
ಕೌಲಾಲಂಪುರ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೇಶದ ಸರ್ಕಾರಿ ವ್ಯವಸ್ಥೆಯಲ್ಲಿ ವೆಚ್ಚ ಕಡಿತ ಆಂದೋಲನ ಆರಂಭಿಸಿದ್ದಾರೆ. ಇದರ ಅಂಗವಾಗಿ 1,300ಕ್ಕೂ ಅಧಿಕ ನೌಕರರನ್ನು ಕೆಲಸದಿಂದ ವಜಾಗೊಳಿಸಲು ವಿದೇಶಾಂಗ ಇಲಾಖೆ ಮುಂದಾಗಿದೆ. ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ 2145 ನೌಕರರಿಗೆ ಗೇಟ್‌ಪಾಸ್ ನೀಡಲಿದೆ ಎಂದು ಗೊತ್ತಾಗಿದೆ.
ವಿದೇಶಾಂಗ ಇಲಾಖೆಯು 1,107 ನಾಗರಿಕ ಸೇವೆ ಅಧಿಕಾರಿಗಳು ಮತ್ತು 246 ವಿದೇಶಿ ಸೇವಾ ಅಧಿಕಾರಿಗಳಿಗೆ ನೋಟಿಸ್ ನೀಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜತೆಗೆ, ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿ, ಇಲಾಖೆಯನ್ನು ಸಮರ್ಥಗೊಳಿಸಲು ಇಂಥ ಕ್ರಮ ಕೈಗೊಂಡ ಟ್ರಂಪ್ ಆಡಳಿತವನ್ನು ಶ್ಲಾಘಿಸಿದ್ದಾರೆ.
ನಾಸಾದಿಂದ ಕೊಕ್:
ಟ್ರಂಪ್ ವೆಚ್ಚ ಕಡಿತ ನೀತಿಯನ್ವಯ ನಾಸಾ, 2,145 ನೌಕರಿ ಕಡಿತಕ್ಕೆ ಮುಂದಾಗಿದೆ. ನಾಸಾ ಸುಮಾರು 18 ಸಾವಿರ ನೌಕರರನ್ನು ಹೊಂದಿದೆ. ಇವರಲ್ಲಿ ಸಂಸ್ಥೆಯ ಸೂಚನೆಯಂತೆ ಸುಮಾರು 2415 ಅಧಿಕಾರಿಗಳು ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ನಿಲ್ಲಿಸಿದ್ದೇ ನಾನು
ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ನಿಲ್ಲಿಸಿದ್ದೇ ನಾನು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಪುನರುಚ್ಚರಿಸಿದ್ದಾರೆ. ಒಂದು ವೇಳೆ ನೀವು ಇದೇ ರೀತಿ ಯುದ್ಧ ಮುಂದುವರಿಸಿದ್ದೇ ಆದಲ್ಲಿ ನಾನು ನಿಮ್ಮ ಜತೆಗೆ ವ್ಯಾಪಾರ ಬಂದ್ ಮಾಡುವುದಾಗಿ ಎಂದು ಬೆದರಿಕೆ ಹಾಕಿದೆ. ಇದರಿಂದ ಅವರು ಯುದ್ಧ ನಿಲ್ಲಿಸಿದರು ಎಂದು ಹೇಳಿದರು.
ಭಾರತ, ಪಾಕಿಸ್ತಾನ, ಸರ್ಬಿಯಾ, ಕೊಸೊವೋ, ರ್‍ವಾಂಡಾ ಮತ್ತು ಕಾಂಗೋ ಮತ್ತಿತರ ದೇಶಗಳು ಗಂಭೀರ ಯುದ್ಧದ ಹೊಸ್ತಿಲಲ್ಲಿದ್ದವು. ನಾವು ಹಲವು ಯುದ್ಧಗಳನ್ನು ತಡೆದಿದ್ದೇವೆ. ಇವುಗಳಲ್ಲಿ ಭಾರತ-ಪಾಕ್ ನಡುವಿನ ಯುದ್ಧ ಮಹತ್ವದ್ದು. ಈ ಎರಡೂ ದೇಶಗಳು ಅಣ್ವಸ್ತ್ರ ಕದನಕ್ಕೆ ಸಿದ್ಧರಾಗಿದ್ದವು. ಹೀಗಾಗಿ ಅದನ್ನು ತಡೆಯುವುದು ಮುಖ್ಯವಾಗಿತ್ತು ಎಂದು ಟ್ರಂಪ್ ತಿಳಿಸಿದರು.
ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್: ಪಾಕ್ ಬಳಿಕ ಇಸ್ರೇಲ್ ಶಿಫಾರಸು
ವಾಷಿಂಗ್ಟನ್: ಭಾರತ- ಪಾಕ್ ಸಂಘರ್ಷದಲ್ಲಿ ಕದನ ವಿರಾಮ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಮತ್ತು ಸಂಭವನೀಯ ಪರಮಾಣು ಯುದ್ಧ ತಡೆದಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಾಕಿಸ್ತಾನ ಸರ್ಕಾರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದ ಬೆನ್ನಲ್ಲೇ ಇದೀಗ ಇಸ್ರೇಲ್ ಕೂಡ ಅದೇ ಕೆಲಸ ಮಾಡಿದೆ. ‘ಅರ್ಹರು ನೊಬೆಲ್ ಪಡೆಯಬೇಕು’ ಎಂದು ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಟ್ರಂಪ್ ಗುಣಗಾನ ಮಾಡಿದ್ದಾರೆ. ಸೋಮವಾರ ಶ್ವೇತಭವನದಲ್ಲಿ ನಡೆದ ಭೋಜನ ಕೂಟದಲ್ಲಿ ಬೆಂಜಮಿನ್ ನೆತನ್ಯಾಹು ಭಾಗಿಯಾಗಿದ್ದರು. ಈ ವೇಳೆ ಅವರು ಡೊನಾಲ್ಡ್ ಟ್ರಂಪ್‌ಗೆ ನಾಮ ನಿರ್ದೇಶನ ಪತ್ರವನ್ನು ಹಸ್ತಾಂತರಿಸಿದ್ದಾರೆ. ಇತ್ತೀಚೆಗೆ ಇಸ್ರೇಲ್- ಇರಾನ್ ಯುದ್ಧ ತಡೆಯುವಲ್ಲೂ ಟ್ರಂಪ್ ಪ್ರಮುಖ ಪಾತ್ರ ವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ