
ಲಿವರ್‌ಪೂಲ್(ಮೇ.04): ಭಾರತದಲ್ಲಿ ಕಳೆದ ವರ್ಷ ಹೇರಿದ್ದ ಎರಡೂವರೆ ತಿಂಗಳ ಲಾಕ್‌ಡೌನ್‌ಗೆ ಜನ ಹೈರಾಣಾಗಿದ್ದಾರೆ. ಇನ್ನೆಂದು ಲಾಕ್‌ಡೌನ್ ಬೇಡವೇ ಬೇಡ ಎನ್ನುತ್ತಿದ್ದಾರೆ. ಆದರೆ ಇಂಗ್ಲೆಂಡ್‌ನಲ್ಲಿ ಕಳೆದ ವರ್ಷ ಹೇರಿದ್ದ ಲಾಕ್‌ಡೌನ್ ಇದೀಗ ಸಂಪೂರ್ಣವಾಗಿ ಅನ್‌ಲಾಕ್ ಆಗಿದೆ. ಹೀಗಾಗಿದ್ದೇ ತಡ, ಮೊದಲ ದಿನವೇ ನೈಟ್‌ಕ್ಲಬ್ ಪಾರ್ಟಿಗೆ ಬರೋಬ್ಬರಿ 3,000 ಮಂದಿ ಹಾಜರಾಗಿದ್ದಾರೆ.
ಯುಎಇ ವಿಮಾನಕ್ಕೆ ಭಾರೀ ಬೇಡಿಕೆ.. ಅಲ್ಲಿಂದ ಎಲ್ಲಿಗೆ ಹೋಗ್ತಾರೆ?
ಇಂಗ್ಲೆಂಡ್‌ನಲ್ಲಿ ಹಂತ ಹಂತವಾಗಿ ಅನ್‌ಲಾಕ್ ಮಾಡಲಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ನೈಟ್ ಕ್ಲಬ್ ತೆರೆಯಲು ಅವಕಾಶ ನೀಡಿರಲಿಲ್ಲ. ಇದೀಗ ಇಂಗ್ಲೆಂಡ್‌ನಲ್ಲಿ ಕೊರೋನಾ ನಿಯಂತ್ರಣದಲ್ಲಿರುವ ಕಾರಣ ನೈಟ್‌ಕ್ಲಬ್ ತೆರೆಯಲು ಅನುಮತಿ ನೀಡಲಾಗಿದೆ. ಪರಿಣಾಮ ಲಿವರ್‌ಪೂಲ್‌ನ ಪ್ರಖ್ಯಾತ ನೈಟ್‌ಕ್ಲಬ್‌ನಲ್ಲಿ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಬರೋಬ್ಬರಿ 3,000 ಮಂದಿ ನಶೆ ಏರಿಸಿ ಕುಣಿದು ಕುಪ್ಪಳಿಸಿದ್ದಾರೆ.
ಒಂದು ವರ್ಷ ಹುದುಗಿಟ್ಟ ಪಾರ್ಟಿ ಮೂಡ್ ಒಮ್ಮಲೆ ಸ್ಫೋಟಗೊಂಡಿದೆ. ಹೀಗಾಗಿ ಅಂತರ ಮಾತ್ರವಲ್ಲ, ಬಿಕಿನಿ ತೊಟ್ಟ ಯುವತಿಯರ ನೃತ್ಯ, ಮ್ಯೂಸಿಕ್, ಪಾಪ್ ಗಾಯನ ಎಲ್ಲವೂ ನೈಟ್‌ಕ್ಲಬ್‌ನಲ್ಲಿ ಪಾಲ್ಗೊಂಡವರ ಕಿಕ್ ಮತ್ತಷ್ಟು ಏರಿಸಿತ್ತು. ವಿಶೇಷ ಅಂದರೆ ಇದರ ಪಾಲ್ಗೊಂಡವರ ವಯಸ್ಸು 18 ರಿಂದ 20.
ಈ ನೈಟ್ ಕ್ಲಬ್‌ನಲ್ಲಿ ಪಾಲ್ಗೊಳ್ಳಲು ಯಾವುದೇ ಕೊರೋನಾ ಮಾರ್ಗಸೂಚಿ ಪಾಲಿಸಬೇಕಿರಲಿಲ್ಲ. ಆದರೆ ಪಾರ್ಟಿಗೆ ಪಾಲ್ಗೊಳ್ಳುವವರು 24 ಗಂಟೆ ಮೀರದಂತೆ ಇರುವ ಕೊರೋನಾ ನೆಗಟೀವ್ ರಿಪೋರ್ಟ್ ಕಡ್ಡಾಯವಾಗಿ ಸಲ್ಲಿಸಬೇಕಿತ್ತು. ಎರಡು ದಿನದ ಈ ಪಾರ್ಟಿಯಲ್ಲಿ ಭಾನುವಾರ ಹಾಗೂ ಅಂತಿಮ ದಿನ 8,000 ಮಂದಿ ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ