ಫಾರಿನರ್ಸ್ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಗಿಫ್ಟ್ ನೀಡಲು ಅವಕಾಶ..!

By Suvarna NewsFirst Published May 1, 2021, 5:10 PM IST
Highlights

ಫಾರಿನ್ ಗಿಫ್ಟ್‌ಗಳಿಗೆ ಜುಲೈ ತನಕ ತೆರಿಗೆ ಇಲ್ಲ | ಆಮದು ಸುಂಕ ಸಡಿಲಿಸಿದ ಸರ್ಕಾರ

ದೆಹಲಿ(ಮೇ.01): ದೇಶದಲ್ಲಿ ಸದ್ಯ ಕೊರೋನಾ ಹೋರಾಟದಲ್ಲಿ ದೊಡ್ಡ ಹಿನ್ನಡೆಯಾಗಿರುವುದು ಆಕ್ಸಿಜನ್ ಕೊರತೆ. ಇದೀಗ ವಿದೇಶದಲ್ಲಿರುವ ಭಾರತೀಯರ ಸಂಬಂಧಿಕರು ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್‌ಗಳನ್ನು ಗಿಫ್ಟ್ ಮಾಡಬಹುದು ಎಂದು ಸರ್ಕಾರ ಹೇಳಿದೆ.

ವಾಣಿಜ್ಯ ಉದ್ದೇಶಗಳಿಗಾಗಿ ಆಮದು ನಿಯಮಗಳನ್ನು ಸ್ವಲ್ಪ ಸರಳೀಕರಿಸಲಾಗಿದ್ದು ಈ ಮೂಲಕ ವಿದೇಶದಲ್ಲಿರುವ ಭಾರತೀಯರು ತಮ್ಮ ಸಂಬಂಧಿಕರಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್  ಉಡುಗೊರೆ ನೀಡಲು ಅನುಮತಿಸಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ತಿಳಿಸಿದೆ.

ಆಕ್ಸಿಜನ್ ಕೊರತೆ: ಡಾಕ್ಟರ್ ಸೇರಿ 8 ಜನ ಕೊರೋನಾ ಸೋಂಕಿತರು ಸಾವು

ಭಾರತದ ಗೈಡ್‌ಲೈನ್ಸ್ ಪ್ರಕಾರ 1000 ರೂಪಾಯಿಗಿಂತ ಹೆಚ್ಚು ಬೆಲೆಯ ಉಡುಗೊರೆಗೆ ಜಿಎಸ್‌ಟಿ ಜೊತೆ ತೆರಿಗೆ ವಿಧಿಸಬೇಕಾಗುತ್ತದೆ. ಇದೀಗ ಸರ್ಕಾರ ಆಕ್ಸಿಜನ್ ಕುರಿತ ಸಾಮಾಗ್ರಿಗಳಿಗೆ ಸಾಮಾನ್ಯ ತೆರಿಗೆಗಳನ್ನು ಜುಲೈ ತನಕ ರದ್ದು ಮಾಡಿದೆ.

ಕೊರೋನಾ ರೋಗಿಗಳಿಗೆ ಆಕ್ಸಿಜನ್ ಕೊರತೆ ಇದ್ದು ದೇಶಾದ್ಯಂತ ಜನರು ಆಕ್ಸಿಜನ್ ಸಿಲಿಂಡರ್‌ಗಳಿಗಾಗಿ ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ತಂದಿರುವ ಈ ನಿಯಮ ಬಹಳಷ್ಟು ಜನಕ್ಕೆ ನೆರವಾಗಲಿದೆ.

click me!