US Wars: ಕಾಲು ಶತಮಾನದಲ್ಲಿ 10 ದೇಶಗಳ ಮೇಲೆ ಅಮೆರಿಕ ದಾಳಿ; 47 ಲಕ್ಷ ಜನರ ಸಾವು, 8 ಲಕ್ಷ ಕೋಟಿ ಡಾಲರ್ ಖರ್ಚು!

Published : Mar 04, 2026, 06:03 AM IST
US Wars Since 2001 Caused 4.7 Million Deaths and Cost 8 Trillion Dollars

ಸಾರಾಂಶ

21ನೇ ಶತಮಾನದಲ್ಲಿ ಅಮೆರಿಕ 10 ದೇಶಗಳ ಮೇಲೆ ಯುದ್ಧ ಮಾಡಲು 8 ಟ್ರಿಲಿಯನ್ ಡಾಲರ್ ಖರ್ಚು ಮಾಡಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ. ಈ ಸೇನಾ ಕಾರ್ಯಾಚರಣೆಗಳಿಂದ ನೇರವಾಗಿ ಮತ್ತು ಪರೋಕ್ಷವಾಗಿ ಸುಮಾರು 47 ಲಕ್ಷ ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.

ನ್ಯೂಯಾರ್ಕ್: ಸೋವಿಯತ್ ಒಕ್ಕೂಟದ ಪತನದ ನಂತರ ಶುರುವಾದ 21ನೇ ಶತಮಾನದ ಮೊದಲ ಕಾಲು ಭಾಗ ಮುಗಿಯುವಷ್ಟರಲ್ಲಿ, ಅಮೆರಿಕ ಬರೋಬ್ಬರಿ 10 ದೇಶಗಳ ಮೇಲೆ ದಾಳಿ ನಡೆಸಿದೆ. ಇದಕ್ಕಾಗಿ ಕೋಟ್ಯಂತರ ಡಾಲರ್ ಖರ್ಚು ಮಾಡಿದೆ. 2001ರಿಂದ ಆರಂಭವಾಗಿ 2026ರಲ್ಲಿ ಇರಾನ್ ಮೇಲೆ ನಡೆದ ದಾಳಿಯವರೆಗಿನ ಸುದೀರ್ಘ ಪಟ್ಟಿಯನ್ನು ಅಂತರಾಷ್ಟ್ರೀಯ ಮಾಧ್ಯಮ ಅಲ್ ಜಝೀರಾ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ಅಧಿಕಾರಕ್ಕೆ ಬಂದ ನಾಲ್ವರು ಅಧ್ಯಕ್ಷರ ಅವಧಿಯಲ್ಲಿ ಈ ದಾಳಿಗಳು ನಡೆದಿವೆ ಎಂದು ವರದಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಇಸ್ರೇಲ್ ಜಗತ್ತಿನ ತಂದೆ, ಮುಸ್ಲಿಂ ರಾಷ್ಟ್ರಗಳು ಶರಣಾಗಬೇಕು! ಪಾಕ್ ತಜ್ಞ ಸಾಜಿದ್ ತರಾರ್ ಸ್ಫೋಟಕ ಹೇಳಿಕೆ

ಅಫ್ಘಾನಿಸ್ತಾನ, ಇರಾಕ್, ಯೆಮೆನ್, ಪಾಕಿಸ್ತಾನ, ಸೊಮಾಲಿಯಾ, ಲಿಬಿಯಾ, ಸಿರಿಯಾ, ವೆನೆಜುವೆಲಾ, ನೈಜೀರಿಯಾ ಮತ್ತು ಇರಾನ್ ದೇಶಗಳ ಮೇಲೆ ಅಮೆರಿಕ ಮುಖ್ಯವಾಗಿ ಸೇನಾ ದಾಳಿಗಳನ್ನು ನಡೆಸಿದೆ. ಇದರಲ್ಲಿ ಡ್ರೋನ್ ದಾಳಿಯಿಂದ ಹಿಡಿದು ದೊಡ್ಡ ಮಟ್ಟದ ಸೇನಾ ಕಾರ್ಯಾಚರಣೆಗಳೂ ಸೇರಿವೆ. ಬ್ರೌನ್ ಯೂನಿವರ್ಸಿಟಿಯ 'ವ್ಯಾಟ್ಸನ್ ಇನ್‌ಸ್ಟಿಟ್ಯೂಟ್' ನಡೆಸಿದ ಅಧ್ಯಯನದ ಪ್ರಕಾರ, ಈ ಯುದ್ಧಗಳಲ್ಲಿ ನೇರ ದಾಳಿಯಿಂದಲೇ 9,40,000 ಜನರು ಸಾವನ್ನಪ್ಪಿದ್ದಾರೆ. ಆದರೆ, ದಾಳಿಯ ನಂತರ ಉಂಟಾದ ಭೀಕರ ಬರಗಾಲ, ಚಿಕಿತ್ಸೆ ಸಿಗದೆ ಮತ್ತು ಗಂಭೀರ ಕಾಯಿಲೆಗಳಿಂದ ಮೃತಪಟ್ಟವರನ್ನೂ ಸೇರಿಸಿದರೆ, ಒಟ್ಟು ಸಾವಿನ ಸಂಖ್ಯೆ 45 ಲಕ್ಷದಿಂದ 47 ಲಕ್ಷದ ನಡುವೆ ಇದೆ.

ಇದನ್ನೂ ಓದಿ: ಟ್ರಂಪ್‌ಗೆ ನೆತನ್ಯಾಹು ಬ್ರೈನ್‌ವಾಶ್‌? ಇರಾನ್ ಮೇಲಿನ ಅಮೆರಿಕದ ದಾಳಿಯ ಹಿಂದೆ ಅಸಲಿ ಮಾಸ್ಟರ್‌ಮೈಂಡ್ ಯಾರು? ಶಾಕಿಂಗ್ ವರದಿ ಬಹಿರಂಗ!

ಕಳೆದ ಕಾಲು ಶತಮಾನದಲ್ಲಿ ಅಮೆರಿಕ ಯುದ್ಧಗಳಿಗಾಗಿ ಸುಮಾರು 5.8 ಟ್ರಿಲಿಯನ್ ಡಾಲರ್ ಖರ್ಚು ಮಾಡಿದೆ. ಈ ಯುದ್ಧಗಳಲ್ಲಿ ಭಾಗವಹಿಸಿದ ಸೈನಿಕರ ಚಿಕಿತ್ಸೆ ಮತ್ತು ಇತರ ಸೌಲಭ್ಯಗಳಿಗಾಗಿ ಇನ್ನೂ 2.2 ಟ್ರಿಲಿಯನ್ ಡಾಲರ್ ವೆಚ್ಚವಾಗುವ ನಿರೀಕ್ಷೆಯಿದೆ. ಇದರೊಂದಿಗೆ, ದಾಳಿಗಳಿಗಾಗಿ ಅಮೆರಿಕ ಮಾಡಿದ ಒಟ್ಟು ಖರ್ಚು 8 ಲಕ್ಷ ಕೋಟಿ ಡಾಲರ್‌ಗೆ ಏರಲಿದೆ. 2026ರ ಆರಂಭದಲ್ಲಿ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಗಳು ಪಶ್ಚಿಮ ಏಷ್ಯಾದಲ್ಲಿ ಮತ್ತೊಮ್ಮೆ ದೊಡ್ಡ ಯುದ್ಧದ ಭೀತಿಯನ್ನು ಸೃಷ್ಟಿಸಿರುವ ಹೊತ್ತಲ್ಲೇ ಈ ಅಂಕಿಅಂಶಗಳು ಹೊರಬಿದ್ದಿವೆ. ಭಯೋತ್ಪಾದನೆಯನ್ನು ಮಟ್ಟಹಾಕುವ ಹೆಸರಿನಲ್ಲಿ ಅಮೆರಿಕ ನಡೆಸಿದ ಈ ಸೇನಾ ಕಾರ್ಯಾಚರಣೆಗಳು ಹಲವು ದೇಶಗಳಲ್ಲಿ ತೀವ್ರ ರಾಜಕೀಯ ಅಸ್ಥಿರತೆಗೆ ಕಾರಣವಾಗಿವೆ. ಇದರಿಂದಾಗಿ ಈ ದೇಶಗಳಲ್ಲಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ ಎಂದೂ ವರದಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕಕ್ಕೆ ತಲೆನೋವಾದ ಇರಾನ್‌ ಅಗ್ಗದ ಅಸ್ತ್ರಗಳು
ಖಮೇನಿ ಬೇಟೆಗಾಗಿ ಇರಾನ್‌ನಲ್ಲಿನ ಟ್ರಾಫಿಕ್‌ ಕ್ಯಾಮೆರಾಗಳನ್ನೇ ಹ್ಯಾಕ್‌ ಮಾಡಿತ್ತು ಇಸ್ರೇಲ್‌!