ಪುಲ್ವಾಮಾ ದಾಳಿ ಸತ್ಯ ಬಿಚ್ಚಿಟ್ಟ ಮಂತ್ರಿಗೆ ಪಾಕ್ ಪ್ರಧಾನಿ ಸಮನ್ಸ್!

Published : Nov 03, 2020, 06:32 PM IST
ಪುಲ್ವಾಮಾ ದಾಳಿ ಸತ್ಯ ಬಿಚ್ಚಿಟ್ಟ ಮಂತ್ರಿಗೆ ಪಾಕ್ ಪ್ರಧಾನಿ ಸಮನ್ಸ್!

ಸಾರಾಂಶ

ಪುಲ್ವಾಮಾ ಭಯೋತ್ವಾದಕ ದಾಳಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಮಾಡಿ ಮುಗಿಸಿದೆ ಎಂದು ದಾಳಿಯ ಸತ್ಯ ಬಿಚ್ಚಿಟ್ಟಿದ್ದ ಪಾಕಿಸ್ತಾನ ಸಚಿವ ಫಾವದ್ ಚೌಧರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪಾಕ್ ಮಂತ್ರಿ ವಿರುದ್ಧ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತೆಗೆದುಕೊಂಡ ನಿರ್ಣಯವೇನು? ಇಲ್ಲಿವೆ.

ಲಾಹೋರ್(ನ.03):  ಪಾಕಿಸ್ತಾನ ನ್ಯಾಶನಲ್ ಅಸೆಂಬ್ಲಿಯಲ್ಲಿ ರಾಜಾರೋಶವಾಗಿ ಪುಲ್ವಾಮಾ ದಾಳಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಯಶಸ್ವಿಯಾಗಿ ಮುಗಿಸಿದ್ದಾರೆ. ಹಿಂದೂಸ್ಥಾನ ನೆಲಕ್ಕೆ ನುಗ್ಗಿ ದಾಳಿ ಮಾಡುವ ಛಾತಿ ಇಮ್ರಾನ್ ಖಾನ್ ಆಡಳಿತದ ಯಶಸ್ಸು ಎಂದು ಪಾಕಿಸ್ತಾನ ಸಚಿವ ಫವಾದ್ ಚೌಧರಿ ರಾಜಾರೋಶವಾಗಿ ಹೇಳಿದ್ದರು. ಚೌಧರಿ ಅಧೀಕೃತ ಹೇಳಿಕೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕಳ್ಳಾಟವನ್ನು ಬಯಲು ಮಾಡಿತ್ತು. ಪ್ರಧಾನಿ ಇಮ್ರಾನ್ ಖಾನ್‌ಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು. ಇದೀಗ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದ ಫವಾಧ್ ಚೌದರಿ ವಿರುದ್ಧ ಪಾಕ್ ಸರ್ಕಾರ ಕಠಿಣ   ಕ್ರಮಕ್ಕೆ ಮುಂದಾಗಿದೆ.

ಪುಲ್ವಾಮಾ ದಾಳಿ ಮಾಡಿದ್ದು ನಾವೇ' ಕೊನೆಗೂ ಸತ್ಯ ಒಪ್ಪಿಕೊಂಡ ಕುತಂತ್ರಿ!...

ಪಾಕಿಸ್ತಾನ ಹಾಗೂ ಪ್ರಧಾನಿ  ಅಸಲಿ ಮುಖ ಬಯಲು ಮಾಡಿದ ಫವಾಧ್ ಚೌಧರಿಗೆ ಇದೀಗ ಪ್ರಧಾನಿ ಇಮ್ರಾನ್ ಖಾನ್ ಸಮನ್ಸ್ ನೀಡಿದ್ದಾರೆ. ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಸೂಚಿಸಿದ್ದಾರೆ. ಇಷ್ಟೇ ಅಲ್ಲ ಪುಲ್ವಾಮಾ ದಾಳಿ, ಭಾರತ ಹಾಗೂ ಪಾಕಿಸ್ತಾನ ಗಡಿ ಸಮಸ್ಯೆಗಳ ಕುರಿತು ಯಾವುದೇ ಹೇಳಿಕೆ ನೀಡದಂತೆ ಸೂಚಿಸಲಾಗಿದೆ. 

'ಪುಲ್ವಾಮಾ ನಾವೇ ಮಾಡಿದ್ದು' ಅಗ್ರ ನಾಯಕರು ಆಗ ಮೋದಿ ಮೇಲೆ ಏನ್ ಏನ್ ಹೇಳಿದ್ರು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕುತಂತ್ರ ಬುದ್ದಿ ಮತ್ತೆ ಬಯಲಾಗುತ್ತಿದ್ದಂತೆ ಪ್ರಧಾನಿ ಇಮ್ರಾನ್ ಖಾನ್, ಕೆಂಡಾಮಂಡಲರಾಗಿದ್ದಾರೆ. ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳುವಂತೆ ಒತ್ತಡ ಹಾಕಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮದಲ್ಲಿ ವರದಿಯಾಗಿದೆ. ಇತ್ತ ಫವಾಧ್ ಚೌಧರಿ ಕೂಡ ತಾನು ಪುಲ್ವಾಮಾ ದಾಳಿಯನ್ನು ಪಾಕಿಸ್ತಾನ ಮಾಡಿಸಿದೆ ಎಂದು ಹೇಳಿಲ್ಲ. ತನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಯು ಟರ್ನ್ ಹೊಡೆದಿದ್ದಾರೆ.

ಪುಲ್ವಾಮಾ ದಾಳಿ ಬಳಿಕ ಭಾರತ ಪಾಕಿಸ್ತಾನ ಮೇಲೆ ಆಕ್ರಮಣಕ್ಕೆ ಮುಂದಾದಾಗ, ಪಾಕಿಸ್ತಾನ ಹಿಂದೂಸ್ಥಾನದೊಳಕ್ಕೆ ನುಗ್ಗಿ ದಾಳಿ ಮಾಡಿದೆ. ಗಡಿ ರೇಖೆ ದಾಟಿದ ಭಾರತದ ವಾಯು ಪಡೆಯನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ಅಸೆಂಬ್ಲಿಯಲ್ಲಿ ಹೇಳಿದ್ದೇನೆ. ಆದರೆ ಹೇಳಿಕೆಯನ್ನು ತಿರುಚಲಾಗಿದೆ ಎಂದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ