
ವಾಷಿಂಗ್ಟನ್(ಮಾ.20): ಮಾಸ್ಕ್ ಧರಿಸಲು ನಿರಾಕರಿಸಿದ ಮತ್ತು ಉಬರ್ ಚಾಲಕನ ಮೇಲೆ ಉದ್ದೇಶಪೂರ್ವಕವಾಗಿ ಕೆಮ್ಮಿದ್ದ ಮಹಿಳೆಗೆ ತಕ್ಕ ಶಿಕ್ಷೆಯಾಗಿದೆ.
ಕ್ಯಾಮೆರಾದಲ್ಲಿ ಕೃತ್ಯ ಮಾಡಿ ಸಿಕ್ಕಿಬಿದ್ದ ಅರ್ನಾ ಕಿಮಿಯೈ ಎಂಬ ಮಹಿಳೆಯ ಮೇಲೆ ಈಗ ದರೋಡೆ ಮತ್ತು ಹಲ್ಲೆ ಯತ್ನದಂತಹ ಅನೇಕ ದುಷ್ಕೃತ್ಯಗಳ ಆರೋಪ ಮಾಡಲಾಗಿದೆ.
ನೆಟ್ಟಿಗರ ಮನಗೆದ್ದ ಮ್ಯಾಜಿಕ್ ಕ್ಯಾಬ್... ಅಂಥಾ ವಿಶೇಷತೆ ಇದರಲ್ಲಿ ಏನಿದೆ?
ಸ್ಯಾನ್ ಫ್ರಾನ್ಸಿಸ್ಕೋ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಯಿಂದ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಇದೀಗ ಮಹಿಳೆಗೆ ದಂಡವನ್ನೂ ವಿಧಿಸಲಾಗಿದೆ. ಮಹಿಳೆ ಚಾಲಕನ ಮೇಲೆ ದುಷ್ಕೃತ್ಯ ಮತ್ತು COVID-19 ನಿಯಮ ಉಲ್ಲಂಘಿಸಿದ್ದರು.
ಕಿಮಿಯಾಯಿಗೆ 2,17,326 ದಂಡ ಮತ್ತು 16 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಉಬರ್, ಲಿಫ್ಟ್ ಮತ್ತು ಇತರ ಕ್ಯಾಬ್ ಕಂಪನಿಗಳು ಮಹಿಳೆ ತಮ್ಮ ಸೇವೆಗಳನ್ನು ಪಡೆಯುವುದನ್ನು ನಿಷೇಧಿಸಿವೆ.
ಇವತ್ತು ನಿಮ್ಮ ಕೊನೆಯ ದಿನ; ವಿಡಿಯೋ ಕಾಲ್ ಮಾಡಿ 3700 ಮಂದಿ ಉದ್ಯೋಗದಿಂದ ತೆಗೆದು ಹಾಕಿದ ಉಬರ್
ತನ್ನ ಇಬ್ಬರು ಸ್ನೇಹಿತರೊಂದಿಗೆ, ಕಿಮಿಯಾ ಸ್ಯಾನ್ ಫ್ರಾನ್ಸಿಸ್ಕೋದ ಸುಭಾಕರ್ ಖಡ್ಕಾ ಎಂಬ ಡ್ರೈವರ್ ಮೇಲೆ ಕೆಮ್ಮುತ್ತಿರುವ ವಿಡಿಯೋ ವೈರಲ್ ಅಗಿತ್ತು. ಮಾಸ್ಕ್ ಧರಿಸಲು ನಿರಾಕರಿಸಿ ಆಕೆ ಉದ್ದೇಶಪೂರ್ವಕವಾಗಿ ಹಾಗೆ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ