ವಿಟಮಿನ್ ಮಾತ್ರೆ ಬದಲು ಇಯರ್ ಬಡ್ಸ್ ನುಂಗಿದ ಮಹಿಳೆ, ಹೊರ ತೆಗೆಯಲು ಗಂಡನಿಗೆ 1 ವಾರದ ಟಾಸ್ಕ್!

By Contributor AsianetFirst Published Sep 13, 2023, 4:47 PM IST
Highlights

ಇತ್ತೀಚೆಗೆ ಅತೀಸಣ್ಣ, ನಾಜೂಕಾದ, ಅತ್ಯಾಧುನಿಕ ತಂತ್ರಜ್ಞಾನದ ಇಯರ್ ಬಡ್ಸ್ ಲಭ್ಯವಿದೆ. ಹೀಗೆ ದುಬಾರಿ ಬೆಲೆಯ ಇಯರ್ ಬಡ್ಸ್‌ನಿಂದ ಮಹಿಳೆಯೊಬ್ಬರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ವಿಟಮಿನ್ ಮಾತ್ರೆ ತೆಗೆದುಕೊಂಡ ಮಹಿಳೆ ಬಾಯಿಗೆ ಹಾಕುವ ಬದಲು, ಇಯರ್ ಬಡ್ಸ್ ನುಂಗಿ ನೀರು ಕುಡಿದ ಘಟನೆ ನಡೆದಿದೆ. 

ಸಾಲ್ಟ್ ಲೇಕ್ ಸಿಟಿ(ಸೆ.13) ಮಕ್ಕಳು ಏನೋ ಮಾಡಲು ಹೋಗಿ ಇನ್ಯಾವುದೋ ವಸ್ತು ನುಂಗಿದ ಘಟನೆ ಹಲವಿದೆ. ಎಣ್ಣೆ ಎಟಿನಲ್ಲಿ ಏನೆಲ್ಲಾ ನಂಗಿದ್ದಾರೆ ಅನ್ನೋದು ಕಲ್ಪನೆಗೂ ಮೀರಿದ್ದು. ಇದೀಗ ಇಲ್ಲೊಬ್ಬ ಮಹಿಳೆ ಯಾವುದೋ ಯೋಚನೆಯಲ್ಲಿ ವಿಟಮಿನ್ ಮಾತ್ರೆ ಬದಲು ಇಯರ್ ಬಡ್ಸ್ ನುಂಗಿ ನೀರು ಕುಡಿದಿದ್ದಾಳೆ. ಮಾತ್ರೆ ಕಹಿ ಬಾಯಿಗೆ ಆಗಬಾರದು ಎಂದು ಘಟಘಟ ಎಂದು ನೀರು ಕುಡಿದು ಮುಗಿಸಿದ್ದಾಳೆ. ಬಳಿಕ  ನೋಡಿದರೆ ಮಾತ್ರೈ ಕೆಯಲ್ಲೇ ಇದೆ.  ನುಂಗಿದ ಇಯರ್ ಬಡ್ಸ್ ಹೊರತೆಗಿದಿದ್ದು ಇನ್ನೊಂದು ರೋಚಕ ಕತೆ.

ಅಮೆರಿಕದ ಉತಾಹ್‌ನ ತನ್ನ ಬಾರ್ಕರ್‌ಗೆ ಬೆಳಗ್ಗೆ ವಾಕಿಂಗ್ ಮಾಡುವ ಅಭ್ಯಾಸ.  ಮೊದಲೇ ಸ್ವಲ್ಪ ವಿಳಂಬವಾಗಿತ್ತು. ಅವಸರ ಅವಸರದಲ್ಲಿ ನೀರಿನ ಬಾಟಲಿ, ವಿಟಮಿನ್ ಮಾತ್ರ ತೆಗೆದು ವಾಕಿಂಗ್ ಹೊರಟಿದ್ದಾಳೆ. ಈ ವೇಳೆ ಪತಿಯ ಆ್ಯಪಲ್ ಐಫೋನ್‌ನ  ಏರ್‌ಪೊಡ್ ತಗೆದುಕೊಂಡಿದ್ದಾಳೆ. ವಾಕಿಂಗ್ ಸಮಯದಲ್ಲಿ ಹಾಡು ಮ್ಯೂಸಿಕ್ ಕೇಳುತ್ತಾ ನಡೆದಾಡುವುದು ಸಾಮಾನ್ಯವಾಗಿದೆ.

 

ಹಲ್ಲುಜ್ಜುವಾಗ ಆಕಸ್ಮಿಕವಾಗಿ ಟೂತ್ ಬ್ರಶ್‌ನ್ನೇ ನುಂಗಿಬಿಟ್ಟ, ಆಮೇಲೆ ಏನಾಯ್ತು?

ಗೆಳತಿ ಜೊತೆ ಹರಟುತ್ತಾ ವಾಕಿಂಗ್ ಆರಂಭಿಸಿದ್ದಾರೆ.  ಕೆಲ ದೂರ ಸಾಗಿದ ಬಳಿಕ ಸಮಯ ಆಗಿದೆ. ನಾನು ವಿಟಮಿನ್ ಮಾತ್ರೆ ತೆಗೆದುಕೊಳ್ಳಲುಲು ತನ್ನ ಬಾರ್ಕರ್ ನಿರ್ಧರಿಸಿದ್ದಾರೆ.  ಗೆಳತಿ ಹಾಗೂ ತನ್ನ ಬಾರ್ಕರ್ ಒಂದೆಡೆ ನಿಂತಿದ್ದಾರೆ. ಇತ್ತ ವಿಟಮಿನ್ ಮಾತ್ರೆ ಒಪನ್ ಮಾಡಿದ ತನ್ನ ಬಾರ್ಕರ್ ನೀರಿನ ಬಾಟಲಿ ತೆಗೆದು ಘಟಘಟ ಎಂದು ನೀರು ಕುಡಿದಿದ್ದಾಳೆ.  

ಬಳಿಕ ಗೆಳತಿಗೆ ಬಾಯ್ ಬಾಯ್ ಹೇಳಿ ತನ್ನ ಮನೆಯತ್ತ ಹೊರಟಿದ್ದಾಳೆ. ಇನ್ನೇನು ನಡೆಯುತ್ತಾ ಸಾಗಬೇಕು ಅನ್ನುವಷ್ಟರಲ್ಲಿ ಕೈಯಲ್ಲಿ ಮಾತ್ರೆ ಇರುವುದು ಗೊತ್ತಾಗಿದೆ.  ಅರೆ ಈಗಷ್ಟೇಮಾತ್ರ ಕುಡಿದೆ ಮತ್ತೆ ಕೈಯಲ್ಲಿ ಹೇಗೆ ಬಂತು ಎಂದು ನೋಡಿದಾಗ ಅಚ್ಚರಿ ಜೊತೆಗೆ ಆತಂಕವೂ ಎದುರಾಗಿದೆ. ಕಾರಣ ವಿಟಮಿನ್ ಮಾತ್ರೆ ಕೈಯಲ್ಲಿ ಹಿಡಿದು, ಪತಿಯ ಏರ್‌ಪೊಡ್ ನುಂಗಿ ನೀರು ಕುಡಿದಿರುವುದು ಬೆಳಕಿಗೆ ಬಂದಿದೆ. 

ಅಷ್ಟರಲ್ಲಾಗಲೇ ಏರ್‌ಪೋಡ್ ಹೊಟ್ಟೆ ಸೇರಿದೆ. ರಿಂಗ್ ಟೋನ್, ಮ್ಯೂಸಿಕ್, ಹಾಡು ಎಲ್ಲವೂ ಹೊಟ್ಟೆಯೊಳಗೆ ಪ್ಲೇ ಆಗಲು ಶುರುವಾಗಿದೆ.  ಆದರೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಲಿಲ್ಲ. ಮನೆಗೆ ಮರಳಿದ ತನ್ನ ಬಾರ್ಕರ್ ನಡೆದ ಘಟನೆ ವಿವರಿಸಿದ್ದಾಳೆ. ಈ ವೇಳೆ ಪತಿ, ಈ ವಿಚಾರ ಎಲ್ಲೂ ಬಾಯ್ಬಿಡದಂತೆ ಸೂಚಿಸಿದ್ದಾನೆ. ಕಾರಣ ಇದು ವೈರಲ್ ಆಗಲಿದೆ,  ಪೆದ್ದು ಎಂದು ಮಾನ ಮೂರುಕಾಸಿಗೆ ಹರಾಜಾಗಲಿದೆ ಎಂದು ಸಲಹೆ ನೀಡಿದ್ದಾನೆ.

ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬೀಳುವ ಭಯ: ಮೊಬೈಲ್ ನುಂಗಿದ ಕೈದಿ

ಆದರೆ ಪತ್ನಿ ಟಿಕ್‌ಟಾಕ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಚಿತ್ರ ವಿಚಿತ್ರ ಕಮೆಂಟ್‌ಗಳೂ ಬಂದಿದೆ.  ಏರ್‌ಪೊಡ್ ಹೊರತೆಗೆಯುವುದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ಪ್ರತಿಕ್ರಿಯೆ ಕಮೆಂಟ್ ನೋಡಿದ ತನ್ನ ಬಾರ್ಕರ್‌ಗೆ ಆತಂಕ ಹೆಚ್ಚಾಗಿದೆ. ಹೀಗಾಗಿ ಹಲವು ವೈದ್ಯರನ್ನು ಸಂಪರ್ಕಿಸಿದ್ದಾರೆ. ಬಹುತೇಕ ವೈದ್ಯರು ಒಂದು ವಾರ ಕಾಯುವಂತೆ ಸೂಚಿಸಿದ್ದಾರೆ.  ಮಲದ ಮೂಲಕ ಹೊರಬರದೇ ಇದ್ದರೆ ಸರ್ಜರಿ ಮಾಡಬೇಕು ಎಂದಿದ್ದಾರೆ.

ಹೀಗಾಗಿ ಒಂದು ವಾರದಿಂದ ಪ್ರತಿ ದಿನ ತನ್ನ ಬಾರ್ಕರ್ ಮಲ ವಿಸರ್ಜನೆ ಮಾತ್ರವಲ್ಲ ತಪಾಸಣೆ ಮಾಡಬೇಕಾದ ಅನಿವಾರ್ಯತೆಯೂ ಎದುರಾಯಿತು. ಒಂದು ವಾರದೊಳಗೆ ಏರ್‌ಪೊಡ್ ನೈಸರ್ಗೀಕವಾಗಿ ಹೊಟ್ಟೆಯಿಂದ ಹೊರಬಂದಿದೆ.  ಈ ಕುರಿತು ಟಿಕ್‌ಟಾಕ್ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ನಿಮ್ಮ ಏರ್‌ಪಾಡ್ ಸರಿಯಾಗಿ ಕೆಲಸ ಮಾಡುತ್ತಿದೆಯಾ? ಮಾಡುತ್ತಿದೆ ಎಂದಾದರೆ ಅದನ್ನು ನಿಮ್ಮ ಪತಿ ಹೊರತು ಇನ್ಯಾರು ಕಿವಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

click me!