆ ಆಗದೇ ಇರುವ ಗಂಡುಮಕ್ಕಳು ಮಾತ್ರವಲ್ಲದೇ ದೊಡ್ಡ ವರ್ಗದ ಹೆಣ್ಣುಮಕ್ಕಳೂ ಇದ್ದಾರೆ. ಇವರಿಗೆಲ್ಲಾ ಇಲ್ಲಿನ ಸರ್ಕಾರ ಭರ್ಜರಿ ಗುಡ್​ನ್ಯೂಸ್​ ಕೊಟ್ಟಿದೆ. ಆದರೆ ಇದು ಹೆಣ್ಣುಮಕ್ಕಳಿಗೆ ಮಾತ್ರ ಅನ್ವಯ ಆಗಲಿದೆ. ಅರ್ಥಾತ್​ 30 ವರ್ಷವಾದ್ರೂ ಮದ್ವೆಯಾಗದ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳೂ ಒಂದೂವರೆ ಸಾವಿರ ಡಾಲರ್​ ಹಣ, ಅಂದ್ರೆ ಸುಮಾರು ಒಂದೂವರೆ ಲಕ್ಷ ರೂಪಾಯಿ ಸಿಗಲಿದೆ. ಮಾತ್ರವಲ್ಲದೇ ಪ್ರತ್ಯೇಕ ಮೆಟ್ರೊ, ಕ್ಲಬ್​, ಬೀಚ್​.... ಇನ್ನು ಏನೇನೋ ಸೌಲಭ್ಯಗಳೂ ಇವೆ!

ಹಾಗೆಂದು ಇದಾಗಲೇ ಗ್ಯಾರೆಂಟಿಗಳನ್ನು ನಂಬಿ ಕೂತಿರುವವರು ಖುಷಿ ಪಡುವ ಅಗತ್ಯವಿಲ್ಲ. ಏಕೆಂದ್ರೆ ಇದು ಕರ್ನಾಟಕದಲ್ಲೂ ಅಲ್ಲ, ಅಷ್ಟೇ ಏಕೆ ಭಾರತದಲ್ಲಿಯೂ ಅಲ್ಲವೇ ಅಲ್ಲ. ಇಷ್ಟೆಲ್ಲಾ ಸೌಲಭ್ಯ ಇರೋದು ದುಬೈನಲ್ಲಿ! ದುಬೈನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಇಷ್ಟೊಂದು ಸೌಲಭ್ಯ ಇದೆ ಎನ್ನುವ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಮುಸ್ಲಿಂ ರಾಷ್ಟ್ರವಾಗಿರುವ ದುಬೈನ ಕಾನೂನಿನ ಬಗ್ಗೆ ಎಲ್ಲರಿಗೂ ತಿಳಿದದ್ದೇ ಬಿಡಿ. ಇಲ್ಲಿ ಅಪರಾಧ ಮಾಡಲು ಭಯಪಡುವಂಥ ಕಠಿಣ ಕಾನೂನುಗಳು ಚಾಲ್ತಿಯಲ್ಲಿವೆ. ಆದರೆ ಇದೇ ವೇಳೆ ಹೆಣ್ಣು ಮಕ್ಕಳ ರಕ್ಷಣೆಗೆ ದುಬೈನಲ್ಲಿ ಏನೆಲ್ಲಾ ಸೌಲಭ್ಯಗಳು ಇವೆ ಎಂದು ಈ ವಿಡಿಯೋದಲ್ಲಿ ತೋರಿಸಲಾಗಿದೆ.

30 ವರ್ಷ ವಯಸ್ಸಾಗಿದ್ರೂ ಮದುವೆಯಾಗದಿದ್ದರೆ ಮಾಸಿಕ ಹಣ, ಬೀಚ್​, ಕ್ಲಬ್​ ಮಾತ್ರವಲ್ಲದೇ ಹೆಣ್ಣು ಮಕ್ಕಳಿಗಾಗಿಯೇ ಫ್ಯಾಷನ್​ ಷೋಗಳೂ ಇವೆ. ಇಲ್ಲಿ ಎಲ್ಲಿಯೂ ಗಂಡಸರಿಗೆ ಅವಕಾಶ ಇಲ್ಲ. ಗಂಡಸರಿಗೆ ನೋ ಎಂಟ್ರಿ. ಇದು ಹೆಣ್ಣು ಮಕ್ಕಳಿಗೆ ದುಬೈನಲ್ಲಿ ಕೊಟ್ಟಿರುವ ಸ್ವಾತಂತ್ರ್ಯ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಆದರೆ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ, ಹೆಣ್ಣು ಮಕ್ಕಳು ಖುಷಿ ಪಡುತ್ತಿದ್ದಾರೆ ಎಂದುಕೊಂಡರೆ ಅದು ತಪ್ಪು. ಕಮೆಂಟ್​ ಬಾಕ್ಸ್​ ತುಂಬೆಲ್ಲಾ ನೆಗೆಟಿವ್​ ಕಮೆಂಟ್​ಗಳೇ ತುಂಬಿ ಹೋಗಿವೆ. ಇದು ಸ್ವಾತಂತ್ರ್ಯ ಅಲ್ಲ, ಹೆಣ್ಣು ಮಕ್ಕಳಿಗೆ ಬಂಗಾರದ ಪಂಜರ ಎಂದೇ ಬಹುತೇಕ ಮಂದಿ ಹೇಳುತ್ತಿದ್ದಾರೆ. ಇಸ್ಲಾಂ ರಾಷ್ಟ್ರವಾಗಿರುವ ದುಬೈನಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಸಿಗಲು ಸಾಧ್ಯವೇ ಇಲ್ಲ ಎನ್ನುವುದು ನೆಟ್ಟಿಗರ ಅಭಿಮತ.

ದುಬೈನಲ್ಲಿ ವಾಸಿಸುತ್ತಿರುವ ಕೆಲವು ಮಹಿಳೆಯರು ಕೂಡ ಈ ವಿಡಿಯೋದಲ್ಲಿಕಮೆಂಟ್​ ಮಾಡಿದ್ದು, ಇದು ಸಂಪೂರ್ಣ ಸುಳ್ಳು ಎಂದಿದ್ದಾರೆ. ಗಂಡನಿಂದ ಕಿರುಕುಳ ಅನುಭವಿಸುತ್ತಿದ್ದರೂ ಹೊರಗೆ ಬರಲಾರದಂಥ ಘನಘೋರ ಬದುಕನ್ನು ನಡೆಸುತ್ತಿರುವ ಮಹಿಳೆಯರು ಇದ್ದಾರೆ. ಈ ವಿಡಿಯೋದಲ್ಲಿ ತೋರಿಸುತ್ತಿರುವುದು ಬೂಟಾಟಿಕೆ. ಇಂಥ ಸೌಲಭ್ಯಗಳು ಇದ್ದರೂ ಅದು ಶ್ರೀಮಂತರಿಗೆ ಇದ್ದರಿಬಹುದು. ಆದರೆ ಬಹುತೇಕ ಮಹಿಳೆಯರ ಬದುಕು ಇಲ್ಲಿ ನರಕ ಎಂದು ಬರೆದುಕೊಂಡಿದ್ದಾರೆ. ಜಗತ್ತಿಗೆ ತಮ್ಮ ರಾಷ್ಟ್ರದ ಬಗ್ಗೆ ತೋರಿಸಿಕೊಳ್ಳಲು, ಉತ್ಪ್ರೇಕ್ಷೆಯಾಗಿ ಈ ವಿಡಿಯೋ ಮಾಡಲಾಗಿದೆ ಎಂದು ಹೇಳಲಾಗಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ