ಹೆರಿಗೆ ಮಾಡಿಸಿಕೊಳ್ಳಲು ಅಮೆರಿಕಕ್ಕೆ ತೆರಳುವವರಿಗೆ ಬ್ರೇಕ್!

By Kannadaprabha NewsFirst Published Jan 25, 2020, 8:54 AM IST
Highlights

ಹೆರಿಗೆ ಮಾಡಿಸಿಕೊಳ್ಳಲು ಅಮೆರಿಕಕ್ಕೆ ತೆರಳುವ ಗರ್ಭಿಣಿಯರಿಗೆ ವೀಸಾ ಇಲ್ಲ| ಟ್ರಂಪ್‌ ಹೊಸ ಕ್ರಮ| ನಿನ್ನೆಯಿಂದಲೇ ಜಾರಿ| ಬರ್ತ್ ಟೂರಿಸಂ ದಂಧೆ ಮೇಲೆ ಗದಾಪ್ರಹಾರ

ವಾಷಿಂಗ್ಟನ್‌[ಜ.25]: ಹೆರಿಗೆ ಮಾಡಿಸಿಕೊಳ್ಳುವ ಉದ್ದೇಶದೊಂದಿಗೆ ಅಮೆರಿಕಕ್ಕೆ ಪ್ರಯಾಣ ಬೆಳೆಸುವ ಗರ್ಭಿಣಿಯರಿಗೆ ಬಿ-1 ಹಾಗೂ ಬಿ-2 ವೀಸಾ ನಿರಾಕರಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರ ಕೈಗೊಂಡಿದ್ದಾರೆ. ‘ಬತ್‌ರ್‍ ಟೂರಿಸಂ’ (ಜನನ ಪ್ರವಾಸೋದ್ಯಮ) ಎಂದೇ ಅಮೆರಿಕದಲ್ಲಿ ಕರೆಯಲಾಗುವ ಈ ವ್ಯವಸ್ಥೆಗೆ ಬ್ರೇಕ್‌ ಹಾಕುವ ಟ್ರಂಪ್‌ ನಿಯಮ ಶುಕ್ರವಾರದಿಂದಲೇ ಜಾರಿಗೆ ಬಂದಿದೆ.

ಯಾವಾಗ ದಂಪತಿ IVF ಬಗ್ಗೆ ಯೋಚಿಸಬೇಕು?

ಅಮೆರಿಕದಲ್ಲಿ ಯಾರೇ ಜನಿಸಿದರೂ ಅವರು ದೇಶದ ಪ್ರಜೆಯಾಗುತ್ತಾರೆ ಎಂದು ಸಂವಿಧಾನ ಹೇಳುತ್ತದೆ. ಈ ಅಂಶವನ್ನೇ ಲಾಭವಾಗಿ ಮಾಡಿಕೊಂಡಿರುವ ವಿದೇಶಿಗರು ಬಂಧುಗಳ ಭೇಟಿ, ಚಿಕಿತ್ಸೆ ಹಾಗೂ ಪ್ರವಾಸ ಹೆಸರಿನಲ್ಲಿ ಅಮೆರಿಕಕ್ಕೆ ಅತಿಥಿ ವೀಸಾ ಪಡೆದು ಆಗಮಿಸುತ್ತಾರೆ. ಇಲ್ಲೇ ಹೆರಿಗೆ ಮಾಡಿಸಿಕೊಂಡು, ಮಕ್ಕಳಿಗೆ ಪೌರತ್ವ ಪಡೆಯುತ್ತಿದ್ದಾರೆ. ತನ್ಮೂಲಕ ಅಮೆರಿಕಕ್ಕೆ ಹೊರೆಯಾಗುತ್ತಿದ್ದಾರೆ ಎಂಬ ಆರೋಪವಿದೆ.

ಈ ಹಿನ್ನೆಲೆಯಲ್ಲಿ ಯಾರೇ ಮಹಿಳೆಯರು ಹೆರಿಗೆ ಉದ್ದೇಶಕ್ಕೇ ಅಮೆರಿಕಕ್ಕೆ ಬರುತ್ತಿದ್ದಾರೆ ಎಂಬುದು ಖಚಿತವಾದರೆ ಅವರಿಗೆ ವೀಸಾ ನಿರಾಕರಿಸಲು ಹೊಸ ನಿಯಮದಡಿ ದೂತಾವಾಸ ಅಧಿಕಾರಿಗಳಿಗೆ ಅಮೆರಿಕ ಸರ್ಕಾರ ಸೂಚನೆ ನೀಡಿದೆ. ಆದರೆ, ವೀಸಾ ಅರ್ಜಿ ಸಲ್ಲಿಸುವವರಿಗೆ ತಾವು ಗರ್ಭಿಣಿಯೇ ಅಥವಾ ಗರ್ಭಿಣಿಯಾಗಲು ಬಯಸಿದ್ದೀರಿಯೇ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳದಂತೆಯೂ ತಾಕೀತು ಮಾಡಿದೆ.

ಮಗು ಮಾಡಿಕೊಳ್ಳುವಾಗ ನಿಮ್ಮನ್ನೇ ಕೇಳ್ತೇನೆ; ಯಾರಿಗೆ ಹಿಂಗಂದ್ರು ನಟಿ?

ಅಮೆರಿಕದಲ್ಲಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿಕೊಡುವ ದಂಧೆಯೇ ಇದ್ದು, ಪ್ರತಿ ಗರ್ಭಿಣಿಯರಿಂದ 1 ಲಕ್ಷ ಡಾಲರ್‌ (71 ಲಕ್ಷ ರು.) ಪಡೆಯಲಾಗುತ್ತಿತ್ತು ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

click me!