ಮಗನಿಗೆ ವಿಚಿತ್ರ ಚಾಲೆಂಜ್ ಹಾಕಿದ ಅಮ್ಮ, ಸವಾಲು ಗೆದ್ದ ಮಗನಿಗೆ 1.35 ಲಕ್ಷ ರೂ!

By Suvarna News  |  First Published Feb 27, 2022, 5:45 AM IST

* ಮಗನ ಒಳಿತಿಗಾಗಿ ಚಾಲೆಂಜ್ ಹಾಕಿದ ಅಮ್ಮ

* ಸೋಶಿಯಲ್ ಮಿಡಿಯಾ ಚಟ ಬಿಡಿಸಲು ಐಡಿಯಾ

* ಮಗನಿಗೆ ವಿಚಿತ್ರ ಚಾಲೆಂಜ್ ಹಾಕಿದ ಅಮ್ಮ, 18 ವರ್ಷ ಆಗ್ತಿದ್ದಂತೆ ಪುತ್ರನ ಕೈಗೆ 1.35 ಲಕ್ಷ


ವಾಷಿಂಗ್ಟನ್(ಫೆ/.27): ಇಂದಿನ ಯುಗದಲ್ಲಿ ಸೋಷಿಯಲ್ ಮೀಡಿಯಾದಿಂದ ದೂರ ಉಳಿಯುವುದೇ ದೊಡ್ಡ ವಿಷಯ. ಆದರೆ ತಾಯಿಯೊಬ್ಬರು ಮಗನಿಗೆ ಇಂತಹ ಷರತ್ತನ್ನು ನೀಡಿದ್ದು, 6 ವರ್ಷಗಳಿಂದ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದ ಮಗ ಇದೀಗ ತಾಯಿಯಿಂದ ಆ ಷರತ್ತನ್ನು ಗೆದ್ದಿದ್ದಾನೆ. ಇದೀಗ ತಾಯಿ ಮತ್ತು ಮಗನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಾಸ್ತವವಾಗಿ ಈ ಘಟನೆ ನಡೆದಿದ್ದು ಅಮೆರಿಕದ ಮಿನ್ನೇಸೋಟಕ್ಕೆ ಸಂಬಂಧಿಸಿದೆ. ಸೋಶಿಯಲ್ ಮೀಡಿಯಾದಿಂದ ದೂರವಿರಲು ಮಹಿಳೆಯೊಬ್ಬರು ತನ್ನ ಮಗನೊಂದಿಗೆ ಸವಾಲೆಸೆದಿದ್ದಾರೆ. ತಾಯಿ ಮತ್ತು ಮಗನೊಂದಿಗಿನ ಷರತ್ತು ಏನೆಂದರೆ, ಮಗನು 18 ವರ್ಷ ವಯಸ್ಸಿನವರೆಗೆ ಸಾಮಾಜಿಕ ಮಾಧ್ಯಮದಿಂದ ದೂರವಿರಬೇಕು ಮತ್ತು ಪ್ರತಿಯಾಗಿ ಅವನ ತಾಯಿ ಅವನಿಗೆ $ 1800 ನೀಡುತ್ತಾಳೆ. 6 ವರ್ಷಗಳ ಹಿಂದೆ ತಾಯಿ ಮತ್ತು ಮಗನ ನಡುವೆ ಈ ಷರತ್ತು ವಿಧಿಸಲಾಗಿದೆ. ಸವಾಲೆಸೆದಾಗ ಅವರ ಮಗನಿಗೆ ಕೇವಲ 12 ವರ್ಷ. ಮಗನೂ ಕೂಡ ಷರತ್ತನ್ನು ಪೂರೈಸಲು 6 ವರ್ಷಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡಿದ್ದ. ಭಾರತೀಯ ಕರೆನ್ಸಿ ಪ್ರಕಾರ 1 ಲಕ್ಷದ 35 ಸಾವಿರ ರೂಪಾಯಿ ನೀಡುವ ಷರತ್ತು ಹಾಕಲಾಗಿತ್ತು.

ಈಗ ಪುತ್ರನಿಗೆ 18 ವರ್ಷವಾಗಿದ್ದು, ಆತ ಈ ಅವಾಲನನು ಗೆದ್ದಿದ್ದಾನೆ, ಷರತ್ತಿನ ಪ್ರಕಾರ ತಾಯಿ ಸಮಾಜಿಕ ಮಧ್ಯಮದಿಂದ ದೂರವಿದ್ದ ಮಗನಿಗೆ $ 1800 ಚೆಕ್ ನೀಡಿದರು. ಈ ವಿಷಯವನ್ನು ತಾಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಹಿಳೆಯ ಪ್ರಕಾರ, ಆಕೆಗೆ ಈ ಐಡಿಯಾ ಬಂದಿದ್ದು ಒಂದು ಘಟನೆಯಿಂದ. ಮಗಳೊಬ್ಬಳು ತನ್ನ ಹದಿನಾರು ವರ್ಷದ ಮಗಳಿಗೆ ಸವಾಲನ್ನು ಪೂರ್ಣಗೊಳಿಸಲು $1600 ನೀಡಿದ್ದಳು, ಈ ವಿಚಾರ ಆಕೆ ರೇಡಿಯೊ ಕಾರ್ಯಕ್ರಮದಿಂದ ತಿಳಿದಕೊಂಡಿದ್ದಳು. ಆ ನಂತರ ಮಹಿಳೆ ತನ್ನ ಮಗನನ್ನು ಸಾಮಾಜಿಕ ಜಾಲತಾಣಗಳಿಂದ ದೂರವಿಡಲು ಈ ಷರತ್ತನ್ನೂ ಹಾಕಿದ್ದಾಳೆ.

Tap to resize

Latest Videos

ತನ್ನ ಮಗ ಉತ್ತಮ ಅಥ್ಲೀಟ್ ಆಗಿದ್ದು, ಅಧ್ಯಯನದಲ್ಲಿಯೂ ಚೆನ್ನಾಗಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದ ಕಾರಣದಿಂದ ಮಗ ತನ್ನ ಅಧ್ಯಯನದಿಂದ ವಿಮುಖನಾಗುವುದು ತಾಯಿಗೆ ಇಷ್ಟವಿರಲಿಲ್ಲ. ಅದಕ್ಕೇ ಇಂಥದ್ದೊಂದು ಕಂಡೀಷನ್ ಹಾಕಿದ್ದರು. ಈಗ ಮಗ 18ನೇ ವಯಸ್ಸಿಗೆ ಸೋಷಿಯಲ್ ಮೀಡಿಯಾದಲ್ಲಿ ಅಕೌಂಟ್ ಕ್ರಿಯೇಟ್ ಮಾಡಿದ್ದಾನೆ, ಅಲ್ಲದೇ ಯಾವುದೋ ಷರತ್ತು ಹಾಕಿದರೂ ಸೋಷಿಯಲ್ ಮೀಡಿಯಾ ಬಿಡಲು ರೆಡಿಯಾಗಿದ್ದಾನೆ.  
 

click me!