ಡೊನಾಲ್ಡ್ ಟ್ರಂಪ್ ಶಾಂತಿ ಒಪ್ಪಂದದ ಕರಡು ಪ್ರತಿ ಬಹಿರಂಗ; 14 ಷರತ್ತುಗಳು ಇಲ್ಲಿವೆ ನೋಡಿ

Published : Jun 16, 2026, 07:34 AM IST
Donald Trump

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಒಪ್ಪಂದಕ್ಕೆ ಇಸ್ರೇಲ್ ವಿರೋಧ ವ್ಯಕ್ತಪಡಿಸಿದೆ. ತಮ್ಮ ಭದ್ರತೆಗೆ ಸಂಬಂಧಿಸಿದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವುದಾಗಿ ಮತ್ತು ಆಕ್ರಮಿತ ಗಾಜಾ, ಸಿರಿಯಾ, ಲೆಬನಾನ್ ಪ್ರದೇಶಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.

ಜೆರುಸಲೆಂ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನ್ ಜತೆ ಮಾಡಿಕೊಂಡಿರುವ ಶಾಂತಿ ಒಪ್ಪಂದಕ್ಕೆ ಇಸ್ರೇಲ್‌ ಅಪಸ್ವರ ಎತ್ತಿದೆ.

ಇಸ್ರೇಲ್ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಸೋಮವಾರ ಮಾತನಾಡಿ, ‘ಟ್ರಂಪ್‌ ಮಾಡಿಕೊಂಡ ಒಪ್ಪಂದವನ್ನು ನಾವು ಪಾಲಿಸಲೇಬೇಕು ಎಂದೇನಿಲ್ಲ. ನಮ್ಮ ಭದ್ರತೆಗೆ ಸಂಬಂಧಿಸಿದ ನಿರ್ಣಯವನ್ನು ನಾವು ತೆಗೆದುಕೊಳ್ಳುತ್ತೇವೆ’ ಎಂದರು.

ಇನ್ನು ಇಸ್ರೇಲ್ ರಕ್ಷಣಾ ಸಚಿವ ಕ್ಯಾಟ್ಜ್ ಮಾತನಾಡಿ, ‘ಲೆಬನಾನ್, ಸಿರಿಯಾ, ಗಾಜಾದಲ್ಲಿ ವಶಪಡಿಸಿಕೊಂಡ ಭೂಮಿಯಿಂದ ಇಸ್ರೇಲ್ ಹಿಂದೆ ಸರಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇದಲ್ಲದೆ, ‘ಲೆಬನಾನ್‌ನಲ್ಲಿನ ಹಿಜ್ಬುಲ್ಲಾ ಉಗ್ರರ ಮೇಲೆ ನಾವು ದಾಳಿ ಮಾಡಿದ್ದಕ್ಕೆ ಪ್ರತೀಕಾರವಾಗಿ ನಮ್ಮ ಮೇಲೆ ಇರಾನ್ ದಾಳಿ ಮಾಡಿದರೆ, ಇಸ್ರೇಲ್ ಕೂಡ ಮಹಾ ಬಲದಿಂದ ಇರಾನ್ ಮೇಲೆ ದಾಳಿ ಮಾಡುತ್ತದೆ’ ಎಂದು ಕ್ಯಾಟ್ಜ್ ಬೆದರಿಕೆ ಹಾಕಿದರು.

ಕಳೆದ ಎರಡೂವರೆ ವರ್ಷಗಳಲ್ಲಿ, ಇಸ್ರೇಲ್ ಗಾಜಾ, ಲೆಬನಾನ್ ಮತ್ತು ಸಿರಿಯಾದಲ್ಲಿ 1,000 ಚದರ ಕಿಲೋಮೀಟರ್ ಪ್ರದೇಶವನ್ನು ಇಸ್ರೇಲ್ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇದು ನ್ಯೂಯಾರ್ಕ್ ನಗರಕ್ಕಿಂತ ಸ್ವಲ್ಪ ಚಿಕ್ಕ ಪ್ರದೇಶ.

14 ಅಂಶಗಳ ಶಾಂತಿ ಒಪ್ಪಂದ?

1. ಹೋರ್ಮುಜ್ ಜಲಸಂಧಿಯನ್ನು ವಾಣಿಜ್ಯ ಸಂಚಾರಕ್ಕೆ ಪುನಃ ತೆರೆಯುವುದು

2. ಇರಾನಿನ ಬಂದರುಗಳ ಮೇಲಿನ ಅಮೆರಿಕದ ನಿರ್ಬಂಧಗಳ ತೆರವು

3. ಮಾತುಕತೆಯ ಸಮಯದಲ್ಲಿ ಅಮೆರಿಕದಿಂದ ಯಾವುದೇ ಹೊಸ ನಿರ್ಬಂಧಗಳಿಲ್ಲ

4. ಇರಾನ್ ತೈಲ ರಫ್ತಿಗೆ ತಾತ್ಕಾಲಿಕ ವಿನಾಯಿತಿ

5. ಇರಾನಿನ ಮುಟ್ಟುಗೋಲಾಗಿರುವ ಆಸ್ತಿಗಳ ಬಿಡುಗಡೆ

6. 60 ದಿನಗಳ ಮಾತುಕತೆ ಅವಧಿ

7. ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ ಎಂಬ ಇರಾನ್‌ನ ಬದ್ಧತೆ.

8. ಇರಾನ್‌ ಮತ್ತಷ್ಟು ಯುರೇನಿಯಂ ಸಂಸ್ಕರಣೆಯನ್ನು ನಿಲ್ಲಿಸುವುದು.

9. ಇರಾನ್‌ ಪರಮಾಣು ಘಟಕಗಳ ವಿಸ್ತರಣೆ ಸ್ಥಗಿತ

10. ಇರಾನ್‌ನ ಸಂಸ್ಕರಿತ ಯುರೇನಿಯಂ ದಾಸ್ತಾನು ಕುರಿತು ಮಾತುಕತೆಗಳು

11. ಪ್ರಾದೇಶಿಕ ಉದ್ವಿಗ್ನತೆ ನಿವಾರಣೆ ಕ್ರಮಗಳು

12. ಆರ್ಥಿಕ ಮತ್ತು ಪುನರ್ನಿರ್ಮಾಣಕ್ಕೆ ಸಂಬಂಧಿಸಿದ ಚರ್ಚೆಗಳು

14. ಇರಾನ್‌ ಮರುನಿರ್ಮಾಣಕ್ಕೆ 300 ಶತಕೋಟಿ ಡಾಲರ್‌ ಪ್ಯಾಕೇಜ್‌ ನೀಡುವುದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

B-52 Stratofortress: ಟೇಕಾಫ್‌ ಆಗ್ತಿದ್ದಂತೆಯೇ ಪತನಗೊಂಡ ಅಮೆರಿಕ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನ: 8 ಸಾವು
ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ