ಇದುವರೆಗೆ ಭಾರತೀಯರಿಗೆ ನೇಪಾಳ ಪ್ರವೇಶಕ್ಕೆ ಯಾವುದೇ ನಿರ್ಬಂಧವಿರಲಿಲ್ಲ. ಪಾಸ್‌ಪೋರ್ಟ್, ವಿಸಾ ಅವಶ್ಯತೆ ಇರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ನೇಪಾಳ ಸರ್ಕಾರ ಮಹತ್ವದ ನಿರ್ಧಾರ ಘೋಷಿಸಿದೆ. ಭಾರತೀಯರು ನೇಪಾಳ ಪ್ರವೇಶಿಸಲು ID ಕಾರ್ಡ್ ಕಡ್ಡಾಯ ಮಾಡಲಾಗಿದೆ. ಇದರ ಹಿಂದಿನ ಕಾರಣವೇನು? ಇಲ್ಲಿದೆ.
ಕಠ್ಮಂಡು(ಆ.14): ಭಾರತ ಹಾಗೂ ನೇಪಾಳ ಸಂಬಂಧ ಕೂಡ ಹಳಸಿದೆ. ಗಡಿಯಲ್ಲಿ ಹಲವು ತಕರಾರಿನ ಬಳಿಕ ಉಭಯ ದೇಶಗಳ ನಡುವಿನ ಸ್ನೇಹಕ್ಕೆ ಕಾರ್ಮೋಡ ಕವಿದಿದೆ. ಮತ್ತೊಂದೆಡೆ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಹುಡುಕಲು ಭಾರತ ಯತ್ನಿಸುತ್ತಿದೆ. ಇದರ ಬೆನ್ನಲ್ಲೇ ನೇಪಾಳ ಸರ್ಕಾರ ಹೊಸ ನೀತಿ ಜಾರಿಗೆ ತಂದಿದೆ. ಭಾರತೀಯರು ನೇಪಾಳ ಪ್ರವೇಶಸುಲ ಗುರುತಿನ ಚೀಟಿ ಕಡ್ಡಾಯ ಮಾಡಲಾಗಿದೆ.
ವಿಶ್ವಸಂಸ್ಥೆಗೂ ಹೊಸ ನಕ್ಷೆ ಕಳುಹಿಸಲು ನೇಪಾಳ ನಿರ್ಧಾರ!
ನೇಪಾಳ ಪ್ರವೇಶಕ್ಕೆ ಐಡಿ ಕಾರ್ಡ್ ಕಡ್ಡಾಯದ ಹಿಂದೆ ಗಡಿ ಖ್ಯಾತೆ ಕಾರಣವಲ್ಲ. ಬದಲಾಗಿ ಕೊರೋನಾ ವೈರಸ್ ಕಾರಣವಾಗಿದೆ. ನೇಪಾಳದಲ್ಲಿ ಕೊರೋನಾ ವೈರಸ್ ಹೆಚ್ಚಾಗಳು ಭಾರತವೇ ಕಾರಣ ಎಂದು ನೇಪಾಳ ಪ್ರಧಾನಿ ಒಲಿ ಶರ್ಮಾ ಆರೋಪಿಸಿದ್ದರು. ಕೊರೋನಾ ವೈರಸ್ ಸೋಂಕಿತರು ನೇಪಾಳ ಪ್ರವೇಶಿಸಿ ಇಲ್ಲಿ ಸೋಂಕು ಹರಡಿದ್ದಾರೆ. ಭಾರತದಿಂದಲೇ ನೇಪಾಳದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗಿದೆ ಎಂದು ಆರೋಪಿಸಿದ್ದರು.
ನೇಪಾಳದಲ್ಲೂ ರಾಮಮಂದಿರ, ಶೀಘ್ರ ಭೂಮಿಪೂಜೆ!.
ನೇಪಾಳದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಇದೀಗ ಐಡಿ ಕಾರ್ಡ್ ಕಡ್ಡಾಯ ಮಾಡಲಾಗಿದೆ. ನೇಪಾಳಕ್ಕೆ ಆಗಮಿಸುವ ಭಾರತೀಯರ ದಾಖಲೆ ಸಂಗ್ರಹಿಸಲಾಗುವುದು. ತಪಾಸಣೆ, ಕ್ವಾರಂಟೈನ್ ಕಡ್ಡಾಯ ಮಾಡಲಾಗುವುದು ಎಂದು ನೇಪಾಳ ಹೇಳಿದೆ.
ಭಾರತ ಆರಂಭಿಸಿದ ಕೈಲಾಸ ಮಾನಸರೋವರ ಸಂಪರ್ಕ ರಸ್ತೆಗೆ ನೇಪಾಳ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ನೇಪಾಳ ಹೊಸ ನಕ್ಷೆ ಬಿಡುಗಡೆ ಮಾಡಿ, ಭಾರತದ ಗಡಿ ಗ್ರಾಮಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಇದಾದ ಬಳಿಕ ಭಾರತೀಯ ಗ್ರಾಮಸ್ಥರ ಮೇಲೆ ನೇಪಾಳ ಗಡಿ ಭದ್ರತಾ ಪಡೆ ಫೈರಿಂಗ್ ನಡೆಸಿತ್ತು. ಗಡಿಯಲ್ಲಿ ಉದ್ಘಿಘ್ನ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ, ಪ್ರಧಾನಿ ಒಲಿ ಶರ್ಮಾ, ಶ್ರೀ ರಾಮ ನೇಪಾಳಿಗೆ, ಅಯೋಧ್ಯೆ ನೇಪಾಳದಲ್ಲಿದೆ ಎಂದು ಮತ್ತೊಂದು ವಿವಾದ ಹುಟ್ಟುಹಾಕಿದ್ದರು.