
ಹವಾಯಿ (ಫೆಬ್ರವರಿ 14, 2023): ಯುನೈಟೆಡ್ ಏರ್‌ಲೈನ್ಸ್ ವಿಮಾನವು ಟೇಕ್-ಆಫ್ ಆದ ಸ್ವಲ್ಪ ಸಮಯದ ನಂತರ 21 ಸೆಕೆಂಡುಗಳ ಕಾಲ ಪೆಸಿಫಿಕ್ ಸಾಗರದ ಕಡೆಗೆ ಧುಮುಕಿದಂತಾದ ಅಥವಾ ಡೈವ್ ಹೊಡೆದ ಭಯಾನಕ ಘಟನೆ ನಡೆದಿದೆ. ಸಮುದ್ರ ಮಟ್ಟದಿಂದ 800 ಅಡಿಗಳಷ್ಟು ಕೆಳಗೆ ವಿಮಾನ ಹಾರಾಟ ನಡೆಸುತ್ತಿತ್ತು ಎಂದು ಸಿಎನ್‌ಎನ್‌ನಲ್ಲಿನ ವರದಿಯೊಂದು ತಿಳಿಸಿದೆ. ಫ್ಲೈಟ್ ಟ್ರ್ಯಾಕಿಂಗ್ ಡೇಟಾವನ್ನು ಆಧರಿಸಿ ಕಳೆದ ವರ್ಷ ಡಿಸೆಂಬರ್ 18 ರಂದು ಯುನೈಟೆಡ್ ಏರ್‌ಲೈನ್ಸ್ ಫ್ಲೈಟ್ 1722 ಹವಾಯಿಯಿಂದ ಹೊರಟಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಆದರೆ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿರುವ ಬಗ್ಗೆ ಏರ್‌ಲೈನ್ಸ್ ಅಥವಾ ಯುನೈಟೆಡ್ ಸ್ಟೇಟ್ಸ್‌ನ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಮಾಹಿತಿ ನೀಡಿಲ್ಲ ಎಂದು ಔಟ್‌ಲೆಟ್ ವರದಿ ಮಾಡಿದೆ. ಟೇಕ್-ಆಫ್ ಆದ ಒಂದು ನಿಮಿಷದ ನಂತರ ವಿಮಾನ ಭಯಾನಕವಾಗಿ ಡೈವ್ ಹೊಡೆದಿದ್ದು, ತಾನು ಹಾರುತ್ತಿದ್ದ ಎತ್ತರಕ್ಕಿಂತ ಅರ್ಧಕ್ಕಿಂತ ಕಡಿಮೆ ಎತ್ತರದಲ್ಲಿ 21 ಸೆಕೆಂಡುಗಳ ಕಾಲ ಹಾರಾಟ ನಡೆಸಿದೆ ಎಂದು ಸಿಎನ್ಎನ್ ವರದಿ ಹೇಳಿದೆ.ಅಂದರೆ, 2,200 ಅಡಿ ಎತ್ತರದಲ್ಲಿ ಹಾರಾಟ ನಡೆಸಿದ್ದ ವಿಮಾನ 1,425 ಅಡಿಯಷ್ಟು ಕೆಳಕ್ಕೆ ಇಳಿಯಿತು ಎಂದು FlightRadar24 ಮಾಹಿತಿ ನೀಡಿದೆ. ಬಳಿಕ, ಮಾಯಿ ದ್ವೀಪದ ಮೇಲಿದ್ದ ವಿಮಾನವು ಮತ್ತೆ ಎತ್ತರಕ್ಕೆ ಹಾರಿದೆ ಎಂದು ಡೇಟಾ ಮತ್ತಷ್ಟು ಮಾಹಿತಿ ನೀಡಿದೆ.
ಇದನ್ನು ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್
ಆ ದಿನ ಬೋಯಿಂಗ್ 777 ನಲ್ಲಿದ್ದ ಪ್ರಯಾಣಿಕರಲ್ಲಿ ಒಬ್ಬರಾದ ರಾಡ್ ವಿಲಿಯಮ್ಸ್ ಈ ಸಂಬಂಧ ಸಿಎನ್‌ಎನ್‌ಗೆ ಮಾಹಿತಿ ನೀಡಿದ್ದಾರೆ. ನೀವು ರೋಲರ್ ಕೋಸ್ಟರ್‌ನ ಮೇಲ್ಭಾಗಕ್ಕೆ ಹತ್ತುತ್ತಿರುವಂತೆ ಭಾಸವಾಯಿತು. ಅದು ನಿಜಕ್ಕೂ ಆ ಹಂತದಲ್ಲಿತ್ತು. ಈ ವೇಳೆ ವಿಮಾನದಲ್ಲಿ ಹಲವರು ಕಿರುಚಾಟ ನಡೆಸಿದ್ದು ಕೇಳಿಬಂದಿದೆ. ಏನೋ ಅಸಾಮಾನ್ಯವಾಗಿದೆ ಅಥವಾ ಇದು ಸಾಮಾನ್ಯವಲ್ಲ ಎಂದು ಕನಿಷ್ಠ ಎಲ್ಲರಿಗೂ ತಿಳಿದಿತ್ತು ಎಂದೂ ಅವರು ಹೇಳಿದ್ದಾರೆ.
ಈ ಪ್ರದೇಶದಾದ್ಯಂತ ಗುಡುಗು ಮತ್ತು ತುಂತುರು ಮಳೆ ಬೀಳುತ್ತಿದ್ದ ಸಮಯದಲ್ಲಿ ವಿಮಾನವು ಹವಾಯಿಯಿಂದ ಹೊರಟಿತು. ಆ ದಿನ, ಮಾಯಿ ದ್ವೀಪವು ಹಠಾತ್ ಪ್ರವಾಹದ ಎಚ್ಚರಿಕೆಯಲ್ಲಿತ್ತು ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ. ಬಳಿಕ, ವಿಮಾನವು ತನ್ನ ಪ್ರಯಾಣವನ್ನು ಮುಂದುವರೆಸಿತು ಮತ್ತು ಸ್ಥಳೀಯ ಕಾಲಮಾನ ರಾತ್ರಿ 9.03 ಕ್ಕೆ ಸ್ಯಾನ್ ಫ್ರಾನ್ಸಿಸ್ಕೋ ತಲುಪಿತು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇಳಿದ ನಂತರ ಪೈಲಟ್‌ಗಳು ಸೂಕ್ತ ಸುರಕ್ಷತಾ ವರದಿಯನ್ನು ಸಲ್ಲಿಸಿದ್ದಾರೆ ಎಂದು ಯುನೈಟೆಡ್ ಏರ್‌ಲೈನ್ಸ್ ಹೇಳಿದೆ ಎಂದೂ ಎನ್‌ಬಿಸಿ ನ್ಯೂಸ್ ತಿಳಿಸಿದೆ.
ಇದನ್ನೂ ಓದಿ: ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!
ಅಲ್ಲದೆ, ವಿಮಾನಯಾನ ಸಂಸ್ಥೆಯು ತನಿಖೆ ನಡೆಸಿದ FAAಗೆ ಸಹಕಾರ ನೀಡಿದರು ಎಂದು ಹೇಳಿದ್ದು, ಬಳಿಕ ಪೈಲಟ್‌ಗಳು ಹೆಚ್ಚುವರಿ ತರಬೇತಿಯನ್ನು ಪಡೆದರು ಎಂದೂ ತಿಳಿದುಬಂದಿದೆ. ಆ ವಿಮಾನವನ್ನು ಹಾರಿಸಿದ ಪೈಲಟ್‌ಗಳು 25,000 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ಅಲ್ಲದೆ, ತನಿಖೆಯ ಸಮಯದಲ್ಲಿ ಅವರು ಅಧಿಕಾರಿಗಳಿಗೆ ಸಹಕರಿಸಿದರು ಎಂದೂ ಯುನೈಟೆಡ್ ವಿಮಾನಯಾನ ಸಂಸ್ಥೆ ಹೇಳಿದೆ.
ಒಳ್ಳೆಯ ವಿಷಯವೆಂದರೆ ನೀವು ಇಬ್ಬರು ತರಬೇತಿ ಪಡೆದ ಪೈಲಟ್‌ಗಳನ್ನು ಹೊಂದಿದ್ದೀರಿ ಮತ್ತು ಅವರು ಇದನ್ನು ದೊಡ್ಡ ದುರಂತವಾಗದಂತೆ ತಡೆಯಲು ಸಮರ್ಥರಾಗಿದ್ದಾರೆ ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ 737 ಕ್ಯಾಪ್ಟನ್ ಸಮ್ವಾಲ್ಟ್ ಈ ಘಟನೆಯ ಬಗ್ಗೆ ಸಿಬಿಎಸ್ ನ್ಯೂಸ್‌ಗೆ ತಿಳಿಸಿದ್ದಾರೆ.
ಹವಾಯಿಯಿಂದ ಹೊರಡುವ ಮತ್ತೊಂದು ವಿಮಾನವು ಅದೇ ದಿನ ತೀವ್ರ ಪ್ರಕ್ಷುಬ್ಧತೆಯನ್ನು ಅನುಭವಿಸಿತು. ಆ ವೇಳೆ 25 ಜನರು ಗಾಯಗೊಂಡಿದ್ದರು ಎಂದೂ ಸಿಬಿಎಸ್ ನ್ಯೂಸ್ ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ವಿದೇಶಕ್ಕೆ ಹೋಗೋ ಪ್ಲ್ಯಾನ್ ಇದ್ಯಾ..? ಹಾಗಾದ್ರೆ ಇಲ್ಲಿಗೆ ಹೋಗೋಕೆ ಸಿಗುತ್ತೆ 5 ಲಕ್ಷ ಉಚಿತ ವಿಮಾನ ಟಿಕೆಟ್..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ