
ನವದೆಹಲಿ (ಮೇ.23): ಕೆಲವೊಮ್ಮ ಹಳ್ಳಿಗಳಲ್ಲಿ ಮಾತನಾಡುವ ಬರದಲ್ಲಿ 'ನನ್ನ ಎಂಜಲು ಎಲೆ ಎತ್ತೋಕು ಲಾಯಕ್ಕಿಲ್ಲ' ಅನ್ನೋ ಮಾತನ್ನು ಕೇಳುತ್ತೇವೆ. ಆದರೆ, ವಿಪರ್ಯಾಸ ನೋಡಿ ಇಂಗ್ಲೆಂಡ್‌ನಲ್ಲಿ ಮಹಿಳೆಯೊಬ್ಬಳು ತನ್ನ ಎಂಜಲು ಮಾರಿಯೇ ತಿಂಗಳಿಗೆ 41 ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾಳೆ. ಇದನ್ನು ಮಾರಿದ ಬಳಿಕ ಬಂದ ಹಣದಲ್ಲಿ ತನ್ನ ಸಾಲಗಳನ್ನೆಲ್ಲಾ ತೀರಿಸಿಕೊಂಡಿರುವ ಆಕೆ, ಇತ್ತೀಚೆಗೆ ಹೊಸ ಫ್ಲ್ಯಾಟ್‌ಅನ್ನೂ ಖರೀದಿ ಮಾಡಿದ್ದಾರೆ. ಕಾಲೇಜು ಶುಲ್ಕ ಹಾಗೂ ಜೀವನೋಪಾಯಕ್ಕಾಗಿ ಮ್ಯಾಂಚೆಸ್ಟರ್‌ನ ಟೆಸ್ಕೋದಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿರುವ ಬಯೋಮೆಡಿಕಲ್ ಸೈನ್ಸ್ ವಿದ್ಯಾರ್ಥಿನಿ ಲತೀಶಾ ಜೋನ್ಸ್, ಈಗ ತನ್ನ ಎಂಜಲುಗಳನ್ನು ಬಾಟಲ್‌ಗಳಲ್ಲಿ ತುಂಬಿ ಮಾರುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾಳೆ. ಇನ್ನೂ ಅಚ್ಚರಿಯ ಸಂಗತಿಯನ್ನು ಬಹಿರಂಗ ಮಾಡಿರುವ 22 ವರ್ಷದ ಮಹಿಳೆ, ತನ್ನ ಎಂಜಲು ಮಾತ್ರವಲ್ಲ, ಕಾಲ್ಬೆರಳ ಉಗುರುಗಳು ಒಂದು ವಾರ ನಿರಂತರವಾಗಿ ಉಪಯೋಗಿಸಿದ ಬೆಡ್ ಶೀಟ್‌ಗಳಂಥ ವಿಚಿತ್ರ ಬೇಡಿಕೆಗಳನ್ನು ಪೂರೈಸಿದರೆ, ಜನರು 300 ಪೌಂಡ್‌ನಿಂದ (30 ಸಾವಿರ ರೂಪಾಯಿ) 1500 ಪೌಂಡ್ (1.5 ಲಕ್ಷ ರೂಪಾಯಿ) ಕೊಡಲು ತಯಾರಿದ್ದಾರೆ ಎಂದೂ ಹೇಳಿದ್ದಾರೆ.
ಇದು ಆಕೆಗೆ ಎಲ್ಲಿಯತನಕ ಲಾಭ ತಂದಿದೆ ಎಂದರೆ, ಜೋನ್ಸ್ ಈಗ ತನ್ನ ಕೆಲಸಕ್ಕೆ ವಿದಾಯ ಹೇಳಿದ್ದು ಮಾತ್ರವಲ್ಲದೆ, ವಿಶ್ವವಿದ್ಯಾಲಯದಿಂದಲೂ ಹೊರಬಂದಿದ್ದಾಳೆ. ತನ್ನ ಎಂಜಲನ್ನು ಬಾಟಲ್‌ನಲ್ಲಿ ಹಾಕಿ ಮಾರುವುದೇ ಆಕೆಯ ಪೂರ್ಣಪ್ರಮಾಣದ ಉದ್ಯೋಗವಾಗಿದೆ. ಇದರ ಸಹಾಯದಿಂದಾಗಿ 11 ಸಾವಿರ ಪೌಂಡ್ ಸಾಲವನ್ನೂ ತೀರಿಸಿದ್ದಾಗಿ ಹೇಳಿರುವ ಆಕೆ, ಇತ್ತೀಚೆಗೆ ತನ್ನ ಹೆಸರಿನಲ್ಲಿ ಆಸ್ತಿಯನ್ನೂ ಖರೀದಿಸಿದ್ದಾಗಿ ತಿಳಿಸಿದ್ದಾಳೆ. 'ಇದೆಲ್ಲವೂ ಫ್ಲೂಕ್ ರೀತಿಯಲ್ಲಿ ಆರಂಭವಾಗಿತ್ತು. ಆದರೆ, ಈಗ ಎಂಜಲನ್ನು ಮಾರಾಟ ಮಾಡುವ ಉದ್ಯೋಗಕ್ಕೆ ಇತ್ತೀಚೆಗೆ ನಾಲ್ಕು ವರ್ಷವಾಗಿದೆ. ಓನ್ಲಿ ಫ್ಯಾನ್ಸ್ ಆಗಿ ಇದನ್ನು ಆರಂಭಿಸಿದೆ. ಅದರ ಮೂಲಕ ನನಗೆ ವಿಚಿತ್ರ ವಿನಂತಿಗಳು ಬರುತ್ತಿದ್ದವು. ನಾನು ಸ್ನಾನ ಮಾಡಿದ ಶವರ್ ವಾಟರ್‌ಗೂ ಬೇಡಿಕೆಗಳು ಬಂದಿದ್ದವು. ಇದನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎನ್ನುವುದು ಮೊದಲಿನಿಂದಲೂ ನನಗೆ ತಿಳಿದಿತ್ತು' ಎಂದು ಜೋನ್ಸ್ ಅವರ ಕಾಮೆಂಟ್‌ಗಳು ಮಿರರ್ ಪತ್ರಿಕೆ ವರದಿ ಮಾಡಿದೆ. ಅವಳು ಪಡೆದ ಅಸಾಮಾನ್ಯ ವಿನಂತಿಗಳನ್ನು ಪೂರೈಸಲು ಅವರು ಉದ್ಯಮವನ್ನು ಸಂಶೋಧಿಸಿದರು.
'ಒಂದು ಬಾಟಲ್ ಎಂಜಲು ಸಿಗಬಹುದೇ ಎಂದು ನನಗೆ ಮೊದಲಿಗೆ ಪ್ರಶ್ನಿಸಲಾಗಿತ್ತು. ಮೊದಲಿಗೆ ಇದನ್ನು ತಮಾಷೆಗಾಗಿ ಹೇಳುತ್ತಿದ್ದಾರೆ ಎಂದು ಅಂದುಕೊಂಡಿದ್ದೆ. ಕೊನೆಗೆ ಅದು ನಿಜ ಎಂದು ಗೊತ್ತಾಯಿತು' ಎಂದು ಹೇಳಿದ್ದಾರೆ. ಜೋನ್ಸ್ ತಮ್ಮ ಮೊದಲ ಒಂದು ಬಾಟಲ್ ಎಂಜಲನ್ನು 30 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು.
ಹಣೆ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಬೆಂಗಳೂರು ಮಹಿಳೆ: ಇದ್ಯಾವ ಸೀಮೆ ಪ್ರೀತಿ ಎಂದ ನೆಟ್ಟಿಗರು!
ಒಂದು ವಾರಗಳ ಕಾಲ ನಾನು ಮಲಗಿದ್ದ ಬೆಡ್ ಶೀಟ್, ಜಿಮ್‌ಗೆ ಬಳಸಿ ಸಂಪೂರ್ಣವಾಗಿ ಬೆವರಿನಿಂದ ಒದ್ದೆಯಾಗಿರುವ ಬಟ್ಟೆಗಳು, ಇನ್ನೂ ಹೇಳಬೇಕೆಂದರೆ ಸ್ನಾನ ಮಾಡಿದ ನೀರು, ಟೂತ್‌ಬ್ರಶ್, ಟೂತ್‌ಪೇಸ್ಟ್ ಉಗಿದಿದ್ದು.. ನೀವು ಛೀ.. ಎಂದು ಹೇಳುವಂಥ ಎಲ್ಲಾ ವಸ್ತುಗಳು ಬೇಕು ಎನ್ನುವ ಬೇಡಿಕೆ ನನಗೆ ಬಂದಿತ್ತು ಎಂದು ಲತೀಶಾ ಜೋನ್ಸ್ ಹೇಳಿದ್ದಾರೆ.
ಅಯ್ಯೋ ಪಾಪಿ: ನಮ್ಮ ರಾಷ್ಟ್ರಪಕ್ಷಿಯ ಗರಿಗಳನ್ನು ಕಿತ್ತು ಹಿಂಸೆ ನೀಡಿ ಕೊಂದೇ ಹಾಕ್ದ! ವಿಡಿಯೋ ವೈರಲ್
ಒಂದು ಬಾಟಲ್ ಎಂಜಲಿನಿಂದ ಒಂದೇ ಸಮಯಕ್ಕೆ ನಾನಿ ಗಳಿಸಿದ ಗರಿಷ್ಠ ಮೊತ್ತ ಎಷ್ಟೆಂದರೆ 1.5 ಲಕ್ಷ ರೂಪಾಯಿ. ನನಗೆ ಆ ವ್ಯಕ್ತಿಯ ಬಳಿ ಹಣ ಇತ್ತು ಅನ್ನೋದು ಗೊತ್ತಿತ್ತು. ಆತ ಹಣ ನೀಡಲು ಒಪ್ಪಿಕೊಂಡಿದ್ದಕ್ಕೆ ಖುಷಿಯಾಗಿತ್ತು. ಇದು ನನ್ನ ಜೀವನವಾಗಬಹುದೆಂದು ಎಂದಿಗೂ ಯೋಚನೆ ಮಾಡಿರಲಿಲ್ಲ. ಆದರೆ, ಈಗ ಖುಷಿ ಇದೆ ಎಂದು ಹೇಳುತ್ತಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ