ಅಮೆರಿಕ ಅಧ್ಯಕ್ಷರಾದವರಿಗೆ ಬಿಡುತಿಲ್ಲ ತಾಪತ್ರಯ, ಬೈಡೆನ್ ಬಳಿಕ ಟ್ರಂಪ್‌ಗೆ ಆರೋಗ್ಯ ಸಮಸ್ಯೆ

Published : Jul 20, 2025, 06:41 PM ISTUpdated : Jul 20, 2025, 06:42 PM IST
Donald Trump

ಸಾರಾಂಶ

ಈ ಬಾರಿ ಟ್ರಂಪ್ ಸರ್ಕಾರ ಸೇರಿದಂತೆ ಕಳೆದೆರಡು ಅವಧಿಯಲ್ಲಿ ಅಮೆರಿಕ ಅಧ್ಯಕ್ಷರಾಗುವವರಿಗೆ ಸಂಕಷ್ಟಗಳು ನಿವಾರಣೆಯಾಗುತ್ತಿದೆ. ಇದೀಗ ಡೋನಾಲ್ಡ್ ಟ್ರಂಪ್‌ಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಇದೇ ಆರೋಗ್ಯ ಸಮಸ್ಯೆಯಿಂದ ಜೋ ಬೈಡನ್ ಚುನಾವಣೆಯಿಂದಲೇ ಹಿಂದೆ ಸರಿದಿದ್ದರು.

ವಾಶಿಂಗ್ಟನ್ (ಜು.20) ಅಮೆರಿಕ ಅಧ್ಯಕ್ಷರಾಗುತ್ತಿರುವವರಿಗೆ ಸಂಕಷ್ಟಗಳು, ತಾಪತ್ರಯಗಳು ಹೆಚ್ಚಾಗುತ್ತಿದೆಯಾ? ಡೋನಾಲ್ಡ್ ಟ್ರಂಪ್ ಮೊದಲ ಬಾರಿಗೆ ಅಧಿಕಾರಕ್ಕೇರಿದ ಬಳಿಕ ನಾಲ್ಕೇ ವರ್ಷಕ್ಕೆ ಟ್ರಂಪ್ ಆಡಳಿತ ಅಂತ್ಯಗೊಂಡಿತ್ತು. ಬಳಿಕ ಚುನಾವಣೆ ಗೆದ್ದ ಜೋ ಬೈಡೆನ್ ಈ ಬಾರಿ ಚುನಾವಣೆ ವೇಳೆ ಅನಾರೋಗ್ಯ ಕಾರಣದಿಂದ ಸ್ಪರ್ಧಿಸದೆ ಹಿಂದೇ ಸರಿದಿದ್ದರು. ಮತ್ತೆ ಡೋನಾಲ್ಡ್ ಟ್ರಂಪ್ ಅಧಿಕಾರಕ್ಕೇರಿದ್ದಾರೆ. 2ನೇ ಬಾರಿ ಸರ್ಕಾರ ರಚಿಸಿರುವ ಡೋನಾಲ್ಡ್ ಟ್ರಂಪ್‌ಗೆ ಇದೀಗ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಈ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಡೋನಾಲ್ಡ್ ಟ್ರಂಪ್‌ಗೆ ಸಿವಿಐ ಆರೋಗ್ಯ ಸಮಸ್ಯೆ

ಅಮೆರಿಕ ಅಧ್ಯಕ್ಷ ಡೋನಾಲ್ಡ್ 2ನೇ ಅವಧಿ ಆಡಳಿತದಲ್ಲಿ ಪ್ರತಿ ದಿನ ಒಂದಲ್ಲಾ ಒಂದು ಬಾಂಬ್ ಸಿಡಿಸುತ್ತಿದ್ದಾರೆ. ಇದೀಗ ಟ್ರಂಪ್ ಆರೋಗ್ಯ ಹದಗೆಟ್ಟಿದೆ. ಡೋನಾಲ್ಡ್ ಟ್ರಂಪ್‌ಗೆ ದೀರ್ಘಕಾಲ ಸಿರೆ ಆರೋಗ್ಯ ಸಮಸ್ಯೆ (ಸಿವಿಐ )ಕಾಣಿಸಿಕೊಂಡಿದೆ. ಇದನ್ನು ನಿರ್ಲಕ್ಷಿಸಿದರೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಪ್ರಮುಖವಾಗಿ ದೇಹವು ಆಗಾಗ್ಗೆ ಆರಂಭಿಕ ತೊಂದರೆ ಸಂಕೇತಗಳನ್ನು ಕಳುಹಿಸುತ್ತದೆ . ಈ ಪೈಕಿ ಕಾಲು ಊತಗಳು ಒಂದು. CVI ವಯಸ್ಸಿಗೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಯಾಗಿದ್ದರೂ, ಇದು ಆಳವಾದ ರಕ್ತನಾಳದ ಥ್ರಂಬೋಸಿಸ್, ಹೃದಯ ವೈಫಲ್ಯ ಅಥವಾ ಮೂತ್ರಪಿಂಡದ ಆರೋಗ್ಯ ಸಮಸ್ಯೆಗಳ ಸೂಚನೆಗಳಾಗಿರುತ್ತದೆ ಎಂದಿದ್ದಾರೆ. ಹೀಗಾಗಿ ಸೂಕ್ತ ತಪಾಸಣೆ ಹಾಗೂ ಅದಕ್ಕೆ ಚಿಕಿತ್ಸೆ ಅಗತ್ಯ ಎಂದು ವೈದ್ಯರು ಸೂಚಿಸಿದ್ದಾರೆ.

ವೈಟ್ ಹೌಸ್ ವಕ್ತಾರೆ ಹೇಳಿದ್ದೇನು?

ಡೋನಾಲ್ಡ್ ಟ್ರಂಪ್ ಕೈ, ಕಾಲುಗಳಲ್ಲಿ ಊತ ಕಾಣಿಸಿಕೊಂಡಿದೆ. ಈ ಕುರಿತು ವೈಟ್‌ಹೌಸ್ ವಕ್ತಾರೆ ಕ್ಯಾರೋಲಿನ್ ಲ್ಯಾವಿಟ್ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಹಲವು ಮಾಧ್ಯಮಗಳಲ್ಲಿ ಟ್ರಂಪ್ ಕೈ ಹಾಗೂ ಕಾಲುಗಳ ಊತಗಳ ಫೋಟೋ, ವಿಡಿಯೋ ಪ್ರಸರವಾಗಿದೆ. ಟ್ರಂಪ್ ಕೈಕುಲುಕುವಾಗ, ನಡೆಯುವಾಗ ಸಿವಿಐ ಸಮಸ್ಯೆ ಎದುರಿಸಿದ್ದಾರೆ ಎಂದು ಕ್ಯಾರೋಲಿನ್ ಹೇಳಿದ್ದಾರೆ. ಡೋನಾಲ್ಡ್ ಟ್ರಂಪ್ ಪರವಾಗಿ ನಾನು ಈ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ಟ್ರಂಪ್ ಸಿವಿಐ ಆರೋಗ್ಯ ಸಮಸ್ಯೆ ನಿಯಂತ್ರಣದಲ್ಲಿದೆ. ವೈದ್ಯರ ಸೂಚನೆ ಪಾಲಿಸಲಾಗುತ್ತದೆ ಎಂದು ಕ್ಯಾರೋಲಿನ್ ಹೇಳಿದ್ದಾರೆ.

ಸಣ್ಣ ಆರೋಗ್ಯ ಸಮಸ್ಯೆ,ಯಾವುದೇ ಆತಂಕವಿಲ್ಲ

ಡೋನಾಲ್ಡ್ ಟ್ರಂಪ್ ಆರೋಗ್ಯ ಕುರಿತು ವೈಟ್ ಹೌಸ್ ಸ್ಪಷ್ಟನೆ ನೀಡಿದೆ. ಟ್ರಂಪ್‌ಗೆ ಸಿವಿಐ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ನಿಜ. ಆದರೆ ಯಾವುದೇ ಅಪಾಯವಿಲ್ಲ. ವೈದ್ಯರ ಸೂಚನೆಯಂತೆ ತಪಾಸಣೆ ಮಾಡಲಾಗಿದೆ. ಎಲ್ಲವೂ ನಿಯಂತ್ರಣದಲ್ಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!