ಪ್ರಸಿದ್ಧ ಛಾಯಾಚಿತ್ರಕಾರರೊಬ್ಬರು ಕಾಡಿನಲ್ಲಿ ಕನ್ನಡಿಯನ್ನು ಅಳವಡಿಸಿ ವಿವಿಧ ವನ್ಯಮೃಗಗಳ ರಿಯಾಕ್ಷನ್ ಸೆರೆ ಹಿಡಿದಿದ್ದಾರೆ. ಮೊದಲ ಬಾರಿ ಕನ್ನಡಿ ನೋಡಿದಾಗ ಪ್ರಾಣಿಗಳು ಮಾಡಿದ್ದೇನು? ಕನ್ನಡಿ ತೆಗೆದಾಗ ಆಗಿದ್ದೇನು?
ಕನ್ನಡಿಯನ್ನು ಮೊದಲು ಬಾರಿಗೆ ನೀವು ನೋಡಿಕೊಂಡಿರುವುದು ನೆನಪಿದೆಯಾ? ಬಹುಶಃ ಬಹುತೇಕರಿಗೆ ಇದು ನೆನಪು ಇರಲು ಸಾಧ್ಯವೇ ಇಲ್ಲ. ಆದರೆ ಮನೆಯಲ್ಲಿ ಚಿಕ್ಕಮಕ್ಕಳು ಇದ್ದರೆ, ಅವರನ್ನು ಮೊದಲ ಬಾರಿಗೆ ಕನ್ನಡಿ ಎದುರು ಕರೆದುಕೊಂಡು ಹೋದಾಗ ಅವರ ರಿಯಾಕ್ಷನ್ ಹೇಗಿತ್ತು ಎನ್ನುವ ಬಗ್ಗೆ ಕೆಲವಾದರೂ ಅಪ್ಪ-ಅಮ್ಮಂದಿರಿಗೆ ನೆನಪಿರಲಿಕ್ಕೆ ಸಾಕು. ಅಲ್ಲಿ ಬೇರೆ ಯಾರೋ ತನ್ನ ಜಾಗದಲ್ಲಿ ಬಂದುಬಿಟ್ಟಿದ್ದಾರೆ ಎಂದು ಕಂದಮ್ಮಗಳು ಜೋರಾಗಿ ಅಳುವುದು ಉಂಟು. ಹೆಚ್ಚಿನ ಪುಟಾಣಿಗಳು ಬೇರೆ ಯಾರೋ ಬಂದಿದ್ದಾರೆ ಎಂದು ಕನ್ನಡಿಯ ಮೇಲೆ ಕೋಪ ಮಾಡಿಕೊಳ್ಳುವುದೂ ಇದೆ. ಮತ್ತೆ ಕೆಲವರು ಅವರನ್ನು ಕರೆಯುವುದು ಇದೆ. ಅದೇ ರೀತಿ, ಮನೆಯಲ್ಲಿ ಸಾಕುವ ಬೆಕ್ಕು, ನಾಯಿಗಳನ್ನು ಕನ್ನಡಿ ಎದುರು ಮೊದಲ ಬಾರಿಗೆ ಹಿಡಿದಾಗ ಯಾವುದೋ ಬೇರೆ ಪ್ರಾಣಿ ಬಂದಿತೆಂದು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದನ್ನೂ ನೋಡಿರಬಹುದು.
ಆದರೆ, ಮೊದಲ ಬಾರಿ ಕಾಡು ಪ್ರಾಣಿಗಳು ಕನ್ನಡ ನೋಡಿದಾಗ ಅವುಗಳು ಹೇಗೆಲ್ಲಾ ವರ್ತಿಸಬಹುದು ಎನ್ನುವ ಕುತೂಹಲ ಹಲವರಲ್ಲಿ ಇದ್ದರೂ, ಅದನ್ನು ಪ್ರಯೋಗ ಅಂತೂ ಮಾಡಲು ಸಾಧ್ಯವಿಲ್ಲ. ಆದರೆ ವನ್ಯಮೃಗ ಛಾಯಾಚಿತ್ರಕಾರ ಇದರ ಕುತೂಹಲದ ಚಿತ್ರಣವನ್ನು ನಮ್ಮ ಮುಂದೆ ತಂದಿದ್ದು, ಅದರ ವಿಡಿಯೋ ಈಗ ವೈರಲ್ ಆಗುತ್ತಿದೆ. ಫ್ರೆಂಚ್ ಛಾಯಾಗ್ರಾಹಕ ಕ್ಸೇವಿಯರ್ ಹ್ಯೂಬರ್ಟ್ ಬ್ರಿಯೆರ್ ಅವರು ಹಲವು ವನ್ಯಮೃಗಗಳ ಎದುರು ಕನ್ನಡಿ ಇಟ್ಟು, ಅವು ಹೇಗೆ ವರ್ತಿಸುತ್ತವೆ ಎನ್ನುವುದನ್ನು ತೋರಿಸಿದ್ದಾರೆ. ಸಿಂಹ, ಚಿರತೆ, ಆನೆ, ಚಿಂಪಾಂಜಿ, ಮುಳ್ಳುಹಂದಿ, ಕರಡಿ ಇತ್ಯಾದಿ ವನ್ಯಮೃಗಗಳ ಬಗ್ಗೆ ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಆಫ್ರಿಕಾದ ಗ್ಯಾಬೊನ್‌ನಲ್ಲಿರುವ ಕಾಡಿನಾದ್ಯಂತ ಈ ಕನ್ನಡಿ ಇಟ್ಟು ಪ್ರಯೋಗ ಮಾಡಲಾಗಿದೆ. ಸಹಜ ಎನ್ನುವಂತೆ ಎಲ್ಲಾ ಪ್ರಾಣಿಗಳೂ ಅಲ್ಲಿ ಬೇರೆಯದ್ದೇ ಪ್ರಾಣಿ ಇವೆ ಎಂದು ರಿಯಾಕ್ಟ್ ಮಾಡಿರುವುದನ್ನು ನೋಡಬಹುದು. ಆದರೆ ಒಂದೊಂದು ಪ್ರಾಣಿಯ ಪ್ರತಿಕ್ರಿಯೆಗಳು ವಿಭಿನ್ನ ರೀತಿಯಲ್ಲಿ ಇವೆ. ಚಿಂಪಾಂಜಿಯ ರಿಯಾಕ್ಷನ್ ನೋಡಿದರೆ ನಕ್ಕು ನಗಿಸುವಂತಿದೆ. ತನ್ನನ್ನು ತಾನು ನೋಡಿಕೊಳ್ಳುವ ಚಿಂಪಾಜಿ ನೆಗೆಯುತ್ತಾ ಹೋಗುವುದನ್ನು ನೋಡಬಹುದು. ಇನ್ನು ಮುಳ್ಳುಹಂದಿಯಂತೂ ಎದ್ದೆನೋ, ಬಿದ್ದೆನೋ ಎಂದು ಕಾಲುಕಿತ್ತಿದೆ. ಚಿರತೆ ಮತ್ತು ಸಿಂಹಗಳು ಭಾರಿ ಆಕ್ರೋಶ ವ್ಯಕ್ತಪಡಿಸಿ, ಅಲ್ಲಿರುವ ಪ್ರತಿಬಿಂಬವನ್ನು ಸೆಣೆಸಾಡಲು ಕರೆಯುವಂತಿದೆ. ಅಷ್ಟಕ್ಕೂ, ಮೊದಲ ಜಾಣ್ಮೆಯಿಂದ ಸಿಂಹ ತನ್ನದೇ ಪ್ರತಿಬಿಂಬ ನೋಡಿ ಬಾವಿಯಲ್ಲಿ ಬಿದ್ದ ಸಿಂಹ-ಮೊಲದ ಕಥೆಯನ್ನು ಇದು ನೆನಪಿಸುವಂತಿದೆ.
ಇದು ಕೋಳಿಯಲ್ಲ, ಕೊಕ್ಕೊಕ್ಕೋ ಎನ್ನೋ ಗಿಳಿ... ನಿಜಾರೀ... ಆನ್ಲೈನ್ನಲ್ಲೂ ಲಭ್ಯ! ಇಲ್ಲೇ ಟೆಸ್ಟ್ ಮಾಡಿ ನೋಡಿ...
ವಿಡಿಯೋದಲ್ಲಿ ಒಂದಿಷ್ಟನ್ನು ನಾವು ನೋಡಿದರೆ, ಇದರ ಹಿಂದಿನ ಕಥೆಗಳನ್ನು ಛಾಯಾಗ್ರಾಹಕ ಕ್ಸೇವಿಯರ್ ಹ್ಯೂಬರ್ಟ್ ಬ್ರಿಯೆರ್ ಹೇಳಿದ್ದಾರೆ. ಆರಂಭದಲ್ಲಿ ಸಹಜವಾಗಿ ಎಲ್ಲ ಪ್ರಾಣಿಗಳೂ ಸಿಟ್ಟಿಗೆದ್ದಿರುವುದು ಇದೆ. ಯಾವುದಕ್ಕೂ ತನ್ನ ಪ್ರತಿಬಿಂಬ ಎಂದು ಕೊನೆಗೂ ತಿಳಿಯಲಿಲ್ಲ. ಆದರೆ ನಿಧಾನವಾಗಿ ಬಹುತೇಕ ಪ್ರಾಣಿಗಳಿಗೆ ಕನ್ನಡಿಯಲ್ಲಿರುವ ಪ್ರಾಣಿಗಳಿಂದ ತಮ್ಮ ಜೀವಕ್ಕೆ ಅಪಾಯವಿಲ್ಲ ಎನ್ನುವುದು ಅರಿವಾಗಿದೆ ಎಂದಿದ್ದಾರೆ. ಆದರೆ, ಎಲ್ಲಕ್ಕಿಂತಲೂ ಕುತೂಹಲ ಎನ್ನಿಸಿದ್ದು ಚಿರತೆಯದ್ದು ಎಂದಿದ್ದಾರೆ. ಚಿರತೆಗೆ ಕನ್ನಡಿಯಲ್ಲಿ ಇರುವುದು ತನ್ನ ಸಂಗಾತಿಯಂತೆ ಭಾಸವಾಗಿದೆ. ಆದ್ದರಿಂದ ಸದಾ ಅದು ಕನ್ನಡಿಯ ಸಮೀಪ ಹೋಗಿ ಮಲಗುತ್ತಿತ್ತು. ಆ ಸಂಗಾತಿಯನ್ನು ಅದು ಪ್ರೀತಿಸುತ್ತಿತ್ತು. ನಿದ್ದೆ ಮಾಡುತ್ತಿದ್ದರೂ ಆ ಸಂಗಾತಿ ಎಲ್ಲಿ ಓಡಿ ಹೋಗಿಬಿಡುವುದೋ ಎಂದು ಆಗಾಗ್ಗೆ ಕಣ್ಣುಬಿಟ್ಟು ನೋಡುತ್ತಿತ್ತು ಎಂದಿದ್ದಾರೆ. ಆದರೆ ಸಿಲ್ವರ್‌ಬ್ಯಾಕ್ ಗೊರಿಲ್ಲಾಗಳಿಗೆ ಮಾತ್ರ ಕೊನೆಯವರೆಗೂ ಅಲ್ಲಿ ಯಾರೋ ಪ್ರತಿಸ್ಪರ್ಧಿ ಇದ್ದಂತೆ ಕಂಡು ಸಿಡಿಮಿಡಿಗೊಳ್ಳುತ್ತಲೇ ಇತ್ತು ಎಂದಿದ್ದಾರೆ.
ಇನ್ನು ಕೆಲವು ಪ್ರಾಣಿಗಳು ಆ ಕನ್ನಡಿಯೊಳಗಿನ ಪ್ರಾಣಿಗಳ ಜೊತೆ ಆಟವಾಡಲು ಶುರು ಮಾಡಿದವು. ನಿತ್ಯವೂ ಅವುಗಳಿಗೆ ಅದೇ ಕೆಲಸವಾಯಿತು. ಕೆಲವು ದಿನಗಳ ಬಳಿಕ ಆ ಕನ್ನಡಿಯನ್ನು ತೆಗೆದಾಗ ಈ ಪ್ರಾಣಿಗಳೆಲ್ಲವೂ ಚಡಪಡಿಸಲು ಶುರು ಮಾಡಿದವು. ಏನನ್ನೋ ಕಳೆದುಕೊಂಡಂತೆ ಮಾಡಿದವು. ನಂತರ ಕನ್ನಡಿಯನ್ನು ಮತ್ತೆ ಇಟ್ಟಾಗ ಅವುಗಳ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದಿದ್ದಾರೆ.
ಸ್ನೇಹಿತನ ಮದ್ವೆಯಾಗಿ ಕೊನೆಯುಸಿರೆಳೆದ 10 ವರ್ಷದ ಬಾಲಕಿ! ಈಕೆಯ ಕಣ್ಣೀರ ಕಥೆ ಕೇಳಿ...
यह कितना बढ़िया वीडियो है। जानवर पहली बार शीशे में खुद को देख रहे, देखते ही चौक जा रहे।
ऐसे ही इंसानों ने जब शीशा में अपनी शक्ल देखी होगी तो उनका रिएक्शन क्या रहा होगा? pic.twitter.com/Q8fHHoPlqg