
ಆಸ್ಟಿನ್: ಅಮೆರಿಕದ ಟೆಕ್ಸಾಸ್‌ನ ಪಶ್ಚಿಮ ಭಾಗದಲ್ಲಿರುವ ಡೈರಿ ಫಾರ್ಮೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಸುಮಾರು 18 ಸಾವಿರ ಹಸುಗಳು ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ಒಂದೇ ಬಾರಿಗೆ ಇಷ್ಟೊಂದು ಪ್ರಮಾಣದ ಹಸುಗಳು ಸಾವಿಗೀಡಾಗಿರುವ ಅತಿದೊಡ್ಡ ಪ್ರಕರಣ ಎನಿಸಿಕೊಂಡಿದೆ.
ಟೆಕ್ಸಾಸ್‌ನ ಸೌತ್ ಫೋರ್ಕ್ ಡೈರಿ ಫಾರ್ಮ್‌ನಲ್ಲಿ ಸೋಮವಾರ ಈ ಸ್ಫೋಟ ಸಂಭವಿಸಿದ್ದು, ಡೈರಿಯ ಮೇಲ್ಭಾಗದಲ್ಲಿ ಗಂಟೆಗಳ ಕಾಲ ಕಪ್ಪು ಮೋಡ ಆವರಿಸಿತ್ತು. ಸ್ಫೋಟದ ಬಳಿಕ ಫಾರ್ಮ್‌ನಲ್ಲಿ ಭೀಕರವಾದ ಬೆಂಕಿ ಹೊತ್ತಿಕೊಂಡಿದ್ದು, ಈ ಬೆಂಕಿಯ ಕೆನ್ನಾಲಿಗೆಗೆ 18 ಸಾವಿರ ಹಸುಗಳು ಬಲಿಯಾಗಿವೆ. ಇವುಗಳಲ್ಲಿ ಬಹುತೇಕ ಹೋಲಿಸ್ಟೈನ್ ಮತ್ತು ಜೆರ್ಸಿ ತಳಿಗೆ ಸೇರಿದ ಹಸುಗಳಾಗಿವೆ. ಡೈರಿ ಫಾರ್ಮ್‌ನಲ್ಲಿದ್ದ ಶೇ.90ರಷ್ಟು ಹಸುಗಳು ದುರ್ಘಟನೆಯಲ್ಲಿ ಸಾವನ್ನಪ್ಪಿವೆ. ಈ ಘಟನೆಯಲ್ಲಿ ಯಾವುದೇ ಮಾನವರು ಸಾವಿಗೀಡಾಗಿಲ್ಲ. ಆದರೆ ಇಲ್ಲಿಯವರೆಗೂ ಈ ಸ್ಫೋಟಕ್ಕೆ ಕಾರಣವೇನು ಎಂಬುದು ಬೆಳಕಿಗೆ ಬಂದಿಲ್ಲ.
ಈ ದುರ್ಘಟನೆಯಿಂದ ಉಂಟಾದ ನಷ್ಟದ ಪ್ರಮಾಣವೂ ಸಹ ದೊಡ್ಡದಾಗಿದೆ. ಅಮೆರಿಕ ಟುಡೇ ವರದಿಯ ಪ್ರಕಾರ ಪ್ರತಿ ಹಸುವೂ ಸುಮಾರು 1.63 ಲಕ್ಷ ರು. ಬೆಲೆ ಬಾಳುತ್ತಿತ್ತು ಎಂದು ತಿಳಿದುಬಂದಿದೆ.
ಮದ್ವೆಗೆ ಗಿಫ್ಟ್ ಕೊಟ್ಟ ಮ್ಯೂಸಿಕ್ ಸಿಸ್ಟಂನಲ್ಲಿ ಬಾಂಬ್..! ವಧುವಿನ ಎಕ್ಸ್ ಬಾಯ್‌ಫ್ರೆಂಡ್ ಅಂದರ್
ಕೇರಳ ರೈಲಿಗೆ ಬೆಂಕಿ ಹಿಂದೆ ಉಗ್ರ ನಂಟಿನ ಶಂಕೆ; ಸಂಪೂರ್ಣ ರೈಲು ಸುಡುವ ದುರುದ್ದೇಶ: ಎನ್‌ಐಎಗೆ ಸ್ಫೋಟಕ ಸುಳಿವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ