ಸಾವಿರ ವರ್ಷ ಹಳೆಯ ಚಿನ್ನದ ನಾಣ್ಯ ಪತ್ತೆ ಹಚ್ಚಿದ ಯುವಕರ ತಂಡ!

Published : Aug 24, 2020, 07:49 PM IST
ಸಾವಿರ ವರ್ಷ ಹಳೆಯ ಚಿನ್ನದ ನಾಣ್ಯ ಪತ್ತೆ ಹಚ್ಚಿದ ಯುವಕರ ತಂಡ!

ಸಾರಾಂಶ

ಉತ್ಖನನ ವೇಳೆ ಹಲವು ಅಚ್ಚರಿಗಳು ಬೆಳಕಿಗೆ ಬರುವುದು ಸಾಮಾನ್ಯ. ಇದೀಗ ಯುವಕರ ತಂಡವೊಂದು 1,100 ವರ್ಷಗಳ ಹಳೇ ಚಿನ್ನದ ನಾಣ್ಯವನ್ನು ಪತ್ತೆ ಹಚ್ಚಿದ್ದಾರೆ. ಇದೀಗ ಈ ಚಿನ್ನದ ನಾಣ್ಯದ ಹಿಂದಿನ ರೋಚಕ ಕತೆಯೂ ಬಯಲಾಗಿದೆ.

ಇಸ್ರೇಲ್(ಆ.24): ಹಳೇ ಕಾಲದ ವಸ್ತುಗಳು, ಹಳೇ ಕಾಲದ ನಾಣ್ಯಗಳು ಸೇರಿದಂತೆ ಹಲವು ಐತಿಹಾಸಿಕ ಕುರುಹುಗಳು ಸಾವಿರಾರು ವರ್ಷಗಳ ಹಿಂದಿನ ಇತಿಹಾಸವನ್ನು ಹೇಳುತ್ತದೆ. ಇದಕ್ಕಾಗಿ ಉತ್ಖನನ ಸೇರಿದಂತೆ ಹಲವು ವಿಧಾನದ ಮೂಲಕ ಇತಿಹಾಸದ ಕುರುಹುಗಳನ್ನು ಪತ್ತೆ ಹಚ್ಚಲಾಗುತ್ತದೆ. ಇದೀಗ ಇಸ್ರೇಲ್‌ನ ಸ್ವಯಂ ಸೇವಕ ಯುವಕರ ತಂಡವೊಂದು ಬರೋಬ್ಬರಿ 1,100 ವರ್ಷಗಳ ಹಳೆಯ 24 ಕ್ಯಾರೆಟ್ ಚಿನ್ನದ ನಾಣ್ಯಗಳನ್ನು ಪತ್ತೆ ಹಚ್ಚಿದೆ.

ಇಸ್ರೇಲ್‌, ಯುಎಇ ಐತಿಹಾಸಿಕ ಶಾಂತಿ ಒಪ್ಪಂದ

ಕಟ್ಟಡ ನಿರ್ಮಾಣಕ್ಕೂ ಮುನ್ನ ಯುವಕರ ತಂಡವೊಂದು ಉತ್ಖನನಕ್ಕೆ ಮುಂದಾಗಿದೆ. ಈ ವೇಳೆ 24 ಕ್ಯಾರೆಟ್ ಚಿನ್ನದ ನಾಣ್ಯಗಳು ಪತ್ತೆಯಾಗಿದೆ. ಮಾಹಿತಿ ತಿಳಿದು ಇಸ್ರೇಸ್ ಆ್ಯಂಟಿಕ್ವಿಟಿ ಇಲಾಖೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಬಳಿಕ ಈ ಚಿನ್ನದ ನಾಣ್ಯದ ಇತಿಹಾಸವನ್ನು ಬಹಿರಂಗಪಡಿಸಿದೆ.

ವಿಶ್ವದ ದುಬಾರಿ ಮಾಸ್ಕ್: ಈ ಮೊತ್ತಕ್ಕೆ 10 ಆಡಿ ಕಾರು: ಬಂಗಲೆಯನ್ನೇ ಖರೀದಿಸ್ಬಹುದು!

1,100 ವರ್ಷಗಳ ಹಿಂದೆ  ಈ ಸ್ಥಳದಲ್ಲಿ ವ್ಯಕ್ತಿಯ ಶವವನ್ನು ಹೂಳಲಾಗಿದೆ.  ಈ ವೇಳೆ ಚಿನ್ನದ ನಾಣ್ಯಗಳನ್ನು ಇಡಲಾಗಿದೆ. ಸುಮಾರು 425ಕ್ಕೂ ಹೆಚ್ಚಿನ ಚಿನ್ನದ ನಾಣ್ಯಗಳು ಈ ಸ್ಥಳದಲ್ಲಿ ಪತ್ತೆಯಾಗಿದೆ. 1,100 ವರ್ಷಗಳ ಹಿಂದಿನ ಚಿನ್ನದ ನಾಣ್ಯ ಇದಾಗಿದೆ ಎಂದು ಆ್ಯಂಟಿಕ್ವಿಟಿ ಇಲಾಖೆ ಹೇಳಿದೆ.

ಯುವಕರ ತಂಡ ಉತ್ಖನನದ ವೇಳೆ ವಿಶೇಷ ಚೀಲವನ್ನು ಪತ್ತೆ ಹಚ್ಚಿದೆ. ಬಳಿಕ ತೆಗೆದುನೋಡಿದಾಗ ಅಚ್ಚರಿ ಕಾದಿತ್ತು. ತಕ್ಷಣವೇ ಇಸ್ರೇಲ್ ಉತ್ಖನನ ವಿಭಾಗಕ್ಕೆ ಮಾಹಿತಿ ನೀಡಿದೆ. ಸಾವಿರ ವರ್ಷಗಳ ಹಿಂದಿನ ಇತಿಹಾಸ ಈ ಚಿನ್ನದ ನಾಣ್ಯದ ಮೂಲಕ ಅನಾವರಣಗೊಂಡಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲದಿದ್ದರೆ 3ನೇ ವಿಶ್ವಯುದ್ಧ : ಟ್ರಂಪ್‌ ಎಚ್ಚರಿಕೆ
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌