US Music Fest: ಸಂಗೀತ ಹಬ್ಬ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ 8 ಸಾವು, 17 ಮಂದಿ ಗಂಭೀರ!

By Suvarna NewsFirst Published Nov 6, 2021, 6:09 PM IST
Highlights
  • ಅಮೆರಿಕ ಸಂಗೀತ ರಸ ಸಂಜೆ ಸಾಂಸ್ಕೃತಿಕ ಹಬ್ಬದಲ್ಲಿ ಅವಘಡ
  • ಕಾಲ್ತುಳಿತಕ್ಕೆ 8 ಮಂದಿ ಸಾವು, 11 ಮಂದಿ ಆಸ್ಪತ್ರೆ ದಾಖಲು
  • ಅಮೆರಿಕದಲ್ಲಿ ರಾತ್ರಿ 9 ಗಂಟಗೆ ನಡೆದ ಘಟನೆ

ಹೌಸ್ಟನ್(ನ.06): ಕೊರೋನಾದಿಂದ(Coronavirus) ಸ್ಥಗಿತಗೊಂಡಿದ್ದ ಹಲವು ಕಾರ್ಯಕ್ರಮಗಳು ಮತ್ತೆ ಆರಂಭಗೊಳ್ಳುತ್ತಿದೆ. ಹೀಗೆ ಅದ್ಧೂರಿಯಾಗಿ ಆರಂಭಗಗೊಂಡ ಅಮೆರಿಕ ಅಸ್ಟ್ರೋವರ್ಲ್ಡ್ ಮ್ಯೂಸಿಕ್ ಫೆಸ್ಟಿವಲ್ ಕಾರ್ಯಕ್ರಮದ ಮೊದಲ ದಿನವೇ ಅವಘಡ ಸಂಭವಿಸಿದೆ. ಕಾರ್ಯಕ್ರಮ ಆರಂಭಗೊಂಡ ಕೆಲ ಹೊತ್ತಲ್ಲೇ ಕಾಲ್ತುಳಿತಕ್ಕೆ(Stamped) 8 ಮಂದಿ ಸಾವನ್ನಪ್ಪಿದ ಘಟನೆ ಹೌಸ್ಟನ್‌ನಲ್ಲಿ ನಡೆದಿದೆ

ಕಾಬೂಲ್‌ ಏರ್‌ಪೋರ್ಟ್‌ನಲ್ಲಿ 7 ಬ್ರಿಟನ್ ನಾಗರಿಕರ ಸಾವು!

ಟೆಕ್ಸಾಸ್‌ನಲ್ಲಿ ಆಯೋಜಿಸಲಾಗಿದ್ದ ಅಸ್ಟ್ರೋವರ್ಲ್ಡ್ ಸಂಗೀತ ಹಬ್ಬದಲ್ಲಿ ಈ ಅವಘಡ ನಡೆದಿದೆ. ಖ್ಯಾತ ಗಾಯಕ ಟ್ರಾವಿಸ್ ಸ್ಕಾಟ್ ಕಾರ್ಯಕ್ರಮ ನಡೆಸಿಕೊಡುತ್ತಿರುವ ವೇಳೆ ನೂಕು ನುಗ್ಗಲು ಸಂಭವಿಸಿದೆ. ನೂಕು ನುಗ್ಗಲಿನಿಂದ ವೇದಿಕೆ ಹತ್ತಿರದಲ್ಲಿದ್ದ ಹಲವರು ಎದೋ ನೋವಿನಿಂದ ಕುಸಿದು ಬಿದ್ದಿದ್ದಾರೆ. ಇದೇ ವೇಳೆ ಆತಂಕಗೊಂಡ ಜನ ದಿಕ್ಕುಪಾಲಾಗಿ ಕಾರ್ಯಕ್ರಮದಿಂದ ಹೊರಹೋಗಲು ಯತ್ನಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.

US Astroworld Music Fest ಕಾರ್ಯಕ್ರಮದಲ್ಲಿ 50,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ವೇದಿಕೆ ಹತ್ತಿರದಲ್ಲಿದ್ದ ಕೆಲವರು ಎದೆನೋವಿನಿಂದ ಕುಸಿದು ಬಿದಿದ್ದಾರೆ. ಮೊದಲೇ ಕಿಕ್ಕಿರಿದು ತುಂಬಿದ್ದ ಕಾರ್ಯಕ್ರಮದಲ್ಲಿ ನುಕು ನುಗ್ಗಲು ಸಂಭವಿತ್ತು. ಇತ್ತ ಆತಂಕಗೊಂಡ ಜನ ಹೊರ ಹೋಗಲು ಯತ್ನಿಸಿದ ಪರಿಣಾಮ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತಕ್ಕೆ 8 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 17ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ದಾಖಲಿಸಿದವರ ಪೈಕಿ 11 ಮಂದಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಇವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲ್ತುಳಿತಕ್ಕೆ ಸಿಲುಕಿದವರ ಪೈಕಿ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲ್ತುಳಿತದ ಪರಿಣಾಣ US Astroworld Music Fest ಕಾರ್ಯಕ್ರಮ ರದ್ದುಗೊಂಡಿದೆ. ಮೊದಲ ದಿನದ ಕಾರ್ಯಕ್ರಮ ಮಾತ್ರವಲ್ಲ ಇಂದು(ನ.06) ಆಯೋಜಿಸಲಾದ ವೀಕೆಂಡ್ ಸಂಗೀತ ಕಾರ್ಯಕ್ರಮವನ್ನು ಆಯೋಜಕರು ರದ್ದುಗೊಳಿಸಿದ್ದಾರೆ.

75 ನಿಮಿಷಗಳ ಸಂಗೀತ ಹಬ್ಬದಲ್ಲಿ ಸ್ಕಾಟ್ ಟ್ರಾವಿಸ್ ತಮ್ಮ ಗಾಯನದ ಮೂಲಕ ರಸದೌತಣ ನೀಡುತ್ತಿದ್ದರು. ಈ ವೇಳೆ ವೇದಿಕೆ ಹತ್ತಿರದಲ್ಲಿದ್ದ ಹಲವ ಸಂಗೀತ ಆಸಕ್ತರು ಅಸ್ವಸ್ಥಗೊಂಡಿರುವುದನ್ನು ಗಾಯಕ ಸ್ಕಾಟ್ ಟ್ರಾವಿಸ್ ಗಮನಿಸಿದ್ದಾರೆ. ತನ್ನ ತುರ್ತು ಆರೋಗ್ಯ ಸಿಬ್ಬಂದಿಗಳಲ್ಲಿ ಅಸ್ವಸ್ಥಗೊಂಡ ಸಂಗೀತ ಆಸಕ್ತರಿಗೆ ನೆರವು ನೀಡಲು ಮನವಿ ಮಾಡಿದ್ದರು.

ಕಲಾ ಉತ್ಸವ ವೇಳೆ ಶೂಟೌಟ್ , 20 ಜನರಿಗೆ ಗಾಯ: ಶಂಕಿತನ ಹತ್ಯೆ

ಒಂದೆರಡು ಬಾರಿ ಗಾಯನ ನಿಲ್ಲಿಸಿ ಆಸ್ವಸ್ಥಗೊಂಡ ಸಂಗೀತ ಆಸಕ್ತರಿಗೆ ನೆರವಾಗಲು ಸೂಚಿಸಿದ್ದರು. ಸಿಬ್ಬಂದಿಗಳು ವೇದಿಕೆ ಸನಿಹದಲ್ಲಿ ಕೇಳುಗರನ್ನು ವಿಚಾರಿಸಿದ್ದಾರೆ. ಇತ್ತ ಸ್ಕಾಟ್ ಟ್ರಾವಿಸ್ ಸಂಗೀತ ರಸ ಸಂಜೆ ಕಾರ್ಯಕ್ರಮ ಮುಂದುವರಿಸಿದ್ದಾರೆ. ಕೆಲ ಹೊತ್ತಲ್ಲೇ ಎದನೋವಿನಿಂದ ಹಲವರು ಕುಸಿದು ಬಿದ್ದಿದ್ದಾರೆ. ಈ ಘಟನೆಯಿಂದ ಇತರರು ಗಾಬರಿಗೊಂಡಿದ್ದಾರೆ. ಹಿಂಭಾಗದಲ್ಲಿದ್ದವರಿಗೆ ಏನು ನಡೆಯುತ್ತಿದೆ ಅನ್ನೋದು ಅರ್ಥವಾಗಲಿಲ್ಲ. ಗಾಬರಿಗೊಂಡ ಜನ ಕಾರ್ಯಕ್ರಮದಿಂದ ಹೊರಗೆ ಓಡಲು ಯತ್ನಿಸಿದ್ದಾರೆ. 50,000ಕ್ಕೂ ಹೆಚ್ಚು ಸಂಗೀತ ಆಸಕ್ತರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿದೆ. ಇದೇ ಪರಿಸ್ಥತಿಯನ್ನು ಹಲವರು ಬಳಸಿಕೊಂಡಿದ್ದಾರೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುವ ರೀತಿ ನಡೆದುಕೊಂಡಿದ್ದಾರೆ. ಹಲ್ಲೆಯೂ ನಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಆರೋಪಿಸಿದ್ದಾರೆ.

ಘಚನೆ ಕುರಿತು ಗಾಯಕ ಸ್ಕಾಟ್ ಟ್ರಾವಿಸ್ ಪ್ರತಿಕ್ರಿಯೆ ನೀಡಿದ್ದಾರೆ. ಸಂಗೀತ ರಸೆ ಸಂಜೆ ಕಾರ್ಯಕ್ರಮಕ್ಕೆ ಆಗಮಿಸಿ ನಿಧನರಾದ ಸಂಗೀತ ಆಸಕ್ತರ ಕುಟುಂಬಕ್ಕೆ ನನ್ನ ಸಂತಾಪಗಳು. ನನ್ನ ಹೃದಯ ಮಿಡಿಯುತ್ತಿದೆ. ಅನಿರೀಕ್ಷಿತ ಅವವಢ ನೋವು ತಂದಿದೆ. ತಕ್ಷಣವೇ ನೆರವಿಗೆ ಧಾವಿಸಿದ ಸ್ಥಳೀಯ ತುರ್ತು ಆರೋಗ್ಯ ಸಿಬ್ಬಂದಿಗಳಿಗೆ ಧನ್ಯವಾದ ಎಂದು ಸ್ಕಾಟ್ ಟ್ರಾವಿಸ್ ಹೇಳಿದ್ದಾರೆ. ಈ ರೀತಿ ಘಟನೆ ಯಾವತ್ತು ನಡೆಯಬಾರದು. ಆಯೋಜಕರು ಈ ಕುರಿತು ಎಚ್ಚರ ವಹಿಸಬೇಕು. ಮುಂದಿನ ಸಂಗೀತ ಹಬ್ಬಗಳಿಗೆ ಇದು ಎಚ್ಚರಿಕೆ ಗಂಟೆ ಎಂದಿದ್ದಾರೆ.

click me!