ಇರಾನ್ ಕಡೆಗೆ ಅಮೆರಿಕದ ಪಡೆ: ಯುದ್ಧನೌಕೆ ಬರ್ತಿದೆ ಎಂದು ಡೊನಾಲ್ಡ್ ಟ್ರಂಪ್‌ ಎಚ್ಚರಿಕೆ

Published : Jan 24, 2026, 05:35 AM IST
Donald Trump warns

ಸಾರಾಂಶ

ಇರಾನ್ ಕಡೆಗೆ ದೊಡ್ಡ ಸೇನಾ ಪಡೆಗಳನ್ನು ಕಳುಹಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಕ್ಷಿಪಣಿ ವಿರೋಧಿ ವ್ಯವಸ್ಥೆಗಳನ್ನು ನಿಯೋಜಿಸಲಾಗಿದ್ದು, ಅರಬ್ಬೀ ಸಮುದ್ರದಲ್ಲಿ ಶೀಘ್ರದಲ್ಲೇ ನೌಕಾ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ವರದಿಗಳು ಸೂಚಿಸಿವೆ.

-ಅಮೆರಿಕದ ಯುದ್ಧವಿಮಾನ ಇಳಿಯುತ್ತಿರುವ ಚಿತ್ರ ಪೋಸ್ಟ್‌

-ಪಶ್ಚಿಮ ಏಷ್ಯಾದಲ್ಲಿ ಕ್ಷಿಪಣಿ ವಿರೋಧಿ ವ್ಯವಸ್ಥೆ ನಿಯೋಜನೆ

ವಾಷಿಂಗ್ಟನ್: ‘ನಮ್ಮ ದೊಡ್ಡ ಪಡೆಗಳು ಇರಾನ್‌ ಕಡೆ ಹೋಗುತ್ತಿವೆ. ಇರಾನ್‌ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಇರಾನ್‌ಗೆ ಮತ್ತೆ ಎಚ್ಚರಿಕೆ ಒಡ್ಡಿದ್ದಾರೆ. ಇದೇ ವೇಳೆ, ‘ಬಹುಶಃ ನಾವು ಇವುಗಳನ್ನು ಬಳಸಬೇಕಾಗುವುದಿಲ್ಲ’ ಎಂದೂ ಹೇಳುವ ಮೂಲಕ ಪರೋಕ್ಷವಾಗಿ ಇರಾನ್‌ ಆಡಳಿತಕ್ಕೆ ಹೇಳಿದ ಮಾತು ಕೇಳುವಂತೆ ಸಂದೇಶ ರವಾನಿಸಿದ್ದಾರೆ.

ಸ್ವಿಜರ್ಲೆಂಡ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾವು ಇರಾನ್ ಅನ್ನು ಗಮನಿಸುತ್ತಿದ್ದೇವೆ. ಆ ದಿಕ್ಕಿನಲ್ಲಿ ನಮ್ಮ ಬಹಳಷ್ಟು ಹಡಗುಗಳು ಹೋಗುತ್ತಿವೆ. ಆ ಕಡೆ ನಮ್ಮ ದೊಡ್ಡ ಪಡೆಯೇ ಹೋಗುತ್ತಿದೆ. ಏನೂ ಆಗುವುದು ಬೇಡ ಎಂದು ನಾನು ಬಯಸುತ್ತೇನೆ. ಆದರೆ ನಾವು ಇರಾನ್ ಅನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದಿದ್ದಾರೆ.

ಶೀಘ್ರ ದಾಳಿ ಸುಳಿವು:

ಮುಂಬರುವ ದಿನಗಳಲ್ಲಿ ಅರಬ್ಬೀ ಸಮುದ್ರ ಅಥವಾ ಪರ್ಶಿಯನ್ ಕೊಲ್ಲಿ ಪ್ರದೇಶದಲ್ಲಿ ಅಮೆರಿಕ ನೌಕಾ ದಾಳಿ ನಡೆಸಲಿದೆ ಎಂದು ಅಮೆರಿಕ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಅಮೆರಿಕ ರಕ್ಷಣಾ ಇಲಾಖೆ ತನ್ನ ಯುದ್ಧವಿಮಾನವೊಂದು ಅನಾಮಿಕ ಸ್ಥಳದಲ್ಲಿ ಇಳಿಯುತ್ತಿರುವ ಚಿತ್ರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಥಾಡ್‌ ಮತ್ತು ಪೇಟ್ರಿಯಾಟ್‌ನಂತಹ ಕ್ಷಿಪಣಿ ವಿರೋಧಿ ವ್ಯವಸ್ಥೆಗಳನ್ನೂ ಪಶ್ಚಿಮ ಏಷ್ಯಾದಾದ್ಯಂತ ಅಮೆರಿಕ ನಿಯೋಜಿಸುತ್ತಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಇವು ಶೀಘ್ರದಲ್ಲೇ ಇರಾನ್‌ ಮೇಲೆ ಅಮೆರಿಕ ದಾಳಿ ಮಾಡುವ ಸೂಚನೆ ನೀಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡೀ ಥಿಯೇಟರ್‌ನಲ್ಲಿ ಒಂದು ಸೀಟು ಬಿಟ್ಟು ಮತ್ತೊಂದು ಸೀಟ್ ಬುಕ್‌: ಪ್ರೇಮಿಗಳ ದಿನಕ್ಕೆ ಪ್ರೇಮಿಗಳಿಗೆ ಸಿಂಗಲ್ಸ್‌ಗಳ ಶಾಕ್
ಅಧ್ಯಕ್ಷರಾದ ಮೇಲೆ ಕುಬೇರನಾದ ಟ್ರಂಪ್‌: ಒಂದೇ ವರ್ಷದಲ್ಲಿ 12,800 ಕೋಟಿ ರೂ. ಸಂಪತ್ತು ಏರಿಕೆ!