
ವಾಷಿಂಗ್ಟನ್: ‘ವಿದೇಶಗಳ ಕೌಶಲಯುತ ನೌಕರರು ಅಮೆರಿಕಕ್ಕೆ ಬಂದು, ಅಮೆರಿಕನ್ನರಿಗೆ ತರಬೇತಿ ನೀಡಿ ತಮ್ಮ ದೇಶಕ್ಕೆ ಹಿಂದಿರುಗಬೇಕು. ಅಮೆರಿಕನ್ನರ ಉದ್ಯೋಗಗಳನ್ನು ಅವರು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಅಮೆರಿಕದ ವಿತ್ತ ಸಚಿವ ಸ್ಕಾಟ್ ಬೆಸೆಂಟ್ ಹೇಳಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಟ್ರಂಪ್ ದೂರದೃಷ್ಟಿಯಂತೆ, ವಿದೇಶಗಳ ಕೌಶಲ್ಯಯುತ ನೌಕರರು ಅಮೆರಿಕಕ್ಕೆ ಬಂದು ಇಲ್ಲಿ 3,5 ಅಥವಾ 7 ವರ್ಷಗಳ ಕಾಲ ಇರಬಹುದು. ಆದರೆ ಈ ಅವಧಿಯಲ್ಲಿ ಅಮೆರಿಕನ್ನರೇ ಆ ಕೆಲಸಗಳನ್ನು ನಿರ್ವಹಿಸುವಂತೆ ಅವರಿಗೆ ಸೂಕ್ತ ತರಬೇತಿ ನೀಡಬೇಕು. ಆ ಬಳಿಕ ತಮ್ಮ ದೇಶಕ್ಕೆ ಹಿಂದಿರುಗಬೇಕು. ಸದ್ಯಕ್ಕೆ ಉನ್ನತ ಹುದ್ದೆಗಳನ್ನು ನಿಭಾಯಿಸುವ ಸಾಮರ್ಥ್ಯ ಅಮೆರಿಕನ್ನರಲ್ಲಿಲ್ಲ. ಹಾಗಾಗಿ ಎಚ್-1ಬಿ ವೀಸಾ ಸುಧಾರಣೆಗೆ ಮುಂದಾಗಿದ್ದೇವೆ’ ಎಂದಿದ್ದಾರೆ.
ಇತ್ತೀಚೆಗೆ ಇದೇ ವಿಚಾರವಾಗಿ ಮಾತಾಡಿದ್ದ ಟ್ರಂಪ್, ‘ನಮ್ಮಲ್ಲಿ ಸದ್ಯಕ್ಕೆ ಪ್ರತಿಭೆಗಳಿಲ್ಲ. ವಿದೇಶಗಳಿಂದ ಅವರನ್ನು ಕರೆತಂದು ಅವರಿಂದ ಅಮೆರಿಕನ್ನರಿಗೆ ತರಬೇತಿ ಕೊಡಿಸಬೇಕು’ ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ