ಟ್ರಂಪ್​ಗೆ ಪಾಕ್​ನಲ್ಲೂ ಒಬ್ಬಳು ರಹಸ್ಯ ಪುತ್ರಿ? ಮೀಡಿಯಾ ಮುಂದೆ ಹುಡುಗಿ ಹೇಳಿದ್ದೇನು? ವಿಡಿಯೋ ವೈರಲ್​

By Suchethana D  |  First Published Nov 8, 2024, 6:31 PM IST

ಡೊನಾಲ್ಡ್​ ಟ್ರಂಪ್​ ಅಧ್ಯಕ್ಷ ಆಗುತ್ತಿದ್ದಂತೆಯೇ ಪಾಕ್​ ಹುಡುಗಿಯೊಬ್ಬಳು ಅವರು ನನ್ನ ಅಪ್ಪ ಅಂದಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ. ಅವಳು ಹೇಳಿದ್ದೇನು? 
 


ಎರಡನೆಯ ಬಾರಿ ಅಧ್ಯಕ್ಷ ಸ್ಥಾನವನ್ನು ಏರುವ ಮೂಲಕ ಡೊನಾಲ್ಡ್​ ಟ್ರಂಪ್​ ಅಧಿಕಾರದ ಗದ್ದುಗೆ ಏರಿದ್ದಾರೆ. ಈ ಮೂಲಕ ಎರಡನೆಯ ಬಾರಿ ಅಧ್ಯಕ್ಷರಾಗಿರುವ ಎರಡನೆಯ ವ್ಯಕ್ತಿ ಎಂದು ಇತಿಹಾಸವನ್ನೂ ಸೃಷ್ಟಿಸಿದ್ದಾರೆ. ಭಾರಿ ಕುತೂಹಲ ಕೆರಳಿಸಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಎಂದೇ ಬಿಂಬಿತರಾಗಿರುವ ಡೊನಾಲ್ಡ್​ ಟ್ರಂಪ್​ ಜಯಭೇರಿ ಸಾಧಿಸಿದ್ದಾರೆ. ಎಲ್ಲೆಡೆ ಅವರ ಅಭಿಮಾನಿಗಳ ಹರ್ಷೋದ್ಗಾರ ಕೇಳಿಬರುತ್ತಿದೆ. ಟ್ರಂಪ್​ ಅಭಿಮಾನಿಗಳು ಭಾರಿ ಖುಷಿಯಲ್ಲಿ ಇರುವ ನಡುವೆಯೇ ಇತ್ತ ಸೋಷಿಯಲ್​ ಮಿಡಿಯಾದಲ್ಲಿ ಪಾಕಿಸ್ತಾನದ ಹುಡುಗಿಯೊಬ್ಬಳ ಹೇಳಿಕೆ ಹಲ್​ಚಲ್​ ಸೃಷ್ಟಿಸುತ್ತಿದೆ.  

ನಾನು ಡೊನಾಲ್ಡ್​ ಟ್ರಂಪ್​ ಅವರ ಮಗಳು ಎಂದು ಈ ಬಾಲಕಿ ಮಾಧ್ಯಮದವರ ಎದುರು ಹೇಳುತ್ತಿರುವ ವಿಡಿಯೋ ಇದಾಗಿದೆ. 2018ರ ವಿಡಿಯೋ ಇದಾಗಿದ್ದು, ಟ್ರಂಪ್​ ಅವರ ಅಧಿಕಾರದ ಗದ್ದುಗೆ ಏರಿದ ಬೆನ್ನಲ್ಲೇ ಮತ್ತೆ ವೈರಲ್​ ಆಗುತ್ತಿದೆ. ಉರ್ದುವಿನಲ್ಲಿ ಮಾತನಾಡುತ್ತಿರುವ ಹುಡುಗಿ, ನಾನು ಡೊನಾಲ್ಡ್ ಟ್ರಂಪ್ ಅವರ ನಿಜವಾದ ಮಗಳು. ಟ್ರಂಪ್ ನನ್ನ ತಂದೆ. ಮೆಲಾನಿಯಾ ನನ್ನನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ನನ್ನ ತಾಯಿ ಮತ್ತೆ ಪಾಕಿಸ್ತಾನಕ್ಕೆ ಕರೆದುಕೊಂಡು ಬಂದರು ಎಂದು ಹೇಳಿದ್ದಾಳೆ.  

Tap to resize

Latest Videos

undefined

ಎಲ್ಲಿಂದಲೋ ಬಂದಳು, ಮದುಮಕ್ಕಳಿಗೆ ಆಶೀರ್ವದಿಸಿ ಮಾಯವಾದಳು! ಬೆಂಗಳೂರಿನ ಕುತೂಹಲದ ಘಟನೆ ವಿಡಿಯೋ ವೈರಲ್‌

ನಾನು ಮುಸ್ಲಿಂ ಮತ್ತು ಪಂಜಾಬಿ ಮೂಲಕ್ಕೆ ಸೇರಿದವಳು. ಆದರೆ ನನ್ನ ತಂದೆ ಟ್ರಂಪ್‌ ಎಂದಿದ್ದಾರೆ. ಹಳೆಯ ವಿಡಿಯೋ ಅನ್ನು ಈಗ ಪುನಃ ವೈರಲ್​ ಆಗಿದೆ. ಇದನ್ನು  MeghUpdates ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್​ ಮಾಡಲಾಗಿದೆ. ಇದಕ್ಕೆ  “ನಾನು ಟ್ರಂಪ್‌ ಪುತ್ರಿ  ಎಂದು ಹೇಳಿಕೊಂಡಿರೋ ಪಾಕಿಸ್ತಾನಿ ಹುಡುಗಿ” ಎಂದು ಶೀರ್ಷಿಕೆ ಕೊಡಲಾಗಿದೆ. ಮೊನ್ನೆ ಅಂದ್ರೆ ನವೆಂಬರ್‌ 06 ರಂದು ಈ ವಿಡಿಯೋ ಶೇರ್​ ಮಾಡಲಾಗಿದ್ದು, ಇದಾಗಲೇ ಎರಡು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಭಾರತದ ವಕ್ಫ್​ ಮಂಡಳಿ ಗಲಾಟೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಮೆಂಟಿಗನೊಬ್ಬ ಭಾರತದಲ್ಲಿ ವಕ್ಫ್​ ಬೋರ್ಡ್​ನವರು ಎಲ್ಲಾ ಜಾಗ ನಮ್ಮದು ನಮ್ಮದು ಅಂತಿದ್ದರೆ,  ಪಾಕಿಸ್ತಾನದ ಯುವತಿ ಅಮೆರಿಕನೆ ನನ್ನ ಅಪ್ಪಂದು ಅಂತಿದ್ದಾಳಲ್ಲಪ್ಪ ಎಂದು ತಮಾಷೆ ಮಾಡಿದ್ದಾರೆ. 

ಅತ್ತ ಅಮೆರಿಕದಲ್ಲಿ,  ಡೊನಾಲ್ಡ್ ಟ್ರಂಪ್ ಅವರು ಈ ವರ್ಷ ತಮ್ಮ ಚುನಾವಣಾ ಪ್ರಚಾರ ಸಮಯದಲ್ಲಿ ಸಾಥ್ ನೀಡಿದ್ದ ಸೂಸಿ ವೈಲ್ಸ್ ಅವರನ್ನು ಶ್ವೇತಭವನದ ಮುಖ್ಯಸ್ಥರೆಂದು ಘೋಷಿಸಿದ್ದು, ಅಮೆರಿಕದಲ್ಲಿ ಈ ಪ್ರಭಾವಿ ಹುದ್ದೆಯನ್ನು ವಹಿಸುತ್ತಿರುವ ಮೊದಲ ಮಹಿಳೆಯಾಗಿದ್ದಾರೆ.ಯುನೈಟೆಡ್ ಸ್ಟೇಟ್ಸ್ ಇತಿಹಾಸದಲ್ಲಿ ಸೂಸಿ ಅವರು ಮೊದಲ ಮಹಿಳಾ ಸಿಬ್ಬಂದಿ ಮುಖ್ಯಸ್ಥರಾಗುವುದು ಅರ್ಹವಾದ ಗೌರವವಾಗಿದೆ. ಅವರು ನಮ್ಮ ದೇಶ ಹೆಮ್ಮೆಪಡುವಂತೆ ಕೆಲಸ ಮಾಡುತ್ತಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲಿ ಮಹಿಳೆಗೆ ಗೌರವ ಕೊಡುವ ನಡುವೆಯೇ ಇಲ್ಲಿ ಈ ಹುಡುಗಿ ಮಗಳು ಮಗಳು ಅನ್ನುತ್ತಿರುವುದು ನೆಟ್ಟಿಗರಿಗೆ ನಗು ತರಿಸುತ್ತಿದೆ. ಡಿಎನ್​ಎ ಟೆಸ್ಟ್​ ಮಾಡಿಸಿ ಅಂತಿದ್ದಾರೆ. 

ಬೆದರಿಕೆ ಸಲ್ಮಾನ್​ ರಕ್ಷಣೆಗೆ 70 ಸಿಬ್ಬಂದಿ, 4 ಲೇಯರ್​ ಭದ್ರತೆ: ಸರ್ಕಾರ ಖರ್ಚು ಮಾಡೋದೆಷ್ಟು ಗೊತ್ತಾ?

We Pakistanis are very fortunate to have Donald Trump's real daughter here with us. She can certainly pave the path of our progress and prosperity within no time 😂🙏 pic.twitter.com/0npraEcvoO

— ASLAM SHAHID (@iaslamshahid)
click me!