(ಮಾ.2):ಉಕ್ರೇನ್ ವ್ಯಕ್ತಿಯೊಬ್ಬ ಬಾಯಲ್ಲಿ ಸಿಗರೇಟ್ ಇಟ್ಟುಕೊಂಡು ನೆಲಬಾಂಬೊಂದನ್ನು ಕೈಯಲ್ಲೆತ್ತಿಕೊಂಡು ಹೋಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಲಬಾಂಬೊಂದನ್ನು ನೋಡಿ ಉಕ್ರೇನ್ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಬರುವವರೆಗೂ ಕಾಯದ ಈತ ಅದನ್ನು ಹಾಗೆಯೇ ಬರಿಗೈಯಲ್ಲಿ ಹಿಡಿದುಕೊಂಡು ರಸ್ತೆಯೊಂದು ದಾಟಿ ಜನ ವಾಸವಿಲ್ಲದ ಪ್ರದೇಶದತ್ತ ತೆರಳುತ್ತಾನೆ.
ಪ್ರಬಲ ರಷ್ಯಾಕ್ಕೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ಉಕ್ರೇನ್ (Ukraine) ಜನರ ಹೋರಾಟ ನಿಜಕ್ಕೂ ಶಕ್ತಿಶಾಲಿ ರಷ್ಯಾವನ್ನು ಬೆಚ್ಚಿ ಬೀಳಿಸುತ್ತಿದೆ. ಉಕ್ರೇನ್‌ನ ಯೋಧರು ಹಾಗೂ ನಾಗರಿಕರು ರಷ್ಯಾ(Russia) ಸೇನೆಗೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ಅನೇಕ ಸಾಹಸ ದೃಶ್ಯಗಳು ಈಗಾಗಲೇ ಕ್ಯಾಮರಾದಲ್ಲಿ ಸೆರೆಯಾಗಿದೆ. ಉಕ್ರೇನ್ ಜನರ ಧೈರ್ಯವಂತಿಕೆಗೆ ಜಗತ್ತಿನಾದ್ಯಂತ ಜನ ಭೇಷ್ ಎನ್ನುತ್ತಿದ್ದಾರೆ. ಅಂತಹದೇ ಇನ್ನೊಂದು ದೃಶ್ಯ ಇದಾಗಿದ್ದು, ಈ ವಿಡಿಯೋದಲ್ಲಿ ಉಕ್ರೇನ್ ವ್ಯಕ್ತಿಯೊಬ್ಬ ಬಾಯಲ್ಲಿ ಸಿಗರೇಟ್ ಇಟ್ಟುಕೊಂಡು ಯಾವುದೇ ಮುಂಜಾಗೃತೆ ವಹಿಸದೇ ಬರಿಗೈಲಿ ಈ ನೆಲಬಾಂಬ್‌ನ್ನು ಎತ್ತಿಕೊಂಡು ದೂರ ಸಾಗಿಸುತ್ತಾನೆ.
ಈ ವ್ಯಕ್ತಿ ಕಪ್ಪು ಪಫರ್ ಕೋಟ್ ಮತ್ತು ಜೀನ್ಸ್ ಧರಿಸಿ ಬರ್ಡಿಯಾನ್ಸ್ಕ್‌ನಲ್ಲಿ (Berdyansk) ರಸ್ತೆಬದಿಯಲ್ಲಿ ನೆಲಬಾಂಬೊಂದನ್ನು ಕಂಡಿದ್ದು, ಉಕ್ರೇನಿಯನ್ ಬಾಂಬ್ ನಿಷ್ಕ್ರಿಯ ಘಟಕಕ್ಕೆ ಕಾಯದೇ ದೂರ ಸಾಗಿಸುತ್ತಾರೆ. ದಿ ನ್ಯೂ ವಾಯ್ಸ್ ಆಫ್ ಉಕ್ರೇನ್ (The New Voice of Ukraine) ಎಂಬ ಟ್ವಿಟ್ಟರ್ ಖಾತೆ ಈ ವೀಡಿಯೊವನ್ನು ಟ್ವಿಟ್ ಮಾಡಿದೆ. ಬರ್ಡಿಯಾನ್ಸ್ಕ್‌ನಲ್ಲಿರುವ ಉಕ್ರೇನಿಯನ್ ರಸ್ತೆಯಲ್ಲಿ ನೆಲಬಾಂಬೊಂದನ್ನು ಗುರುತಿಸಿದ ವ್ಯಕ್ತಿ ಬಾಂಬ್ ನಿಷ್ಕ್ರಿಯ ತಂಡಕ್ಕೆ ಕಾಯದೇ ಕೈಯಲ್ಲೆತ್ತಿಕೊಂಡು ಹೋಗಿ ದೂರ ಎಸೆದಿದ್ದಾರೆ. ಈ ಮೂಲಕ ಉಕ್ರೇನ್ ಮಿಲಿಟರಿಗೆ ದಾರಿ ಸುಗಮ ಮಾಡಿದ್ದಾರೆ ಎಂದು ಟ್ವಿಟ್ಟರ್ ಪೇಜ್ ಬರೆದುಕೊಂಡಿದೆ.
Ukraine Crisis: ರಷ್ಯಾದಿಂದ ‘ವ್ಯಾಕ್ಯೂಂ ಬಾಂಬ್’ ದಾಳಿ, ಮನುಷ್ಯರ ದೇಹವೇ ಆವಿ!
ಈ ವಿಡಿಯೋವನ್ನು ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಬರಿಗೈಲಿ ನೆಲಬಾಂಬ್ ಎತ್ತಿಕೊಂಡು ಹೋಗಿ ಧೈರ್ಯವಂತಿಕೆ ತೋರಿದ ವ್ಯಕ್ತಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣದ ಪರಿಣಾಮ ಯುದ್ಧವು ಉಲ್ಬಣಗೊಳ್ಳುತ್ತಿದ್ದಂತೆ, ಉಕ್ರೇನ್‌ನಲ್ಲಿನ ಅಧಿಕಾರಿಗಳು ಅದರ ಸಾರ್ವಭೌಮತ್ವವನ್ನು ರಕ್ಷಿಸುವ ಸಲುವಾಗಿ ನಾಗರಿಕರನ್ನು ಕೂಡ ಸೇನೆಗೆ ಸೇರುವಂತೆ ಒತ್ತಾಯಿಸಿದ್ದಾರೆ. ನಿನ್ನೆ ರಷ್ಯಾದ ಯುದ್ಧ ಟ್ಯಾಂಕರ್ ಒಂದಕ್ಕೆ ಉಕ್ರೇನ್‌ನ ನೂರಾರು ನಾಗರಿಕರು ಮುತ್ತಿಗೆ ಹಾಕಿ ಮುಂದೆ ಹೋಗದಂತೆ ತಡೆದಿದ್ದರು.
Russia Ukraine Crisis: ರಷ್ಯಾಗೆ ಕ್ರೀಡಾ ಲೋಕದಿಂದ ಮತ್ತಷ್ಟು ನಿರ್ಬಂಧ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ