Russia-Ukraine War: ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಪರಾರಿ?

By Kannadaprabha News  |  First Published Mar 5, 2022, 6:40 AM IST

*  ರಷ್ಯಾ ಸಂಸತ್‌ ಸ್ಪೀಕರ್‌ ವೊಲೊಡಿನ್‌ ಹೇಳಿಕೆ
*  ಈ ಬಗ್ಗೆ ಉಕ್ರೇನ್‌ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ
*  ರಷ್ಯಾದ ಅಧಿಕೃತ ಮಾಧ್ಯಮ ‘ಸ್ಪುಟ್ನಿಕ್‌’ ವರದಿ 
 


ಮಾಸ್ಕೋ(ಮಾ.05):  ‘ರಷ್ಯಾ(Russia) ಉಕ್ರೇನ್‌(Ukraine) ಯುದ್ಧದ ನಡುವೆಯೇ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ(Volodymyr Zelenskyy) ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಸದ್ಯ ಅವರು ಪೋಲೆಂಡ್‌ನಲ್ಲಿದ್ದಾರೆ’ ಎಂದು ರಷ್ಯಾ ಸಂಸತ್ತಿನ ಕೆಳ ಮನೆ ‘ಡುಮಾ’ದ ಸ್ಪೀಕರ್‌ ವೆಚೆಸ್ಲೆವ್‌ ವೊಲೊಡಿನ್‌ ಹೇಳಿದ್ದಾರೆ. ಆದರೆ ಜೆಲೆನ್‌ಸ್ಕಿ ದೇಶ ತೊರೆದಿರುವ ಬಗ್ಗೆ ಉಕ್ರೇನ್‌ ಆಡಳಿತ ಯಾವುದೇ ಹೇಳಿಕೆ ನೀಡಿಲ್ಲ. ಜೆಲೆನ್‌ಸ್ಕಿ ಅವರಿಂದಲೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

‘ಜೆಲೆನ್‌ಸ್ಕಿ ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಅವರು ಕೀವ್‌ ಸಮೀಪದ ಲ್ವೀವ್‌ ಪಟ್ಟಣದಲ್ಲಿ ಇಲ್ಲ ಎಂದು ಉಕ್ರೇನ್‌ ಸಂಸತ್ತಿನ ಪ್ರತಿನಿಧಿಗಳು ನಮಗೆ ಮಾಹಿತಿ ನೀಡಿದ್ದಾರೆ. ಜೆಲೆನ್‌ಸ್ಕಿ ಈಗ ಪೋಲೆಂಡ್‌ನಲ್ಲಿದ್ದಾರೆ’(Poland) ಎಂದು ವೊಲೊಡಿನ್‌ ಹೇಳಿದ್ದಾರೆ ಎಂದು ರಷ್ಯಾದ ಅಧಿಕೃತ ಮಾಧ್ಯಮ ‘ಸ್ಪುಟ್ನಿಕ್‌’ ವರದಿ ಮಾಡಿದೆ.

Latest Videos

undefined

Russia Ukraine war ಒಂದೇ ವಾರದಲ್ಲಿ ಮೂರು ಬಾರಿ ವೊಲೊಡಿಮಿರ್ ಝೆಲೆನ್ಸ್ಕಿ ಹತ್ಯೆಗೆ ಸ್ಕೆಚ್

ಯುದ್ಧ(War) ಆರಂಭವಾಗುತ್ತಿದ್ದಂತೆ ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳು ಜೆಲೆನ್‌ಸ್ಕಿ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು ಹಾಗೂ ತಮ್ಮ ದೇಶಕ್ಕೆ ಆಹ್ವಾನನ ನಿಡಿದ್ದವು. ಆದರೆ ಯಾವುದೇ ಕಾರಣಕ್ಕೂ ದೇಶ ತೊರೆಯುವುದಿಲ್ಲ ಎಂದು ಜೆಲೆನ್‌ಸ್ಕಿ ಹೇಳಿದ್ದರು. ತಾವು ಈ ಹಿಂದೆ ದೇಶ ತೊರೆದಿದ್ದಾಗಿ ಎದ್ದಿದ್ದ ಪುಕಾರುಗಳನ್ನು ತಳ್ಳಿ ಹಾಕಿದ್ದರು.

ರಷ್ಯಾ ಯುದ್ಧದ ಬಗ್ಗೆ ಸುಳ್ಳು ಸುದ್ದಿ ಹರಡಿದರೆ 15 ವರ್ಷ ಜೈಲು

ರಷ್ಯಾ ತೆಗೆದುಕೊಂಡಿರುವ ಮಿಲಿಟರಿ ಕಾರ್ಯಾಚರಣೆಗೆ (special military operation) ಸಂಬಂಧಿಸಿದಂತೆ ಸುಳ್ಳು ವರದಿಗಳನ್ನು ಹರಡಿದರೆ 15 ವರ್ಷ ಜೈಲು (Prison) ಶಿಕ್ಷೆ ವಿಧಿಸುವಂತಹ ಮಸೂದೆಗೆ ರಷ್ಯಾ ಪಾರ್ಲಿಮೆಂಟ್‌ (russia parliament) ಶುಕ್ರವಾರ ಅನುಮೋದನೆ ನೀಡಿದೆ. ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ದಾಳಿಯ ನಂತರ ಕೆಲವು ರಷ್ಯಾದ ಸ್ವತಂತ್ರ ಮಾಧ್ಯಮಗಳು (Independent Media) ರಷ್ಯಾ ನಡೆಯನ್ನು ಟೀಕಿಸಿದ್ದವು. ಈ ಕಾರಣ ಈ ಕಾಯ್ದೆ ತರಲಾಗುತ್ತಿದೆ.

ರಷ್ಯಾ ಸಂಸತ್ತಿನ ಕೆಳಮನೆಯಲ್ಲಿ ಈ ಮಸೂದೆಗೆ ಒಪ್ಪಿಗೆ ಸಿಕ್ಕಿದೆ. ಪುಟಿನ್‌ (Vladimir Putin) ಸಹಿ ಮಾಡುವ ಮೊದಲು ಮೇಲ್ಮನೆಯಲ್ಲೂ ಒಪ್ಪಿಗೆ ಪಡೆಯಬೇಕಾಗಿರುವುದು ಅನಿವಾರ್ಯವಾದ್ದರಿಂದ ಈ ಮಸೂದೆಯನ್ನು ಮೇಲ್ಮನೆಗೆ ಕಳುಹಿಸಲಾಗಿದೆ. ಈ ಮಸೂದೆಗೆ ಶನಿವಾರವೇ ಅಂಕಿತ ಬೀಳುವ ಮೂಲಕ ಜಾರಿಗೆ ಬರಲಿದೆ ಎಂದು ಸ್ಪೀಕರ್‌ ವ್ಯಾಚೆಸ್ಲಾವ್‌ ವೋಲೋಡಿನ್‌ ಹೇಳಿದ್ದಾರೆ.

Ukraine crisis ಉಕ್ರೇನ್‌ಗೆ ಶಾಕ್‌ ಕೊಟ್ಟ ರಷ್ಯಾಗೆ ಕಾರ್ಪೋರೇಟ್ ಹೊಡೆತ, ಮುಂದೈತೆ ಮಾರಿಹಬ್ಬ!

ಈ ಮಸೂದೆಯ ಪ್ರಕಾರ ರಷ್ಯಾ ಸರ್ಕಾರ ಸುಳ್ಳು ಎಂದು ಪರಿಗಣಿಸುವ ಸುದ್ದಿಗಳನ್ನು ಪ್ರಸಾರ ಮಾಡಿದವರಿಗೆ 15 ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಮಸೂದೆ ಅಂಗೀಕಾರವಾಗುತ್ತಿದ್ದಂತೆ ‘ಝಾಂಕ್‌ ನ್ಯೂಸ್‌’ (Zank News) ಎಂಬ ಮಾಧ್ಯಮ ತನ್ನ ವೆಬ್ಸೈಟ್‌ನ್ನು ಮುಚ್ಚಿದೆ.

ದಾಳಿ ತರಬೇತಿ ಕೇಂದ್ರದ ಮೇಲೆ, ರಿಯಾಕ್ಟರ್‌ ಮೇಲಲ್ಲ: ಐಎಇಎ

ಕೀವ್‌: ಎನರ್‌ಹೊಡಾರ್‌ (Enerhodar) ನಗರದ ಮೇಲೆ ಗುರುವಾರ ರಷ್ಯಾ ನಡೆಸಿದ ದಾಳಿಯಲ್ಲಿ ಝೆಪೋರ್‌ಝಿಯಾ (zaporizhzhia) ಪರಮಾಣು ಘಟಕದ (nuclear plant) 6ರ ಪೈಕಿ ಯಾವುದೇ ರಿಯಾಕ್ಟರ್‌ಗಳಿಗೂ ಬೆಂಕಿ ಬಿದ್ದಿಲ್ಲ. ಬೆಂಕಿ ಬಿದ್ದಿದ್ದು ಸಮೀಪದಲ್ಲೇ ಇರುವ ತರಬೇತಿ ಕೇಂದ್ರಕ್ಕೆ ಎಂದು ವಿಶ್ವಸಂಸ್ಥೆಯ ಅಣು ಇಂಧನ ಸಂಸ್ಥೆಯ (International atomic energy agency) ಪ್ರಧಾನ ನಿರ್ದೇಶಕ ರಫೇಲ್‌ ಮಾರಿಯಾನೋ (Rafael Mariano Grossi) ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಹಾಲಿ ಬೆಂಕಿಯನ್ನು ನಂದಿಸಲಾಗಿದೆ. ಅಲ್ಲಿ ಯಾವುದೇ ವಿಕಿರಣ ಸೋರಿಕೆ ಪತ್ತೆಯಾಗಿಲ್ಲ. ಈಗಲೂ ಘಟಕ ಉಕ್ರೇನ್‌ ಸರ್ಕಾರದ ವಶದಲ್ಲೇ ಇದೆ ಎಂದು ಹೇಳಿದ್ದಾರೆ. ಆರಂಭಿಕ ವರದಿಗಳು, ರಷ್ಯಾ ನಡೆಸಿದ ಶೆಲ್‌ ದಾಳಿಯಲ್ಲಿ ಘಟಕದ ಒಂದು ರಿಯಾಕ್ಟರ್‌ಗೆ ಬೆಂಕಿ ಬಿದ್ದಿದೆ ಎಂದು ಹೇಳಿದ್ದವು. ಹೀಗಾಗಿ ಪರಮಾಣು ಸೋರಿಕೆಯ ಭೀತಿ ಎದುರಾಗಿತ್ತು.
 

click me!