ಪತ್ನಿಗೆ ಉಡುಗೊರೆ ಕೊಡಲು ಟ್ರಂಪ್ ವಾಚ್ ಆರ್ಡರ್ ಮಾಡಿದ ಗಂಡ, ಆದರೆ ಡೆಲಿವರಿಯಾಗಿದ್ದು ರುಂಪ್

Published : May 16, 2025, 06:25 PM ISTUpdated : May 16, 2025, 06:26 PM IST
ಪತ್ನಿಗೆ ಉಡುಗೊರೆ ಕೊಡಲು ಟ್ರಂಪ್ ವಾಚ್ ಆರ್ಡರ್ ಮಾಡಿದ ಗಂಡ, ಆದರೆ ಡೆಲಿವರಿಯಾಗಿದ್ದು ರುಂಪ್

ಸಾರಾಂಶ

ಪತ್ನಿಗೆ ದುಬಾರಿ ಟ್ರಂಪ್ ಥೀಮ್ ವಾಚ್ ಉಡುಗೊರೆ ನೀಡಲು ಟಿಮ್ ಪೆಟಿಟ್ ೫೪,೭೮೯ ರೂ. ಪಾವತಿಸಿ ಆರ್ಡರ್ ಮಾಡಿದ್ದರು. ಆದರೆ ಡೆಲಿವರಿಯಾದ ವಾಚ್ ನಲ್ಲಿ 'ಟ್ರಂಪ್' ಬದಲು 'ರುಂಪ್' ಎಂದು ಮುದ್ರಣವಾಗಿತ್ತು. ಕಂಪನಿಯ ನಿರ್ಲಕ್ಷ್ಯದಿಂದ ಉಂಟಾದ ಈ ಘಟನೆ ಮಾಧ್ಯಮಗಳಲ್ಲಿ ವೈರಲ್ ಆಯಿತು. ಕಂಪನಿ ಕ್ಷಮೆ ಯಾಚಿಸಿ ೮೦೦ ಡಾಲರ್ ಕೂಪನ್ ನೀಡಿತು. ಆದರೆ ಲಿಮಿಟೆಡ್ ಎಡಿಷನ್ ವಾಚ್ ಮತ್ತೆ ಲಭ್ಯವಿರಲಿಲ್ಲ.

ನ್ಯೂಯಾರ್ಕ್(ಮೇ.16) ಪತ್ನಿಗೆ ದುಬಾರಿ ಉಡುಗೊರೆ ಕೊಡಲು ಪತಿ ಹಲವು ದಿನಗಳಿಂದ ತಲೆ ಕೆಡಿಸಿಕೊಂಡಿದ್ದಾನೆ. ಚಿನ್ನಾಭರಣ ಸೇರಿದಂತೆ ಹಲವು ಉಡುಗೊರೆಗಳಲ್ಲಿ ಕೊನೆಗೆ ವಾಚ್ ಉಡುಗೊರೆಯಾಗಿ ಕೊಡಲು ನಿರ್ಧರಿಸಿದ್ದಾನೆ. ಯಾವ ಬ್ರ್ಯಾಂಡ್ ವಾಚ್ ಅನ್ನೋದಕ್ಕೆ ಮತ್ತೊಂದು ಸುತ್ತು ತಲೆಕೆಡಿಸಿಕೊಂಡ ಗಂಡ, ಕೊನೆಗೆ ಭಾರಿ ಜನಪ್ರಿಯವಾಗಿರುವ  ಡೋನಾಲ್ಡ್ ಟ್ಕಂಪ್ ಥೀಮ್ ವಾಚ್ ಖರೀದಿಸಲು ಮುಂದಾಗಿದ್ದಾನೆ. ಇದಕ್ಕಾಗಿ ಗಂಡ 54,789 ರೂಪಾಯಿ ಪಾವತಿಸಿ ಆರ್ಡರ್ ಮಾಡಿದ್ದಾನೆ. ಕೆಲ ದಿನಗಳಲ್ಲೇ ವಾಚ್ ಡೆಲಿವರಿಯಾಗಿದೆ. ಸಂಭ್ರಮದಿಂದ ಪತ್ನಿಗೆ ಉಡುಗೊರೆ ನೀಡಲು ಹೋದಾಗ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಕಾರಣ ಈತ ಆರ್ಡರ್ ಮಾಡಿದ್ದು ಟ್ರಂಪ್ ವಾಚ್, ಆದರೆ ಡೆಲಿವರಿಯಾಗಿದ್ದು ಮಾತ್ರ ರುಂಪ್.

ಟ್ರಂಪ್ ಫಸ್ಟ್ ಲೇಡಿ ವಾಚ್
ಅಮೆರಿಕದ ರೊಡ್ ಐಸ್‌ಸ್ಯಾಂಡ್‌ನ ಟಿಮ್ ಪೆಟಿಟ್ ತನ್ನ ಪತ್ನಿಗೆ ಉಡುಗೊರೆ ನೀಡಲು ಟ್ರಂಪ್ ಥೀಮ್ ಪಿಂಕ್ ಎಡಿಶನ್ ವಾಚ್ ಆರ್ಡರ್ ಮಾಡಿದ್ದಾನೆ. ಇದು ಫಸ್ಟ್ ಲೇಡಿ ವಾಚ್ ಎಂದು ಕಂಪನಿ ಅಧಿಕೃತವಾಗಿ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿತ್ತು. ಇದು ಪತ್ನಿಗೆ ಸರಿಯಾದ ವಾಚ್ ಎಂದು ಟಿಮ್ ಪೆಟಿಟ್ ಆರ್ಡರ್ ಮಾಡಿದ್ದಾನೆ. ಇದಕ್ಕಾಗಿ 54,789 ರೂಪಾಯಿ(640 ಅಮೆರಿಕನ್ ಡಾಲರ್) ಆನ್‌ಲೈನ್ ಮೂಲಕ ಪಾವತಿಸಲಾಗಿದೆ. 

ಟ್ರಂಪ್‌ಗೆ ಕತಾರ್‌ನಿಂದ ₹3400 ಕೋಟಿ ಮೌಲ್ಯದ ವಿಮಾನ ಗಿಫ್ಟ್‌! ಇದರ ವಿಶೇಷತೆ ಏನು?

ಟ್ರಂಪ್ ಬದಲು ರುಂಪ್
ದುಬಾರಿ ವಾಚ್, ಪ್ರತಿಷ್ಠಿತ ವಾಚ್ ಖರೀದಿಸಿದ ಗಂಡ ಭಾರಿ ಖುಷಿಯಲ್ಲಿದ್ದ. ಪತ್ನಿಗೆ ಸರ್ಪ್ರೈಸ್ ನೀಡಲು ಮುಂದಾಗಿದ್ದ. ವಾಚ್ ಸಮಯಕ್ಕೆ ತಕ್ಕಂತ ಡೆಲವರಿ ಆಗಿದೆ. ಪತ್ನಿ ಮುಂದೆ ಡೆಲಿವರಿ ಬಾಕ್ಸ್ ಒಪನ್ ಮಾಡಿ ಅಚ್ಚರಿ ನೀಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾನೆ. ಡೆಲಿವರಿ ಬಾಕ್ಸ್ ಹಿಡಿದ ಗಂಡು ನಿನಗಾಗಿ ಕಳೆದ ಹಲವು ದಿನಗಳಿಂದ ಅಲೆದಾಡಿ, ಹುಡುಕಾಡಿ ಗಿಫ್ಟ್ ಖರೀದಿಸಿದ್ದೇನೆ. ಆನ್‌ಲೈನ್ ಮೂಲಕ ಈ ಉಡುಗೊರೆ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿ ಮಾಡಿದ್ದೇನೆ ಎಂದು ಒಂದೆರಡು ಭಾಷಣ ಮಾಡಿದ್ದಾನೆ. ಪತ್ನಿ ಕೂಡ ಹಿರಿ ಹಿರಿ ಹಿಗ್ಗಿದ್ದಾಳೆ. ಕೊನೆಗೆ ಬಾಕ್ಸ್ ಓಪನ್ ಮಾಡಿ ವಾಚ್ ತೆಗೆದು ಪತ್ನಿಯ ಕೈಗೆ ಕಟ್ಟಲು ಮುಂದಾಗಿದ್ದಾನೆ. ಆದರೆ ಪತ್ನಿ ಗರಂ ಆಗಿದ್ದಾಳೆ. ಕಾರಣ ವಾಚ್ ಒಳಗಿನ ಟ್ರಂಪ್ ಹೆಸರಿನ ಟಿ ಮಿಸ್ಸ್ ಆಗಿತ್ತು. ಟ್ರಂಪ್ ಬದಲು ರುಂಪ್ ಎಂದು ಹೆಸರಿಸಲಾಗಿತ್ತು.

ಪತಿ ಡೂಪ್ಲಿಕೇಟ್ ವಾಚ್ ಖರೀದಿಸಿದ್ದಾನೆ ಎಂದು ಪತ್ನಿ ಗರಂ ಆಗಿದ್ದಾಳೆ. ಇತ್ತ ಪತ್ನಿಗೆ ಸರ್ಪ್ರೈಸ್ ಉಡುಗೊರೆ ನೀಡಲು ಹೋಗಿ ತೀವ್ರ ನಿರಾಸೆ ಅನುಭವಿಸಿದ್ದಾನೆ. ಬಳಿಕ ಪತಿ ತನ್ನ ಆರ್ಡರ್ ಡಿಟೇಲ್ ತೋರಿಸಿದ್ದಾನೆ. ಈ ವೇಳೆ ಇದು ಕಂಪನಿ ಬೇಜಾವ್ದಾರಿಯಾಗಿ ವಾಚ್ ಕಳುಹಿಸಿದೆ. ಇಲ್ಲಾ ನಿರ್ಲಕ್ಷ್ಯ ಮಾಡಿದೆ ಎಂದು ಕಂಪನಿಗೆ ಕರೆ ಮಾಡಿ ದೂರು ದಾಖಲಿಸಲು ಮುಂದಾಗಿದ್ದಾರೆ. ಆದರೆ ಕಂಪನಿ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಈ ಮಾಹಿತಿ ಕೊನೆಗೂ ನ್ಯೂಯಾರ್ಕ್  WJAR ಮಾಧ್ಯಮಕ್ಕೆ ಈ ವಿಚಾರ ಕಿವಿಗೆ ಬಿದ್ದಿತ್ತು. ಇದು ನ್ಯೂಯಾರ್ಕ್ ತುಂಬಾ ಭಾರಿ ಪ್ರಚಾರ ಪಡೆದಿತ್ತು.

ಕಂಪನಿ ಬ್ರ್ಯಾಂಡ್ ನೇಮ್ ಮೇಲೆ ಬಾರಿ ಹೊಡೆತ ಬಿದ್ದ ಕಾರಣ ಕಂಪನಿ ತಕ್ಷಣ ಟಿಮ್ ಪೆಟಿಟ್ ಸಂಪರ್ಕಿಸಿದೆ. ಬಳಿಕ ಭೇಷರತ್ ಕ್ಷಮೆ ಕೇಳಿದೆ. ಇಷ್ಟೇ ಅಲ್ಲ 800 ಅಮೆರಿಕನ್ ಡಾಲರ್ ಕೂಪನ್ ನೀಡಿದೆ. ಹೊಸ ಟ್ರಂಪ್ ಪಿಂಕ್ ವಾಚ್ ನೀಡುವುದು ಅಸಾಧ್ಯವಾಗಿತ್ತು.ಕಾರಣ ಇದು ಲಿಮಿಟೆಡ್ ಎಡಿಶನ್ ವಾಚ್ ಆಗಿತ್ತು. ಮೊದಲು ಬುಕ್ ಮಾಡು 250 ಮಂದಿಗೆ ಮಾತ್ರ ಈ ವಾಚ್ ಲಭ್ಯವಿತ್ತು. ಹೀಗಾಗಿ ಈ ವಾಚ್ ಎಲ್ಲವೂ ಸೋಲ್ಡ್ ಔಟ್ ಆಗಿತ್ತು. 

ಪತ್ನಿಗೆ ತುಕಾಲಿ ಸಂತೋಷ್ ಭಾರಿ ಗಾತ್ರದ ಮಾಂಗಲ್ಯ ಗಿಫ್ಟ್​! ರೇಟ್​ ಕೇಳಿದೋರೇ ಸುಸ್ತಾಗೋದ್ರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!