ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್ ಭೇಟಿ ಬೆನ್ನಲ್ಲೇ ಇದೀಗ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಯುರ್ದದ ಭೂಮಿ ಇಸ್ರೇಲ್‌ಗೆ ಭೆಟಿ ನೀಡಿದ್ದಾರೆ.
ಟೆಲ್ ಅವೀವ್ (ಅಕ್ಟೋಬರ್ 19, 2023): ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್ ಭೇಟಿ ಬೆನ್ನಲ್ಲೇ ಇದೀಗ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸಹ ಯುದ್ಧಭೂಮಿಗೆ ಲ್ಯಾಂಡ್ ಆಗಿದ್ದಾರೆ. ಇಸ್ರೇಲ್‌ನ ಪ್ರಮುಖ ನಗರ ಟೆಲ್ ಅವೀವ್‌ಗೆ ಯುಕೆ ಪ್ರಧಾನಿ ಹಾಗೂ ಭಾರತದ ಅಳಿಯ ರಿಷಿ ಸುನಕ್ ಬಂದಿಳಿದಿದ್ದಾರೆ. ಬಳಿಕ ಇಂದು ಇಸ್ರೆಲ್ ಪ್ರಧಾನಿಯನ್ನು ಭೇಟಿ ನೀಡಲಿದ್ದಾರೆ.
ಅಮರಿಕ ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್ ಬೇಟಿ ಬಳಿಕ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಇಸ್ರೇಲ್‌ಗೆ ಆಗಮಿಸಿದ್ದಾರೆ. ಟೆಲ್ ಅವೀವ್ ವಿಮಾನ ನಿಲ್ದಾಣಕ್ಕೆ ರಿಷಿ ಸುನಕ್ ಆಗಮಿಸಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನ ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿರೋದನ್ನು ರಿಷಿ ಸುನಕ್ ಖಂಡಿಸಿದ್ದು, ಈ ರೀತಿಯ ಭೀಕರ ಯುದ್ಧದ ಸ್ಥಿತಿಯನ್ನ ತಡೆಗಟ್ಟಬೇಕಿದೆ ಎಂದು ತಿಳಿಸಿದ್ದಾರೆ. ಸದ್ಯ ಇಸ್ರೇಲ್ ಗೆ ರಿಷಿ ಸುನಕ್ ಭೇಟಿ ನೀಡಿದ್ದಾರೆ. ಭಾರತ, ಯುಎಸ್ಎ, ಬ್ರಿಟನ್ ದೇಶಗಳು ಇಸ್ರೇಲ್ ಗೆ ಬೆಂಬಲ ಸೂಚಿಸಿರುವುದು ಬೆಂಜಮಿನ್ ನೆತನ್ಯಾಹು ಬಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನು ಓದಿ: ಹಮಾಸ್ ಮೇಲೆ ಇನ್ನೂ ಆರಂಭವಾಗದ ಭೂಸೇನೆ ದಾಳಿ: ನಾಳೆ ಇಸ್ರೇಲ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮಹತ್ವದ ಭೇಟಿ
ಇಸ್ರೇಲ್ - ಗಾಜಾ ಸಂಘರ್ಷವನ್ನು ತಣ್ಣಗಾಗಿಸುವ ಪ್ರಯತ್ನದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗುರುವಾರ ಇಸ್ರೇಲ್‌ಗೆ ತೆರಳಿದ್ದು, ಬಳಿಕ ಆ ಪ್ರದೇಶದ ಇತರ ದೇಶಗಳಿಗೆ ತೆರಳಲಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. "ಅಲ್ ಅಹ್ಲಿ ಆಸ್ಪತ್ರೆಯ ಮೇಲಿನ ದಾಳಿಯು ಈ ಪ್ರದೇಶದಲ್ಲಿ ಮತ್ತು ಪ್ರಪಂಚದಾದ್ಯಂತದ ನಾಯಕರು ಸಂಘರ್ಷದ ಮತ್ತಷ್ಟು ಅಪಾಯಕಾರಿ ಉಲ್ಬಣವನ್ನು ತಪ್ಪಿಸಲು ಒಗ್ಗೂಡುವ ಕ್ಷಣವಾಗಿರಬೇಕು" ಎಂದು ರಿಷಿ ಸುನಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಈ ಪ್ರಯತ್ನದಲ್ಲಿ ಯುಕೆ ಮುಂಚೂಣಿಯಲ್ಲಿದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ." "ಹಮಾಸ್‌ನ ಅನಾಗರಿಕ ಭಯೋತ್ಪಾದನೆ ಮತ್ತು ಮಾನವ ಜೀವನದ ಕಡೆಗಣನೆಯು ಈ ಪ್ರದೇಶದಲ್ಲಿ ಸಂಘರ್ಷದ ಮತ್ತಷ್ಟು ಉಲ್ಬಣಕ್ಕೆ ವೇಗವರ್ಧಕವಾಗಲು ಬಿಡಬಾರದು" ಎಂದೂ ರಿಷಿ ಸುನಕ್ ಅಂತರರಾಷ್ಟ್ರೀಯ ಸಮುದಾಯಕ್ಕೆ ಹೇಳಿದ್ದಾರೆ.
ಇದನ್ನೂ ಓದಿ: ಹಮಾಸ್ ಉಗ್ರರಿಂದ ಹತ್ಯೆಯಾದ ಮಗಳು: ಫೋನ್, ಆ್ಯಪಲ್ ವಾಚ್ ಬಳಸಿ ಶವ ಪತ್ತೆಹಚ್ಚಿದ ತಂದೆ
ರಿಷಿ ಸುನಕ್ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಭೇಟಿಯಾಗಲಿದ್ದಾರೆ. ಇನ್ನೊಂದೆಡೆ, ಬ್ರಿಟಿಷ್ ಪ್ರಧಾನ ಮಂತ್ರಿಯ ಪ್ರವಾಸದ ಜೊತೆಗೆ, ಅವರ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಈಜಿಪ್ಟ್, ಟರ್ಕಿ ಮತ್ತು ಕತಾರ್‌ಗೆ "ಮುಂದಿನ ದಿನಗಳಲ್ಲಿ" ಭೇಟಿ ನೀಡಲಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ಮಾಹಿತಿ ನೀಡಿದೆ.
ಇದನ್ನೂ ಓದಿ: ಇಸ್ರೇಲ್ ಸೈನಿಕರಿಗೆ ಉಚಿತ ಊಟ ಘೋಷಣೆ: ಮೆಕ್‌ಡೊನಾಲ್ಡ್ಸ್ ಔಟ್ಲೆಟ್ ಮೇಲೆ ಪ್ಯಾಲೆಸ್ತೀನ್ ಬೆಂಬಲಿಗರ ದಾಳಿ!