
ಕೀವ್: ಉಕ್ರೇನ್ (Ukraine) ಮೇಲೆ ರಷ್ಯಾ (Russia) ಸೋಮವಾರ ತೀವ್ರ ದಾಳಿ ನಡೆಸಿದ್ದು, ರಾಜಧಾನಿ ಕೀವ್ (Kyiv) , ಖಾರ್ಕೀವ್ (Kharkiv) ಹಾಗೂ ಇತರ ನಗರಗಳ ವಿದ್ಯುತ್ (Electricity) ಘಟಕಗಳು, ನೀರು ಪೂರೈಕೆ (Water Supply) ಘಟಕಗಳು ಸೇರಿದಂತೆ ಮೂಲಸೌಕರ್ಯ (Infrastructure) ಕೇಂದ್ರಗಳನ್ನು ಧ್ವಂಸಗೊಳಿಸಿದೆ. ಕಳೆದ ವಾರಾಂತ್ಯಕ್ಕೆ ಉಕ್ರೇನ್, ಕಪ್ಪು ಸಮುದ್ರದಲ್ಲಿನ (Black Sea) ರಷ್ಯಾ ಪಡೆಗಳ ಮೇಲೆ ವಾಯುದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ರಷ್ಯಾ ಈ ಕ್ರಮ ಕೈಗೊಂಡಿದೆ. ಈ ನಡುವೆ ರಷ್ಯಾ ಹಾರಿಸಿದ 50 ಕ್ಷಿಪಣಿಗಳ ಪೈಕಿ 44 ಕ್ಷಿಪಣಿಗಳನ್ನು ತಾನು ಹೊಡೆದುರುಳಿಸಿದ್ದಾಗಿ ಉಕ್ರೇನ್ ಸೇನೆ ಹೇಳಿಕೊಂಡಿದೆ.
ಕೀವ್‌ನಲ್ಲಿ ಬೆಳಗ್ಗೆ ಜನರು ಕಚೇರಿಗೆ ತೆರಳಲು ಸಜ್ಜಾಗುತ್ತಿರುವ ವೇಳೆ ಭಾರಿ ಕ್ಷಿಪಣಿ ಬಳಸಿ ವಾಯುದಾಳಿ ನಡೆದಿದ್ದು, ಹಲವು ಸ್ಫೋಟಗಳು ಕೇಳಿಸಿವೆ. ದಾಳಿಯಿಂದ ವಿದ್ಯುತ್ ಗ್ರಿಡ್‌ಗೆ ಹಾನಿಯಾಗಿದ್ದು, ಕೂಡಲೇ ಕೀವ್ ನಗರದ 3.50 ಲಕ್ಷ ಮನೆಗಳು ಕಾರ್ಗತ್ತಲಲ್ಲಿ ಮುಳುಗಿವೆ. ನೀರು ಪೂರೈಕೆಯಲ್ಲೂ ವ್ಯತ್ಯಯವಾಗಿದೆ.
ಇದನ್ನು ಓದಿ: Ukraine ಮೇಲೆ ಆತ್ಮಾಹುತಿ ಡ್ರೋನ್ ದಾಳಿ ಮಾಡಿದ ರಷ್ಯಾ: 8 ಮಂದಿ ಬಲಿ
ಇನ್ನು ಖಾರ್ಕೀವ್‌ನಲ್ಲಿ ಕೂಡ ವಿದ್ಯುತ್ ಗ್ರಿಡ್‌ಗಳ ಸೇರಿ ಹಲವು ಮೂಲಸೌಕರ್ಯಗಳ ತಾಣಗಳ ಮೇಲೆ ದಾಳಿ ನಡೆದಿವೆ. ಆದರೆ ಲಿವಿವ್‌ನಲ್ಲಿ ಕ್ಷಿಪಣಿಯನ್ನು ಉಕ್ರೇನಿ ಸೇನೆ ಹೊಡೆದುರುಳಿಸಿತು. ವಾಯು ರಕ್ಷಣಾ ಪಡೆಗಳು ಹಲವು ಮಿಸೈಲ್‌ಗಳನ್ನು ಹೊಡೆದುರುಳಿಸಿದ್ದಾಗಿ ಹೇಳಿಕೊಂಡಿದ್ದರೂ, ಉಕ್ರೇನ್ ಪ್ರಧಾನ ಮಂತ್ರಿ ಡೆನಿಸ್ ಶ್ಮಿಗಲ್ ಮಾತ್ರ ರಷ್ಯಾ ಮಿಸೈಲ್‌ಗಳು 7 ಉಕ್ರೇನ್ ಪ್ರದೇಶಗಳ ನೂರಾರು ಏರಿಯಾಗಳಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ ಎಂದು ಹೇಳಿದ್ದಾರೆ.
"ಪ್ರಸ್ತುತ, ಕೀವ್‌ನಲ್ಲಿನ ತುರ್ತು ಪರಿಸ್ಥಿತಿಯಿಂದಾಗಿ, ಶೇ. 80 ರಷ್ಟು ಗ್ರಾಹಕರು ನೀರು ಪೂರೈಕೆಯಿಲ್ಲದೆ ಪರದಾಡುತ್ತಿದ್ದಾರೆ" ಎಂದು ನಗರದ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ. ಕೀವ್‌ನಲ್ಲಿ ವಿದ್ಯುತ್ ಸ್ಥಗಿತಗೊಂಡಿರುವ 350,000 ಮನೆಗಳಿಗೆ ವಿದ್ಯುತ್ ಪುನಃಸ್ಥಾಪಿಸಲು ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕೀವ್‌ನ ಪಶ್ಚಿಮದಲ್ಲಿ, ರಷ್ಯಾದ ದಾಳಿಯಿಂದ ಸರಬರಾಜು ಸ್ಥಗಿತಗೊಂಡ ನಂತರ 100ಕ್ಕೂ ಹೆಚ್ಚು ಜನರು ಪಾರ್ಕ್ ಕಾರಂಜಿಯಿಂದ ನೀರು ಸಂಗ್ರಹಿಸಲು ತಾಳ್ಮೆಯಿಂದ ಕಾಯುತ್ತಿರುವುದನ್ನು AFP ಪತ್ರಕರ್ತ ನೋಡಿದ್ದಾರೆ. ಅವರೆಲ್ಲರೂ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ತುಂಬಲು ಒಯ್ಯುತ್ತಿದ್ದರು.
ಇದನ್ನೂ ಓದಿ: ವಯಾಗ್ರಾ ಸೇವಿಸಿ ಉಕ್ರೇನಿಗಳ ಮೇಲೆ Russia ಯೋಧರ ರೇಪ್!
ಉಕ್ರೇನ್ ಸರ್ಕಾರ ರಷ್ಯಾ ನಿಲುವನ್ನು ಖಂಡಿಸಿದೆ. ನಾಗರಿಕ ಮೂಲಸೌಕರ್ಯ ವ್ಯವಸ್ಥೆಗಳ ಮೇಲೆ ದಾಳಿ ಮಾಡಿ ಜನಸಾಮಾನ್ಯರಿಗೆ ರಷ್ಯಾ ಏಕೆ ತೊಂದರೆ ನೀಡುತ್ತಿದೆ? ಎಂದು ಪ್ರಶ್ನಿಸಿದೆ.
"ರಷ್ಯಾದ ಭಯೋತ್ಪಾದಕರು ಮತ್ತೆ ವಿದ್ಯುತ್ ಸ್ಥಾಪನೆಗಳ ವಿರುದ್ಧ ಭಾರಿ ದಾಳಿ ನಡೆಸಿದ್ದಾರೆ" ಎಂದು ಉಕ್ರೇನ್ ಅಧ್ಯಕ್ಷರ ಉಪ ಮುಖ್ಯಸ್ಥ ಕೈರಿಲೊ ಟಿಮೊಶೆಂಕೊ ಹೇಳಿದ್ದಾರೆ. ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ "ಯುದ್ಧಭೂಮಿಯಲ್ಲಿ ಹೋರಾಡುವ ಬದಲು, ರಷ್ಯಾ ನಾಗರಿಕರ ವಿರುದ್ಧ ಹೋರಾಡುತ್ತದೆ." ಎಂದು ಟ್ವೀಟ್ ಮಾಡಿದ್ದಾರೆ.
ರಷ್ಯಾದ ಸೇನೆಯು ಕ್ರೂಸ್ ಕ್ಷಿಪಣಿ ದಾಳಿಗಳನ್ನು ನಡೆಸಿದೆ ಎಂದು ದೃಢಪಡಿಸಿತು ಮತ್ತು ಅವೆಲ್ಲವೂ ತಮ್ಮ ಉದ್ದೇಶಿತ ಗುರಿಗಳನ್ನು ತಲುಪಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ukraine Conflict: ಕೀವ್ ಸೇರಿ 40 ಉಕ್ರೇನಿ ನಗರಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ