B-52 Stratofortress: ಟೇಕಾಫ್‌ ಆಗ್ತಿದ್ದಂತೆಯೇ ಪತನಗೊಂಡ ಅಮೆರಿಕ ವಾಯುಪಡೆಯ B-52 ಬಾಂಬರ್

Published : Jun 16, 2026, 07:25 AM IST
B-52 Stratofortress

ಸಾರಾಂಶ

ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ವಾಯುನೆಲೆಯಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಮೆರಿಕ ವಾಯುಪಡೆಯ B-52 ಬಾಂಬರ್ ವಿಮಾನ ಪತನಗೊಂಡಿದೆ. ಈ ಭೀಕರ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಎಂಟು ಮಂದಿ ಸಾವನ್ನಪ್ಪಿದ್ದು, ಅಪಘಾತದ ಕಾರಣ ತಿಳಿಯಲು ವಾಯುಸೇನೆ ತನಿಖೆ ಆರಂಭಿಸಿದೆ.

ಕ್ಯಾಲಿಫೋರ್ನಿಯಾ: ಅಮೆರಿಕ ವಾಯುಪಡೆಯ B-52 ಸ್ಟ್ರಾಟೋಫೋರ್ಟ್ರೆಸ್ ಸಬ್‌ಸಾನಿಕ್ ಬಾಂಬರ್ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ವಾಯುನೆಲೆಯಿಂದ ಹಾರಾಟ ಆರಂಭಿಸಿದ ತಕ್ಷಣವೇ ಈ ದುರಂತ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸಾಮಾನ್ಯವಾಗಿ B-52 ವಿಮಾನದಲ್ಲಿ ಐದು ಮಂದಿ ಸಿಬ್ಬಂದಿ ಇರುತ್ತಾರೆ.

110 ಮಿಲಿಯನ್ ಡಾಲರ್ ದುಬಾರಿಯ B-52 ಬಾಂಬರ್‌

ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ B-52 ಬಾಂಬರ್‌ಗಳು ಸುಮಾರು 70,000 ಪೌಂಡ್ (ಸುಮಾರು 31,750 ಕೆ.ಜಿ.) ಭಾರವನ್ನು ಹೊರಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದು ಅತ್ಯಾಧುನಿಕ ಯುದ್ಧ ವಿಮಾನಗಳಲ್ಲಿ ಒಂದಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 110 ಮಿಲಿಯನ್ ಡಾಲರ್ (ಅಂದಾಜು 1,065 ಕೋಟಿ ರೂಪಾಯಿ). ಈ ವಿಮಾನವು 1955ರಿಂದ ಅಮೆರಿಕ ವಾಯುಪಡೆಯ ಭಾಗವಾಗಿದೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷಗಳಲ್ಲಿ ಬಾಂಬ್ ದಾಳಿ ಕಾರ್ಯಾಚರಣೆಗಳಿಗಾಗಿ B-52 ಬಾಂಬರ್‌ಗಳನ್ನು ಬಳಸಲಾಗಿತ್ತು.

ಈ ಸೇನಾ ನೆಲೆ ಲಾಸ್ ಏಂಜಲೀಸ್‌ನ ಈಶಾನ್ಯಕ್ಕಿರುವ ಪಶ್ಚಿಮ ಮೊಜಾವೆ ಮರುಭೂಮಿಯಲ್ಲಿದೆ. ಅಪಘಾತ ಸ್ಥಳದ ವೈಮಾನಿಕ ದೃಶ್ಯಗಳಲ್ಲಿ, ವಿಮಾನ ಬಿದ್ದ ಜಾಗದಲ್ಲಿ ದಟ್ಟವಾದ ಹೊಗೆ ಹಾಗೂ ಕರಕಲಾದ ಗುರುತುಗಳು ಸ್ಪಷ್ಟವಾಗಿ ಕಾಣುತ್ತಿವೆ. ಬೋಯಿಂಗ್ ಕಂಪನಿ ನಿರ್ಮಿಸಿದ B-52 ಸ್ಟ್ರಾಟೋಫೋರ್ಟ್ರೆಸ್, ದೀರ್ಘ-ಶ್ರೇಣಿಯ ದಾಳಿ ಮತ್ತು ಭಾರೀ ಪ್ರಮಾಣದ ಬಾಂಬ್ ದಾಳಿಗೆ ಬಳಸುವ ಒಂದು ಪ್ರಮುಖ ಯುದ್ಧ ವಿಮಾನವಾಗಿದೆ.

ಎಂಟು ಜನರ ಸಾವು

ವಿಮಾನದಲ್ಲಿದ್ದ ಎಲ್ಲಾ ಎಂಟು ಮಂದಿ ಮೃತಪಟ್ಟಿರುವುದಾಗಿ ಅಮೆರಿಕ ವಾಯುಸೇನೆ ಅಧಿಕೃತವಾಗಿ ಖಚಿತಪಡಿಸಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ಬಗ್ಗೆ ವಾಯುಸೇನೆ ವಿಸ್ತೃತ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೊನಾಲ್ಡ್ ಟ್ರಂಪ್ ಶಾಂತಿ ಒಪ್ಪಂದದ ಕರಡು ಪ್ರತಿ ಬಹಿರಂಗ; 14 ಷರತ್ತುಗಳು ಇಲ್ಲಿವೆ ನೋಡಿ
ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ