Woman Isolated in Bathroom: ವಿಮಾನದ ಬಾತ್‌ರೂಂಲ್ಲೇ 3 ತಾಸು ಮಹಿಳೆ ಕ್ವಾರೆಂಟೈನ್‌!

By Kannadaprabha NewsFirst Published Jan 1, 2022, 3:00 AM IST
Highlights
  • ಯಾಣಿಸುತ್ತಿರುವಾಗ ಕೋವಿಡ್‌ ಪರೀಕ್ಷಾ ಫಲಿತಾಂಶ ‘ಪಾಸಿಟಿವ್‌’
  • 3 ಗಂಟೆಗಳ ಕಾಲ ಆಕೆ ಬಾತ್‌ರೂಮಿನಲ್ಲಿಯೇ ಕ್ವಾರೆಂಟೈನ್

ನ್ಯೂಯಾರ್ಕ್(ಜ.01): ಮಹಿಳೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಕೋವಿಡ್‌ ಪರೀಕ್ಷಾ ಫಲಿತಾಂಶ ‘ಪಾಸಿಟಿವ್‌’ ಬಂದ ಹಿನ್ನೆಲೆಯಲ್ಲಿ ವಿಮಾನದ ಬಾಥ್‌ರೂಮಿನಲ್ಲೇ ಮೂರು ಗಂಟೆಗಳ ಕಾಲ ಕ್ವಾರೆಂಟೈನ್‌ ಆದ ಘಟನೆ ಅಮೆರಿಕದಲ್ಲಿ ನಡೆದಿದೆ. ಮರಿಸಾ ಫೋಟಿಯೊ ಎಂಬ ಮಹಿಳೆ ಶಿಕಾಗೋದಿಂದ ಐಸ್‌ಲ್ಯಾಂಡಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ಇವರು ಎರಡು ಬಾರಿ ಆರ್‌ಸಿಪಿಟಿಆರ್‌ ಹಾಗೂ ಸುಮಾರು 5 ಬಾರಿ ರ್ಯಾಪಿಡ್‌ ಟೆಸ್ಟ್‌ ಮಾಡಿಕೊಂಡಾಗ ಕೋವಿಡ್‌ ನೆಗೆಟಿವ್‌ ಬಂದಿತ್ತು. ಅಲ್ಲದೇ ಇವರು ಕೋವಿಡ್‌ ಲಸಿಕೆಯನ್ನು ಹಾಗೂ ಬೂಸ್ಟರ್‌ ಡೋಸನ್ನು ಪಡೆದುಕೊಂಡಿದ್ದರು.

ಆದರೆ, ಸುಮಾರು ಒಂದುವರೆ ಗಂಟೆ ವಿಮಾನದಲ್ಲಿ ಪ್ರಯಾಣಿಸಿದ ನಂತರ ಫೋಟಿಯೊಗೆ ಗಂಟಲು ನೋವು ಆರಂಭವಾಯಿತು. ಕೂಡಲೇ ಅವರು ತಮ್ಮೊಂದಿಗಿದ್ದ ಕಿಟ್‌ ಬಳಸಿ ರಾರ‍ಯಪಿಡ್‌ ಟೆಸ್ಟ್‌ ಮಾಡಿುಕೊಂಡಾಗ ಅವರಿಗೆ ಕೋವಿಡ್‌ ಪಾಸಿಟಿವ್‌ ಬಂತು. ಕೂಡಲೇ ಈ ಕುರಿತು ವಿಮಾನ ಸಿಬ್ಬಂದಿಗೆ ತಿಳಿಸಲಾಯಿತು. ವಿಮಾನ ಪೂರ್ತಿ ಜನರಿರುವ ಕಾರಣ ಫೋಟಿಯೊಗೆ ಇತರರಿಂದ ದೂರ ಏಕಾಂಗಿಯಾಗಿ ಸೀಟನ್ನು ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ 3 ಗಂಟೆಗಳ ಕಾಲ ಆಕೆ ಬಾತ್‌ರೂಮಿನಲ್ಲಿಯೇ ಇದ್ದು, ವಿಮಾನದ ಎಲ್ಲ ಪ್ರಯಾಣಿಕರು ಇಳಿದ ನಂತರ ಹೊರಬಂದಿದ್ದಾರೆ.

ತೀವ್ರತೆ ಕಮ್ಮಿ, ಆಸ್ಪತ್ರೆಗೆ ಹೋದರೂ ಬೇಗ ಹೊರಗೆ ಬರ್ತಾರೆ

ವಿಮಾನ ನಿಲ್ದಾಣದಲ್ಲಿ ಮತ್ತೆ ನಡೆಸಿದ ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದ್ದು ಸಮೀಪದ ಹೊಟೇಲಿನಲ್ಲಿ 10 ದಿನಗಳ ಕಾಲ ಇವರನ್ನು ಕ್ವಾರೆಂಟೈನ್‌ ಮಾಡಲಾಗಿದೆ.

ಕಳೆದೊಂದು ವಾರದಲ್ಲಿ ಸರಾಸರಿ 2.65 ಲಕ್ಷ ಕೋವಿಡ್‌ ಕೇಸ್‌ಗಳು ಪತ್ತೆಯಾಗುತ್ತಿರುವ ಅಮೆರಿಕದಲ್ಲಿ ಬುಧವಾರ ಕೊರೋನಾ ವೈರಸ್‌ನ ಮಹಾ ಸ್ಫೋಟ ಸಂಭವಿಸಿದೆ. ಅತೀ ವೇಗವಾಗಿ ವ್ಯಾಪಿಸುವ ಕೊರೋನಾ ಹೊಸ ರೂಪಾಂತರಿ ಡೆಲ್ಟಾಮತ್ತು ಒಮಿಕ್ರೋನ್‌ ಪರಿಣಾಮ ಬುಧವಾರ ಒಂದೇ ದಿನ ಅಮೆರಿಕದಲ್ಲಿ ಈವರೆಗಿನ ದಾಖಲೆಯ 4.88 ಲಕ್ಷ ಕೋವಿಡ್‌ ಕೇಸ್‌ಗಳು ಪತ್ತೆಯಾಗಿವೆ. ಮಂಗಳವಾರವಷ್ಟೇ 2.67 ಲಕ್ಷ ಕೇಸ್‌ನಿಂದ ಒಂದೇ ದಿನಕ್ಕೆ ದೈನಂದಿನ ಕೋವಿಡ್‌ ಪ್ರಕರಣಗಳು 5 ಲಕ್ಷದ ಸಮೀಪಕ್ಕೆ ಜಿಗಿದಿದೆ. ಕಳೆದೊಂದು ವಾರದಲ್ಲಿ ದೇಶಾದ್ಯಂತ 20 ಲಕ್ಷಕ್ಕಿಂತ ಹೆಚ್ಚು ಕೇಸ್‌ಗಳು ದಾಖಲಾಗುತ್ತಿದ್ದು, ಈ ಪೈಕಿ 15 ರಾಜ್ಯಗಳು ಮತ್ತು ಪ್ರಾಂತ್ಯಗಳು ಈ ಹಿಂದಿನ ವಾರದಲ್ಲಿ ದಾಖಲಾಗಿದ್ದಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಆದಾಗ್ಯೂ, ಸೋಂಕಿಗೆ ತುತ್ತಾದವರಲ್ಲಿ ವೈರಸ್‌ ತೀವ್ರತೆ ಈ ಹಿಂದಿನಂತಿಲ್ಲ. ಜತೆಗೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವು ಶೇ.11ರಷ್ಟುಮಾತ್ರ ಹೆಚ್ಚಿದೆ. ಅಲ್ಲದೆ ಕಳೆದ 2 ವಾರಗಳಲ್ಲಿ ಕೋವಿಡ್‌ಗೆ ಬಲಿಯಾಗುವವರ ಪ್ರಮಾಣವೂ ಸ್ವಲ್ಪ ಸರಿಹಾದಿಗೆ ಬಂದಿದೆ ಎನ್ನಲಾಗಿದೆ.

ವಿಶ್ವಾದ್ಯಂತ ದಾಖಲೆಯ ಏರಿಕೆ:

ಪಂಚಾದ್ಯಂತ ಕೊರೋನಾ ವೈರಸ್‌ ಮಹಾ ಸ್ಫೋಟ ಉಂಟಾಗಿದೆ. ಸೋಮವಾರ ಒಂದೇ ದಿನ ವಿಶ್ವಾದ್ಯಂತ ದಾಖಲೆಯ 14.4 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. 2019ರಲ್ಲಿ ಮೊದಲ ಬಾರಿ ಕೋವಿಡ್‌ ಕೇಸು ಪತ್ತೆಯಾದ ಬಳಿಕ ಯಾವುದೇ ಒಂದು ದಿನದಲ್ಲಿ ಇಷ್ಟುಕೇಸು ಪತ್ತೆಯಾಗಿದ್ದು ಇದೇ ಮೊದಲು. ಇಷ್ಟೊಂದು ಪ್ರಮಾಣದಲ್ಲಿ ಕೇಸುಗಳು ಏರಲು ಕೋವಿಡ್‌ ಹೊಸ ತಳಿ ಒಮಿಕ್ರೋನ್‌ ಕಾರಣ ಎಂದು ಹೇಳಲಾಗಿದೆ. ತೀವ್ರತೆ ಕಡಿಮೆ ಇದ್ದರೂ ಅತ್ಯಂತ ಸಾಂಕ್ರಾಮಿಕ ಎಂಬ ಕುಖ್ಯಾತಿ ಹೊಂದಿರುವ ಒಮಿಕ್ರೋನ್‌ ರೂಪಾಂತರಿ ಕೋವಿಡ್‌ ವೈರಸ್‌, ಜಾಗತಿಕ ಮಟ್ಟದಲ್ಲಿ ತನ್ನ ಹಾವಳಿಯನ್ನು ಸಾಬೀತುಪಡಿಸಿದೆ.

ಪತ್ತೆಯಾದ ಎಲ್ಲಾ ಪ್ರಕರಣಗಳು ಒಮಿಕ್ರೋನ್‌ ಎಂದು ದೃಢಪಟ್ಟಿಲ್ಲವಾದರೂ, ಸೋಂಕಿನ ಪ್ರಮಾಣ ಏರಿಕೆಗೆ ಒಮಿಕ್ರೋನ್‌ ಕಾರಣ ಎಂಬುದನ್ನು ಅಂಕಿ ಅಂಶಗಳು ಸಾಬೀತುಪಡಿಸಿವೆ. ಕಳೆದ 1 ವಾರದಲ್ಲಿ ನಿತ್ಯ ಸರಾಸರಿ 8.41 ಲಕ್ಷ ಪ್ರಕರಣಗಳು ವರದಿಯಾಗಿವೆ. ನ.24ರಂದು ಆಫ್ರಿಕಾದಲ್ಲಿ ಮೊದಲ ಒಮಿಕ್ರೋನ್‌ ಪತ್ತೆಯಾದ ವಾರಕ್ಕೆ ಹೋಲಿಸಿದರೆ, ಸರಾಸರಿ ವಾರದ ಕೋವಿಡ್‌ ಪ್ರಮಾಣದಲ್ಲಿ ಶೇ.49ರಷ್ಟುಏರಿಕೆಯಾದಂತಾಗಿದೆ.

click me!