
ಕಾಬೂಲ್(ಸೆ.07): ಆ.31ರಂದು ಅಮೆರಿಕದ ಯೋಧರು ಕಡೆಯದಾಗಿ ದೇಶ ತೊರೆದ ಬಳಿಕವೂ ಅಫ್ಘಾನಿಸ್ತಾನದಲ್ಲೇ ಉಳಿದುಕೊಂಡಿರುವ ಕೆಲ ಅಮೆರಿಕನ್ನರು ಮತ್ತು ಅಮೆರಿಕನ್ನರಿಗೆ ನೆರವಾಗಿದ್ದ ನೂರಾರ ಆಫ್ಘನ್ ಪ್ರಜೆಗಳನ್ನು ತಾಲಿಬಾನಿಗಳು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಲ್‌್ಖ ಪ್ರಾಂತ್ಯದಲ್ಲಿ ವಿದೇಶಕ್ಕೆ ತೆರಳಲೆಂದು ಕನಿಷ್ಠ 5 ವಿಮಾನಗಳಲ್ಲಿ ಅಮರಿಕನ್ನರು ಮತ್ತು ಹಲವು ಆಫ್ಘನ್ನರು ಏರಿ ಕುಳಿತಿದ್ದಾರೆ. ಆದರೆ ವಿಮಾನ ರಾಜಧಾನಿ ಮಝರ್ ಎ ಷರಿಫ್‌ನಿಂದ ತೆರಳದಂತೆ ತಾಲಿಬಾನಿ ಉಗ್ರರು ತಡೆಯೊಡ್ದಿದ್ದಾರೆ ಎಂದು ಅಮೆರಿಕದ ರಿಪಬ್ಲಿಕನ್ ಪಕ್ಷದ ಸಂಸದ ಮೈಕೆಲ್ ಮ್ಯಾಕೌಲ್ ಆರೋಪಿಸಿದ್ದಾರೆ.
ಪಂಜ್‌ಶೀರ್ ಸಂಪೂರ್ಣ ತಾಲಿಬಾನ್ ವಶಕ್ಕೆ
‘ಪಂಜ್‌ಶೀರ್‌ನ ಎಲ್ಲಾ 8 ಜಿಲ್ಲೆಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ಇಡೀ ಪ್ರಾಂತ್ಯ ನಮ್ಮ ವಶಕ್ಕೆ ಬಂದಿದೆ. ಇದರೊಂದಿಗೆ ಅಷ್ಘಾನಿಸ್ತಾನದಲ್ಲಿನ ಯುದ್ಧ ಮುಗಿದಿದೆ’ ಎಂದು ತಾಲಿಬಾನ್ ಸಂಘಟನೆ ಸೋಮವಾರ ಹೇಳಿಕೆ ಘೋಷಿಸಿಕೊಂಡಿದೆ. ಅಲ್ಲದೆ ತನ್ನ ವಿರುದ್ಧ ತೊಡೆ ತಟ್ಟಿದ್ದ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ನೆರೆಯ ಕಜಕಸ್ತಾನಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಿದೆ.
ಈವರೆಗೆ ಬಹುತೇಕ ಅಷ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಬಂದಿದ್ದರೂ ಪಂಜಶೀರ್ ಮಾತ್ರ ವಿರೋಧಿ ಪಡೆಗಳ ವಶದಲ್ಲಿತ್ತು. ಈ ಹಿನ್ನೆಲೆಯಲ್ಲಿ ತಾಲಿಬಾನ್ನ ಈ ಹೇಳಿಕೆಗೆ ಮಹತ್ವ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ