
ಇಸ್ಲಾಮಾಬಾದ್(ಏ.25) ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರ ತೀರಿಸಲು ಭಾರತ ಸಜ್ಜಾಗಿದೆ. ಇತ್ತ ಭಾರತೀಯರ ಆಕ್ರೋಶ ಹೆಚ್ಚಾಗುತ್ತಿದೆ. ದಾಳಿಯಲ್ಲಿ ಮಡಿದವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಇದರ ನಡುವ ಭಾರತ, ಪಾಕಿಸ್ತಾನದ ಮೇಲೆ ಹಲವು ನಿರ್ಬಂಧ ಹೇರಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಪಾಕಿಸ್ತಾನ ತನ್ನ ಅಸಲಿ ಆಟ ಬಯಲಾಗಿದೆ. ಪೆಹೆಲ್ಗಾಂ ದಾಳಿಯನ್ನು ಪಾಕಿಸ್ಥಾನ ಸಮರ್ಥಿಸಿಕೊಂಡಿದೆ. ಇದು ಉಗ್ರರು ನಡೆಸಿದ ದಾಳಿಯಲ್ಲ, ಸ್ವಾತಂತ್ರ್ಯ ಹೋರಾಟಗಾರರು ನಡೆಸಿದ ದಾಳಿ ಎಂದು ಪಾಕಿಸ್ತಾನ ಉಪ ಪ್ರಧಾನಿ ಇಶ್ಕ್ ದಾರ್ ಹೇಳಿದ್ದಾರೆ.
ಪೆಹಲ್ಗಾಂ ದಾಳಿ ಸಮರ್ಥಿಸಿದ ಪಾಕಿಸ್ತಾನ
ಏಪ್ರಿಲ್ 22ರಂದು ಕಾಶ್ಮೀರದ ಪೆಹಲ್ಗಾಂ ಬಳಿ ನಡೆಸಿದ ದಾಳಿ ಸ್ವಾತಂತ್ರ್ಯ ಹೋರಾಟಗಾರರು ನಡೆಸಿರುವ ಸಾಧ್ಯತೆ ಇದೆ ಎಂದಿದ್ದಾರೆ. ಭಾರತದ ವಿಧಿಸಿದೆ ನಿರ್ಬಂಧ ಕುರಿತು ಮಾತನಾಡಿದ ಇಶ್ಕ್ ಧಾರ್, ಉಗ್ರರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದುು ಬಣ್ಣಿಸಿದ್ದಾರೆ. ಮೂಲಕ ಪಾಕಿಸ್ತಾನ ಘಟನೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದೆ.
BREAKING ಬಂಡಿಪೊರ ಎನ್‌ಕೌಂಟರ್, ಲಷ್ಕರ್ ಕಮಾಂಡರ್ ಅಲ್ತಾಫ್‌ಗೆ ಗುಂಡಿಕ್ಕಿದ ಭಾರತೀಯ ಸೇನೆ
ಸಿಂಧೂ ನದಿ ಒಪ್ಪಂದ ರದ್ದು ನಿರ್ಧಾರಕ್ಕೆ ಪ್ರತಿಕ್ರಿಯೆ
ಪೆಹಲ್ಗಾಂ ದಾಳಿ ಬಳಿಕ ತುರ್ತು ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೆಲ ನಿರ್ಧಾರಗಳನ್ನು ಕೈಗೊಂಡಿದ್ದರು. ಈ ಪೈಕಿ ಪಾಕಿಸ್ತಾನ ಜೊತೆಗಿನ ಸಿಂಧೂ ನದಿ ಒಪ್ಪಂದ ಕೂಡ ಒಂದಾಗಿದೆ. ಪೆಹಲ್ಗಾಂ ದಾಳಿಯಿಂದ ಈ ಒಪ್ಪಂದ ರದ್ದು ಎಂದು ಮೋದಿ ಘೋಷಿಸಿದ್ದರು. ಈ ನಿರ್ಧಾರದಿಂದ ಪಾಕಿಸ್ತಾನ ಕೆರಳಿದೆ. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಕಿಸ್ತಾನ ಉಪ ಪ್ರಧಾನಿ ಇಶ್ಕ್ ಧಾರ್, ನೀರು ನಿಲ್ಲಿಸುವುದು ಯುದ್ಧ ಪರಿಸ್ಥಿತಿ ನಿರ್ಮಾಣ ಮಾಡುವುದಾಗಿದೆ. ನಮ್ಮ ನೀರು ಪಡೆಯುವದು ನಮ್ಮ ಹಕ್ಕು. ಭಾರತ ಹೇಳಿದ ರೀತಿ ನೀರು ನಿಲ್ಲಿಸಲು ಸಾಧ್ಯವಿಲ್ಲ. ಇದು ಯುದ್ಧಕ್ಕೆ ಆಹ್ವಾನ ನೀಡಿದಂತೆ. ಇದಕ್ಕೆ ಭಾರತ ಬಾರಿ ದಂಡ ತರಲಿದೆ ಎಂದು ಇಶ್ಕ್ ಧಾರ್ ಎಚ್ಚರಿಸಿದ್ದಾರೆ.
ಪಾಕಿಸ್ತಾನ ಪ್ರಜೆಗಳನ್ನು ಭಾರತ ಬಿಟ್ಟು ತೆರಳಲು ಸೂಚಿಸಿದ್ದಾರೆ. ಯಾವುದೇ ಪಾಕಿಸ್ತಾನಿ ಪ್ರಜೆಗಳಿಗೆ ಸಮಸ್ಯೆಯಾದರೆ ಅದರ ಪರಿಣಾಮ ಇಲ್ಲಿರುವ ಭಾರತೀಯರ ಮೇಲೂ ಆಗಲಿದೆ. ಭಾರತದ ಯಾವುದೇ ದಾಳಿ ಎದುರಿಸಲು ಪಾಕಿಸ್ತಾನ ಸಜ್ಜಾಗಿದೆ. ಈ ಬಾರಿ ಭಾರತಕ್ಕೆ ತಕ್ಕ ಶಾಸ್ತಿಯಾಗಲಿದೆ ಎಂದು ಇಶ್ಕ್ ಧಾರ್ ಹೇಳಿದ್ದಾರೆ.
ಪೆಹಲ್ಗಾಂ ದಾಳಿಯನ್ನು ಪಾಕಿಸ್ತಾನ ಒಬ್ಬೊಬ್ಬ ಸಚಿವರು, ಮಾಜಿ ಸಚಿವರು, ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಪಾಕಿಸ್ತಾನ ಈ ದಾಳಿ ಹಿಂದೆ ಕಾರ್ಯನಿರ್ವಹಿಸಿರುವುದು ಸ್ಪಷ್ಟವಾಗುತ್ತಿದೆ. ಅತ್ತ ಗಡಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಭಾರತದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪೆಹಲ್ಗಾಂ ದಾಳಿ ಹಿಂದೆ 26/11 ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸೈಯಿದ್ ಪಾತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ