ಲಸಿಕೆ ಪಡೆದ ಗರ್ಭಿಣಿ ತಾಯಿಗೆ ಹುಟ್ಟಿದ ಮಗುವಿನಲ್ಲಿ ಪ್ರತಿಕಾಯ (ರೋಗನಿರೋಧಕ ಶಕ್ತಿ ಅಥವಾ ಆ್ಯಂಟಿಬಾಡಿ) ಪತ್ತೆಯಾಗಿರುವ ಮೊದಲ ಪ್ರಕರಣ ವರದಿಯಾಗಿದೆ.
ನ್ಯೂಯಾರ್ಕ್ (ಮಾ.19): ಕೊರೋನಾ ವೈರಸ್ ಬಾರದಂತೆ ಲಸಿಕೆ ಪಡೆದ ಗರ್ಭಿಣಿ ತಾಯಿಗೆ ಹುಟ್ಟಿದ ಮಗುವಿನಲ್ಲಿ ಪ್ರತಿಕಾಯ (ರೋಗನಿರೋಧಕ ಶಕ್ತಿ ಅಥವಾ ಆ್ಯಂಟಿಬಾಡಿ) ಪತ್ತೆಯಾಗಿರುವ ಮೊದಲ ಪ್ರಕರಣ ಅಮೆರಿಕದಲ್ಲಿ ವರದಿಯಾಗಿದೆ.
ಅಚ್ಚರಿಯೆಂದರೆ, ಈ ತಾಯಿ ಕೇವಲ ಮೊದಲ ಡೋಸ್ ಲಸಿಕೆ ಪಡೆದಿದ್ದರು. ಆದರೂ ಆಕೆಗೆ ಹುಟ್ಟಿದ ಹೆಣ್ಣುಮಗುವಿನಲ್ಲಿ ಆ್ಯಂಟಿಬಾಡಿ ಪತ್ತೆಯಾಗಿದೆ.
ಪ್ರಧಾನಿ ಮೋದಿ, ಭಾರತಕ್ಕೆ ಧನ್ಯವಾದ ಎಂದು ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್
ತಾಯಿಯಿಂದ ಮಗುವಿಗೆ ಹೊಕ್ಕಳಬಳ್ಳಿ ಮೂಲಕ ಕೊರೋನಾ ಪ್ರತಿಕಾಯಗಳು ವರ್ಗಾವಣೆಯಾಗುವ ಸಾಧ್ಯತೆ ತೀರಾ ಅಂದರೆ ತೀರಾ ಕಡಿಮೆ ಎಂದು ಇಲ್ಲಿಯವರೆಗೆ ತಜ್ಞರು ಹೇಳುತ್ತಿದ್ದರು. ಆದರೆ, ಅಮೆರಿಕದಲ್ಲಿ ಈ ಕುರಿತು ನಡೆದ ಅಧ್ಯಯನದಲ್ಲಿ ಪಾಲ್ಗೊಂಡ ಗರ್ಭಿಣಿ ಮಹಿಳೆ 36ನೇ ವಾರದಲ್ಲಿ ಮೊದಲ ಡೋಸ್ (ಮಾಡೆರ್ನಾ ಎಂಆರ್‌ಎನ್‌ಎ) ಲಸಿಕೆ ಪಡೆದು, 3 ವಾರದ ನಂತರ ಮಗುವಿಗೆ ಜನ್ಮ ನೀಡಿದಾಗ ಮಗುವಿನಲ್ಲಿ ಪ್ರತಿಕಾಯ ಪತ್ತೆಯಾಗಿದೆ. ನಂತರ ಪೂರ್ವನಿಗದಿಯಂತೆ 28 ದಿನಗಳಾದ ಮೇಲೆ ತಾಯಿ 2ನೇ ಡೋಸ್ ಪಡೆದಿದ್ದಾಳೆ.
ಆದರೆ, ಇದೊಂದೇ ಪ್ರಕರಣವನ್ನು ನೋಡಿ ತಾಯಿಯಿಂದ ಮಗುವಿಗೆ ಕೊರೋನಾ ಆ್ಯಂಟಿಬಾಡಿ ವರ್ಗಾವಣೆಯಾಗುತ್ತದೆ ಎಂದು ಹೇಳಲಾಗದು. ಈ ಕುರಿತು ಇನ್ನಷ್ಟುಅಧ್ಯಯನಗಳು ನಡೆಯಬೇಕು ಎಂದು ವೈದ್ಯರು ಹೇಳಿದ್ದಾರೆ.