ಅಮೆರಿಕದಲ್ಲಿ 5 ರಷ್ಟು ತೀವ್ರತೆ ಭೂಕಂಪ: 45 ನಿಮಿಷಗಳಲ್ಲಿ ನಾಲ್ಕು ಸಲ ಕಂಪಿಸಿದ ಭೂಮಿ! | ವಿಡಿಯೋ

Published : Nov 29, 2026, 08:43 AM IST
Los Angeles earthquake update

ಸಾರಾಂಶ

Los Angeles earthquake update ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 5 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಕೇವಲ 45 ನಿಮಿಷಗಳಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದ್ದು, ವಿಮಾನ ನಿಲ್ದಾಣದ ಸೀಲಿಂಗ್ ಕುಸಿದಿದೆ ಮತ್ತು ಸಂಸ್ಕರಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಕ್ಯಾಲಿಫೋರ್ನಿಯಾ: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಶನಿವಾರ(ನವೆಂಬರ್.28)ರಂದು 5 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ವಿಮಾನ ನಿಲ್ದಾಣ ಸೇರಿದಂತೆ ಹಲವು ಸ್ಥಳಗಳಿಗೆ ಭಾರೀ ಪ್ರಮಾಣದ ಹಾನಿಯಾದ ಬಗ್ಗೆ ವರದಿಯಾಗಿದೆ.

ಭೂಕಂಪದ ತೀವ್ರತೆಗೆ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದ ಸೀಲಿಂಗ್ ಟೈಲ್ಸ್ ಕುಸಿದುಬಿದ್ದಿದೆ. ಇಲ್ಲಿನ ಸಂಸ್ಕರಣ ಘಟಕಕ್ಕೂ ಬೆಂಕಿ ಹೊತ್ತಿಕೊಂಡು ಹಾನಿಯಾಗಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ತಿಳಿದುಬಂದಿಲ್ಲ. ಭೂಕಂಪ ಸಂಭವಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

45 ನಿಮಿಷಗಳಲ್ಲಿ ನಾಲ್ಕು ಸಲ ಕಂಪಿಸಿದ ಭೂಮಿ

ಸಿಎನ್‌ಎನ್ ವರದಿ ಪ್ರಕಾರ, ಕೇವಲ 45 ನಿಮಿಷಗಳಲ್ಲಿ ನಾಲ್ಕು ಸಲ ಭೂಕಂಪನ ಸಂಭವಿಸಿದೆ. ಭೂಮಿ ಕಂಪಿಸಿದ ತೀವ್ರತೆ ಎಷ್ಟು ಪ್ರಬಲವಾಗಿತ್ತೆಂದರೆ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ಅಲುಗಾಡಿದವು, ಅಂಗಡಿ ಸರಕುಗಳು ಕುಸಿದುಬಿದ್ದು, ಕೆಲವೆಡೆ ಚಾವಣಿ ಟೈಲ್ಸ್, ಕಿಟಕಿಗಳ ಗಾಜು ಒಡೆದಿವೆ. ಭೂಕಂಪನ ಆಗುತ್ತಿದ್ದಂತೆ ಜನರು ಗಾಬರಿಯಿಂದ ದಿಕ್ಕಪಾಲಾಗಿ ಓಡಿದರು. ಭೂಕಂಪನದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯರು ಶೇರ್ ಮಾಡಿಕೊಂಡಿದ್ದಾರೆ.

ಅಮೆರಿಕದಲ್ಲಿ ಭೂಕಂಪನದ ದೃಶ್ಯಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಮಾನ ಲ್ಯಾಂಡ್ ಅಗುತ್ತಿರೋ ವೇಳೆಯೇ ಭೂಕಂಪ; ಎದೆ ಝಲ್ ಎನ್ನಿಸೋ ದೃಶ್ಯ Shocking Video
ಟಾಪ್ ಸಚಿವರು ಸುರಕ್ಷಿತ ಸೇನಾ ನಿವಾಸಕ್ಕೆ ಶಿಫ್ಟ್! ಇರಾನ್‌ನ 'ಡರ್ಟಿ ಬಾಂಬ್‌' ಭೀತಿಯಲ್ಲಿ ಅಮೆರಿಕ!