ಹಕ್ಕಾನಿ ಬಣದ ಜತೆ ಘರ್ಷ​ಣೆ: ಆಫ್ಘನ್‌ ಭಾವಿ ಅಧ್ಯಕ್ಷ ಬರಾದರ್‌ಗೆ ಗಾಯ!

Published : Sep 07, 2021, 09:26 AM IST
ಹಕ್ಕಾನಿ ಬಣದ ಜತೆ ಘರ್ಷ​ಣೆ: ಆಫ್ಘನ್‌ ಭಾವಿ ಅಧ್ಯಕ್ಷ ಬರಾದರ್‌ಗೆ ಗಾಯ!

ಸಾರಾಂಶ

* ಬರಾದರ್‌ ಮತ್ತು ಹಕ್ಕಾನಿ ಬೆಂಬಲಿತ ಗುಂಪುಗಳ ನಡುವೆ ಸಂಘರ್ಷ * ಆಫ್ಘ​ನ್‌ನ ಭಾವಿ ಅಧ್ಯಕ್ಷ ಎಂದೇ ಹೇಳ​ಲಾ​ಗಿ​ರುವ ಮುಲ್ಲಾ ಬರಾದರ್‌ಗೆ ಗಾಯ

ಕಾಬೂಲ್‌(ಸೆ.07): ತಾಲಿಬಾನ್‌ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್‌ ಘನಿ ಬರಾದರ್‌ ಮತ್ತು ಹಕ್ಕಾನಿ ಬೆಂಬಲಿತ ಗುಂಪುಗಳ ನಡುವೆ ಸಂಘರ್ಷ ನಡೆ​ದಿದೆ. ಈ ವೇಳೆ ಆಫ್ಘ​ನ್‌ನ ಭಾವಿ ಅಧ್ಯಕ್ಷ ಎಂದೇ ಹೇಳ​ಲಾ​ಗಿ​ರುವ ಮುಲ್ಲಾ ಬರಾದರ್‌ ಗಾಯಗೊಂಡಿದ್ದಾನೆ.

ಈ ಘಟನೆ ನಡೆದ ಬೆನ್ನಲ್ಲೇ ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಫೈಜ್‌ ಹಮೀದ್‌ ಕಾಬೂಲ್‌ಗೆ ತೆರಳಿ, ಸಂಧಾ​ನಕ್ಕೆ ಯತ್ನಿ​ಸಿ​ದ್ದಾರೆ ಎಂದು ವರ​ದಿ​ಗಳು ಹೇಳಿ​ವೆ.

ತಾಲಿಬಾನ್‌ ಅಷ್ಘಾನಿಸ್ತಾನದಲ್ಲಿ ಸರ್ಕಾರ ರಚನೆಯನ್ನು ಮುಂದೂಡಿತ್ತು. ಈ ಸಮಯದಲ್ಲಿ ಬರಾ​ದರ್‌ ಹಾಗೂ ಅನಾಸ್‌ ಹಕ್ಕಾನಿ ಬಣ​ಗಳ ನಡು​ವೆ ಶುಕ್ರ​ವಾರ ರಾತ್ರಿ ನಡುವೆ ಸಂಘರ್ಷ ಏರ್ಪಟ್ಟಿದೆ. ಕಾಬೂ​ಲ್‌​ನಲ್ಲಿ ಗುಂಡಿನ ಮೊರೆತ ಕೇಳಿ​ದೆ. ಈ ವೇಳೆ ಬರಾ​ದ​ರ್‌ಗೆ ಗಾಯ​ವಾ​ಗಿ​ದೆ ಎಂದು ಮಾಧ್ಯಮ ವರ​ದಿ​ಗಳು ಹೇಳಿ​ವೆ.

ತಾಲಿಬಾನ್‌ ಅನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ನಿಯಂತ್ರಿಸುತ್ತಿದೆ ಎಂದು ಅಷ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್‌ ಆರೋಪಿಸಿದ್ದರು ನಂತರ ಅಷ್ಘಾನಿಸ್ತಾನದಲ್ಲಿ ಈ ಘರ್ಷಣೆ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Israel election results 2026: ಇಸ್ರೇಲ್ ಸಂಸತ್ ಚುನಾವಣೆಯಲ್ಲಿ 93% ಮತ ಎಣಿಕೆ ಪೂರ್ಣ, ಯಾರಿಗೆ ಅಧಿಕಾರ? ನೆತನ್ಯಾಹುಗೆ ಸಂಕಷ್ಟ?
Ramayana Release: ಭಾರತ ಮಾತ್ರವಲ್ಲ, ಭಾರತೀಯ ಮಹಾಕಾವ್ಯ 'ರಾಮಾಯಣ' ಸಿನಿಮಾ ನೋಡಲಿವೆ 100ಕ್ಕೂ ಹೆಚ್ಚು ದೇಶಗಳು!