ಅಮೆರಿಕ ವಿರುದ್ಧ ಇರಾನ್‌ ಸೈಬರ್‌ ಸಮರ ಶುರು, ವೆಬ್‌ ಸೈಟ್‌ ಹ್ಯಾಕ್!

By Suvarna News  |  First Published Jan 6, 2020, 9:13 AM IST

ಅಮೆರಿಕ ವಿರುದ್ಧ ಇರಾನ್‌ ಸೈಬರ್‌ ಸಮರ ಆರಂಭ?|  ಇರಾನ್‌ ಹ್ಯಾಕರ್‌ಗಳಿಂದ ಅಮೆರಿಕದ ವೆಬ್‌ಸೈಟ್‌ ಹ್ಯಾಕ್‌


ವಾಷಿಂಗ್ಟನ್‌[ಜ.06]: ತನ್ನ ಸೇನಾ ಕಮಾಂಡರ್‌ ಖಾಸಿಂ ಸುಲೈಮಾನಿ ಅವರನ್ನು ಹತ್ಯೆ ಮಾಡಿದ ಅಮೆರಿಕ ವಿರುದ್ಧ ಸೈಬರ್‌ ಸಮರ ಸೇರಿ ವಿವಿಧ ರೀತಿಯ ದಾಳಿಗಳನ್ನು ಇರಾನ್‌ ನಡೆಸಬಹುದು ಎಂಬ ಊಹೆ ನಿಜವಾಗುತ್ತಿರುವಂತಿದೆ. ಇದಕ್ಕೆ ಪುಷ್ಟಿನೀಡುವಂತೆ ಅಮೆರಿಕ ಸರ್ಕಾರ ನಿರ್ವಹಿಸುತ್ತಿದ್ದ ವೆಬ್‌ಸೈಟ್‌ವೊಂದನ್ನು ಇರಾನ್‌ ಹ್ಯಾಕ್‌ ಮಾಡಿರುವ ಘಟನೆ ವರದಿಯಾಗಿದೆ.

ಫೆಡರಲ್‌ ಡಿಪಾಸಿಟರಿ ಲೈಬ್ರರಿ ಪ್ರೋಗ್ರಾಮ್‌ (್ಛd್ಝp.ಜಟv) ಎಂಬ ವೆಬ್‌ಸೈಟ್‌ ಅನ್ನು ಶನಿವಾರ ಹ್ಯಾಕ್‌ ಮಾಡಲಾಗಿದೆ. ‘ದೇವರ ಹೆಸರಿನಲ್ಲಿ ಇರಾನ್‌ ಸೈಬರ್‌ ಸೆಕ್ಯುರಿಟಿ ಗ್ರೂಪ್‌ ಹ್ಯಾಕ​ರ್‍ಸ್ ಸಂಸ್ಥೆ ಈ ವೆಬ್‌ಸೈಟ್‌ ಅನ್ನು ಹ್ಯಾಕ್‌ ಮಾಡಿದೆ. ಇದು ಇರಾನ್‌ನ ಸೈಬರ್‌ ಸಾಮರ್ಥ್ಯದ ಸಣ್ಣ ಭಾಗ. ನಾವು ಯಾವತ್ತಿಗೂ ಸಿದ್ಧವಾಗಿದ್ದೇವೆ’ ಎಂಬ ಸಾಲುಗಳನ್ನು ಬರೆಯಲಾಗಿದೆ.

Tap to resize

Latest Videos

ಸಾರ್ವಜನಿಕರಿಗೆ ಉಚಿತವಾಗಿ ಸರ್ಕಾರಿ ಪ್ರಕಾಶನಗಳನ್ನು ಒದಗಿಸುವ ಉದ್ದೇಶದಿಂದ ಎಫ್‌ಡಿಎಲ್‌ಪಿಯನ್ನು ಸೃಷ್ಟಿಸಲಾಗಿದೆ. ಈ ವೆಬ್‌ಸೈಟ್‌ ಅನ್ನು ಹ್ಯಾಕ್‌ ಮಾಡುವ ಮೂಲಕ ಇರಾನ್‌ ಸೈಬರ್‌ ದಾಳಿ ಆರಂಬಿಸಿರಬಹುದು ಎಂದು ಭದ್ರತಾ ತಜ್ಞರು ಎಚ್ಚರಿಸಿದ್ದಾರೆ.

click me!