
ಕಾಬೂಲ್(ಆ.26): ಆಫ್ಘಾನಿಸ್ತಾನದಲ್ಲಿ ಉಗ್ರರನ್ನು ಹೊರತು ಪಡಿಸಿದರೆ ಇನ್ಯಾರೂ ನೆಮ್ಮದಿಯ ನಿಟ್ಟುಸಿರುಬಿಡಲು ಸಾಧ್ಯವಾಗುತ್ತಿಲ್ಲ. ತಾಲಿಬಾನ್ ಆಟ್ಟಾಹಾಸ, ಕ್ರೌರ್ಯಕ್ಕೆ ನಲುಗಿರುವ ಅಮಾಯಕ ಆಫ್ಘಾನಿಸ್ತಾನ ಜನತೆ ಮೇಲೆ ಇದೀಗ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಜನರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಸದ್ಯದ ವರದಿ ಪ್ರಕಾರ ಈ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.
ಮಹಿಳೆ ಹೊರಬಂದರೆ ಸುರಕ್ಷಿತಳಲ್ಲ, ಸತ್ಯ ಒಪ್ಪಿಕೊಂಡ ತಾಲಿಬಾನ್‌ಗಳಿಂದ ವರ್ಕ್ ಫ್ರಮ್ ಹೋಮ್‌ಗೆ ಸೂಚನೆ!
ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಈ ಬಾಂಬ್ ದಾಳಿ ನಡೆದಿದೆ. ಎರಡು ಆತ್ಮಾಹುತಿ ದಾಳಿ ಮೂಲಕ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಅಬ್ದುಲ್ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಬ್ಬೇ ಗೇಟ್ ಬಳಿ ಮೊದಲ ಬಾಂಬ್ ದಾಳಿ ನಡೆದಿದೆ. ಎರಡನೇ ಆತ್ಮಾಹುತಿ ಬಾಂಬ್ ದಾಳಿ ಬ್ಯಾರೊನ್ ಹೊಟೆಲ್ ಬಳಿ ನಡೆದಿದೆ.
ಅಬ್ಬೇ ಗೇಟ್ ಸನಿಹದಲ್ಲಿರುವ ಬ್ಯಾರೊನ್ ಹೊಟೆಲ್ ಬಳಿ ನಡೆದ ಬಾಂಬ್ ದಾಳಿಯಲ್ಲಿ ಹಲವು ವಿದೇಶಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಹಲವರನ್ನು ಅಮೆರಿಕ ಸೇನೆ ಏರ್‌ಲಿಫ್ಟ್ ಮಾಡಿದೆ. ಸುಮಾರು 60ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ.
ಹಲವು ವಿದೇಶಿ ವಿಮಾನಗಳು ಆಯಾ ದೇಶದವರನ್ನು ಸ್ಥಳಾಂತರ ಮಾಡಲು ಕಾಬೂಲ್‌ನಲ್ಲಿ ಕಾರ್ಯಚರಣೆ ನಡೆಸುತ್ತಿದೆ. ಇದೇ ವೇಳೆ ಈ ದಾಳಿ ನಡೆದಿದೆ. ಪೋಲ್ಯಾಂಡ್. ಡೆನ್ಮಾರ್ಕ್ ಹಾಗೂ ಬೆಲ್ಜಿಯಂ ದೇಶ ತಮ್ಮವರನ್ನು ಸ್ಥಳಾಂತರ ಮಾಡುತ್ತಿದೆ. ಇದರೊಂದಿಗೆ ಆಫ್ಘಾನಿಸ್ತಾನದ ಜತನೆ ದೇಶ ತೊರೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.
ಆಫ್ಘಾನಿಸ್ತಾನದ ಜನತೆ ದೇಶ ತೊರಯಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಕಾಬೂಲ್ ವಿಮಾನ ನಿಲ್ದಾಣದ ಸುತ್ತ ನೆರೆದಿದ್ದಾರೆ. ಇತ್ತ ಕಾಬೂಲ್ ವಿಮಾನ ನಿಲ್ದಾಣದ ಉಗ್ರರ ರೇಡಾರ್‌ನಲ್ಲಿರುವ ಕಾರಣ ಅಮೆರಿಕ ರಾಯಭಾರ ಕಚೇರಿ ಯುಎಸ್ ಪ್ರಜೆಗಳಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸದಂತೆ ಸೂಚನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ