UK Covid rules ಮಾಸ್ಕ್, ನೆಗಟೀವ್ ವರದಿ ಕಡ್ಡಾಯವಲ್ಲ ಯುಕೆಯಲ್ಲಿ ಕೊರೋನಾ ನಿಯಮ ಸಡಿಲಿಕೆ!

By Suvarna NewsFirst Published Jan 20, 2022, 9:12 PM IST
Highlights
  • ಲಂಡನ್ ಸೇರಿದಂತೆ ಯುಕೆಯಲ್ಲಿ ಮಿತಿ ಮೀರಿದ ಕೊರೋನಾ
  • ಸ್ಕಾಟ್‌ಲ್ಲೆಂಡ್, ವೇಲ್ಸ್ ಸೇರಿದಂತೆ ಯುಕೆಯಲ್ಲಿ ಕಠಿಣ ನಿಯಮ
  • ಸದ್ಯ ಜಾರಿಯಲ್ಲಿರುವ ಹಾಗೂ ಜ.26ರಿಂದ ಜಾರಿಯಾಗಲಿರುವ ನಿಯಮ ಮಾಹಿತಿ

ಲಂಡನ್(ಜ.20):  ಭಾರತದಲ್ಲಿ ಕೊರೋನಾ ವೈರಸ್(Coronavirus) ಹಾವು ಏಣಿ ಆಟವಾಡುತ್ತಿದೆ. ಕೊರೋನಾ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗಾಗಿ ಹಲವು ರಾಜ್ಯಗಳಲ್ಲಿ ನಿರ್ಬಂಧನೆಗಳು ಜಾರಿಯಲ್ಲಿದೆ. ಇನ್ನು ಯೂರೋಪ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದೆ. ಇತ್ತ ಯುನೈಟೆಡ್ ಕಿಂಗ್ಡಮ್‌ನಲ್ಲಿ(United Kingdom) ಕೊರೋನಾ ಗಣನೀಯವಾಗಿ ಇಳಿಕೆಯಾಗಿಲ್ಲ. ಇದರ ನಡುವೆ ಯುಕೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ವಿಧಿಸಿದ್ದ ಕಠಿಣ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ.

ಯುಕೆ ಪ್ರಧಾನಿ ಬೊರಿಸ್ ಜಾನ್ಸನ್(Boris Johnson) ಹೊಸ ಕೋವಿಡ್ ನಿಯಮ(Covid guidelines) ಘೋಷಿಸಿದ್ದಾರೆ. ಜನವರಿ 27 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಹಲವು ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ.

Covid-19 Crisis: ಹೋಂ ಐಸೋಲೇಷನ್‌ಗೆ ಹೊಸ ಮಾರ್ಗಸೂಚಿ: ಬಿಬಿಎಂಪಿಯಿಂದ ಔಷಧಿ ಕಿಟ್‌

  • ಯುಕೆಯಲ್ಲಿ ಯಾವುದೇ ಸ್ಥಳ, ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಲಸಿಕಾ ಪ್ರಮಾಣಪತ್ರ ಹಾಗೂ ಕೋವಿಡ್ ನೆಗಟೀವ್ ವರದಿ ಕಡ್ಡಾಯವಲ್ಲ. 
  • ಕೊರೋನಾ ಸೋಂಕಿನಿಂದ ಗುಣಮಖರಾದವರು ಪಬ್, ನೈಟ್ ಕ್ಲಬ್ ಸೇರಿದಂತೆ ಕೆಲ್ ಪ್ರದೇಶಕ್ಕೆ ಪ್ರವೇಶಿಸಲು ಕೋವಿಡ್ ನೆಗಟೀವ್ ವರದಿ ಕಡ್ಡಾಯ ಮಾಡಲಾಗಿದೆ.
  • ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯವಲ್ಲ, ಆದರೆ ಕೆಲ ಸ್ಥಳದಲ್ಲಿ ಮಾಸ್ಕ್ ಕಡ್ಡಾಯವಾಗಿದೆ ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ಸ್ಪಷ್ಟಪಡಿಸಿದ್ದಾರೆ
  • ಯುಕೆ ಪ್ರವೇಶಿಸವ ಪ್ರವಾಸಿಗರು ಸೇರಿದಂತೆ ಎಲ್ಲರಿಗೆ ಜಾರಿಯಲ್ಲಿದ್ದ ಕ್ವಾರಂಟೈನ್ ನಿಯಮದಲ್ಲೂ ಸಡಿಲಿಕೆ ಮಾಡಲಾಗಿದೆ.
  • ಜನವರಿ 27 ರಿಂದ ವರ್ಕ್ ಫ್ರಮ್ ಹೋಮ್ ಕಡ್ಡಾಯವಲ್ಲ, ಕಚೇರಿಗೆ ತೆರಳಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ.
  • ಜನವರಿ 20 ರಿಂದ ಸೆಕೆಂಡರಿ ಶಾಲಾ ಕೊಠಡಿಗಳಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ.
  • ಒಳಾಂಗಣ ಸಭೆ, ಚಿತ್ರಮಂದಿರ, ಶಾಪಿಂಗ್ ಮಾಲ್, ಸಾರ್ವಜನಿಕ ಬಸ್, ಬ್ಯೂಟಿ ಸಲೂನ್ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆಧರೆ ರೆಸ್ಟೋರೆಂಟ್, ಜಿಮ್ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಇದು ಅಸಾಧ್ಯವಾದ ಕಾರಣ ಮಾಸ್ಕ್ ಕಡ್ಡಾಯ ಮಾಡಿಲ್ಲ.
  • ಶಾಲಾ ಶಿಕ್ಷಕರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿರಬೇಕು. ನೆಗಟೀವ್ ವರದಿ ಕಡ್ಡಾಯವಾಗಿದೆ. ಇನ್ನು ಫೇಸ್ ಕವರಿಂಗ್ ಶೀಲ್ಡ್ ಬಳಕೆ ಮಾಡಬೇಕು.

ಕಚೇರಿಗೆ ಬರುವ ಉದ್ಯೋಗಿಗಳಿಗೆ ವಾರಕ್ಕೊಮ್ಮೆ ಕೋವಿಡ್ 19 ಟೆಸ್ಟ್‌ ಕಡ್ಡಾಯ: ಗೂಗಲ್

ಸ್ಕಾಟ್‌ಲೆಂಡ್‌ನಲ್ಲಿ ಕೊರೋನಾ ನಿಯಮ ಸಡಿಲಿಕೆ:

  • ಕ್ರಿಸ್ಮಸ್ ಕಾರಣ ಸ್ಕಾಟ್‌ಲೆಂಡ್‌ನಲ್ಲಿ ಕಠಿಣ ಕೊರೋನಾ ನಿಯಮ ಜಾರಿ ಮಾಡಲಾಗಿತ್ತು. ಇದೀಗ ಈ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ. ಸ್ಕಾಟ್‌ಲೆಂಡ್ ಮಂತ್ರಿ ನಿಕೋಲಾ ಸ್ಟರ್ಜಾನ್ ಘೋಷಿಸಿದ್ದಾರೆ. ಈ ಪ್ರಕಾರ ಜನವರಿ 24 ರಿಂದ ಹೊಸ ನಿಯಮ ಜಾರಿಗೆ ಬರಲಿದೆ.
  • ಸ್ಕಾಟ್‌ಲೆಂಡ್‌ನ ಎಲ್ಲಾ ನೈಟ್ ಕ್ಲಬ್ ಮತ್ತೆ ಆರಂಭಗೊಳ್ಳಲಿದೆ.
  • ಒಳಾಂಗಣದ ಸಭೆ ಸಮಾರಂಭಗಳಿಗಿದ್ದ 100 ರಿಂದ 200 ಮಂದಿ ಮಾತ್ರ ಪ್ರವೇಶ ನಿಯಮವನ್ನು ತೆಗೆದುಕಹಾಕಲಾಗಿದೆ.
  • ಒಳಾಂಗಣದಲ್ಲಿನ ಸೇವೆ, ಟೇಬಲ್ ಸರ್ವೀಸ್‌ಗಳಲ್ಲಿ ಸಾಮಾಜಿಕ ಅಂತರ ಪಾಲಿಸುವ ಅಗತ್ಯವಿಲ್ಲ
  • ಮನೆಯಲ್ಲಿನ ಭೇಟಿಗಳಿಗೆ ಯಾವುದೇ ನಿರ್ಬಂಧಗಳಿಲ್ಲ
  • ಒಳಾಂಗಣ ಕ್ರೀಡೆ ಸೇರಿದಂತೆ ಎಲ್ಲಾ ಚಟುವಟಿಕೆಗೆ ಆರಂಭಿಸಲು ಅನುಮತಿ ನೀಡಲಾಗಿದೆ. ಕೆಲ ಪ್ರದೇಶದಲ್ಲಿ ನಿರ್ಬಂಧಗಳನ್ನು ಮುಂದುವರಿಸಲಾಗಿದೆ.

ವೇಲ್ಸ್‌ನಲ್ಲೂ ಕೋವಿಡ್ ನಿಯಮ ಸಡಿಲಿಕೆ:

  • ವೇಲ್ಸ್‌ನಲ್ಲಿ ಕೋವಿಡ್ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ. ಸಭೆ ಸಮಾರಂಭಗಳಲ್ಲಿ ಹಾಜರಾತಿ 500ಕ್ಕೆ ಏರಿಸಲಾಗಿದೆ.
  • ಕ್ರೀಡಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಕಾರ್ಡಿಫ್‌ನಲ್ಲಿ ಆಯೋಜಿಸಲು ನಿರ್ಧರಿಸಿರುವ 6 ರಾಷ್ಟ್ರದ ಕ್ರೀಡಾ ಸಮಾರಂಭಕ್ಕೂ ಚಾಲನೆ ನೀಡಲಾಗಿದೆ
  • ಜನವರಿ 29ರಿಂದ ವೇಲ್ಸ್‌ನ ಎಲ್ಲಾ ನೈಟ್‌ಕ್ಲಬ್ ಪಬ್ಸ್, ರೆಸ್ಟೋರೆಂಟ್ ತೆರೆಯಲು ಅನುಮತಿಸಲಾಗಿದೆ. ಆದರೆ ಸಿನಿಮಾ ಮಂದಿರ, ದೊಡ್ಡ ಸಭೆ ಸಮಾರಂಭಗಳಿಗೆ ಕೋವಿಜ್ ನೆಗಟೀವ್ ವರದಿ ಕಡ್ಡಾಯವಾಗಿದೆ.
  • ಸಾರ್ವಜನಿಕ ಪ್ರದೇಶದಲ್ಲಿ ಸಾರ್ವಜನಿಕ ಅಂತರ ಕಾಪಾಡಿಕೊಳ್ಳುವ ನಿಯಮವನ್ನು ಮುಂದುವರಿಸಲಾಗಿದೆ.
click me!