Russia Ukraine war ಒಂದೇ ವಾರದಲ್ಲಿ ಮೂರು ಬಾರಿ ವೊಲೊಡಿಮಿರ್ ಝೆಲೆನ್ಸ್ಕಿ ಹತ್ಯೆಗೆ ಸ್ಕೆಚ್

By Kannadaprabha News  |  First Published Mar 5, 2022, 2:15 AM IST

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹತ್ಯೆಗೆ ಸ್ಕೆಚ್

ಒಂದೇ ವಾರದಲ್ಲಿ ಮೂರು ಬಾರಿ ಪ್ರಯತ್ನ ನಡೆಸಿತ್ತು ರಷ್ಯಾ

ಮೂರೂ ಬಾರಿಯು ಬಚಾವ್ ಆಗಿದ್ದ ಝೆಲೆನ್ಸ್ಕಿ


ಕೀವ್ (ಮಾ. 4): ಉಕ್ರೇನ್ (Ukraine) ದೇಶದ ಮೇಲೆ ರಷ್ಯಾದ (Russia) ಆಕ್ರಮಣ ಪ್ರಾರಂಭವಾದ ದಿನದಿಂದ ಈಗಿನವರೆಗೂ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky)ಹತ್ಯೆಗೆ ರಷ್ಯಾ ವಿಪರೀತವಾಗಿ ಪ್ರಯತ್ನ ಪಟ್ಟಿದೆ ಎನ್ನುವುದು ಬಹಿರಂಗವಾಗಿದೆ. ವರದಿಗಳ ಪ್ರಕಾರ ಕಳೆದ ಒಂದು ವಾರದಲ್ಲಿ ರಷ್ಯಾ ಮೂರು ಬಾರಿ ಝೆಲೆನ್ಸ್ಕಿ ಹತ್ಯೆಗೆ ಪ್ರಯತ್ನಿಸಿದ್ದು ಮೂರೂ ಬಾರಿಯೂ ಅದರಲ್ಲಿ ವಿಫಲವಾಗಿದೆ.. ಉಕ್ರೇನಿನ ಅಧಿಕಾರಿಗಳಿಗೆ ಈ ಕುರಿತು ಮೊದಲೇ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಹತ್ಯೆಯ ಸಂಚು ವಿಫಲವಾಗಿದ್ದು, ಝೆಲೆನ್ಸ್ಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಟೈಮ್ಸ್‌ ವರದಿ ಮಾಡಿದೆ.

ವ್ಯಾಗ್ನರ್‌ ಗುಂಪು ಹಾಗೂ ಚೆಚೆನ್‌ ಬಂಡುಕೋರರನ್ನು ವಿಶೇಷವಾಗಿ ಝೆಲೆನ್ಸ್ಕಿ  ಹತ್ಯೆಗಾಗಿಯೇ ನಿಯೋಜಿಸಲಾಗಿತ್ತು. ಆದರೆ ರಷ್ಯಾದ ಫೆಡೆರಲ್‌ ಭದ್ರತಾ ಸೇವೆ (russia federal security service) ಈ ಕುರಿತು ಉಕ್ರೇನಿನ ಸೇನೆಗೆ ಮೊದಲೇ ಸೂಚನೆ ನೀಡಿದ್ದರಿಂದ ರಾಜಧಾನಿ ಕೀವ್‌ ಹೊರವಲಯದಲ್ಲಿ ಚೆಚೆನ್‌ ಬಂಡುಕೋರರನ್ನು (chechen army) ದಮನ ಮಾಡಲಾಯಿತು. ರಷ್ಯಾದ ಭದ್ರತಾ ಸೇವೆಯಲ್ಲಿರುವ ಯುದ್ಧ ವಿರೋಧಿ ಗುಪ್ತಚರ ಅಂಶಗಳು ಈ ಮಾಹಿತಿ ನೀಡಿವೆ ಎಂದು ಉಕ್ರೇನಿನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ಕಾರ್ಯದರ್ಶಿ ಒಲೆಕ್ಸಿ ಡ್ಯಾನಿಲೋವ್‌ ಹೇಳಿದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ಉಕ್ರೇನ್‌ ಮೇಲೆ ಬಾಂಬ್‌ ಹಾಕುತ್ತಿಲ್ಲ: ಪುಟಿನ್‌!
ಮಾಸ್ಕೋ:
ಉಕ್ರೇನ್‌ ಮೇಲೆ ರಷ್ಯಾ ಬಾಂಬ್‌ ಹಾಕುತ್ತಿಲ್ಲ. ಈ ಕುರಿತಾದ ಎಲ್ಲಾ ಸುದ್ದಿಗಳು ಸುಳ್ಳು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಶುಕ್ರವಾರ ಹೇಳಿದ್ದಾರೆ. ಜರ್ಮನಿಯ ಚಾನ್ಸಲರ್‌ (Chancellor of Germany) ಒಲಾಫ್‌ ಸ್ಕೂಲ್ಜ್ (olaf scholz) ಅವರ ಜೊತೆ ಫೋನ್‌ ಸಂಭಾಷಣೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಖಾರ್ಕೀವ್‌ ಮತ್ತು ಇತರ ಪ್ರಮುಖ ನಗರಗಳ ಮೇಲೆ ರಷ್ಯಾ ಬಾಂಬ್‌ ದಾಳಿ ನಡೆಸುತ್ತಿದೆ ಎನ್ನುವುದು ಸುಳ್ಳುಸುದ್ದಿ. ಇದು ಉಕ್ರೇನ್‌ ಅಪಪ್ರಚಾರ ಎಂದ ಪುಟಿನ್‌, ‘ನ್ಯಾಟೋ ಸೇರಬಾರದು ಎಂಬ ನಮ್ಮ ಷರತ್ತುಗಳನ್ನು ಉಕ್ರೇನ್‌ ಒಪ್ಪಿಕೊಂಡರೆ ಮಾತ್ರ ಮಾತುಕತೆಗೆ ಸಿದ್ಧ’ ಎಂದರು.

‘ಹಾಗಾಗಿ 3ನೇ ಮಾತುಕತೆಯ ಸಮಯದಲ್ಲಿ ಉಕ್ರೇನ್‌ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು. ರಷ್ಯಾ ಉಕ್ರೇನ್‌ ನಡುವಿನ ಯುದ್ಧವನ್ನು ನಿಲ್ಲಿಸಲು 3ನೇ ಸುತ್ತಿನ ಶಾಂತಿ ಮಾತುಕತೆ ನಡೆಯಲಿದೆ. 2ನೇ ಮಾತುಕತೆ ವೇಳೆ ನಾಗರೀಕರ ಸ್ಥಳಾಂತರದ ವೇಳೆ ಕದನವಿರಾಮಕ್ಕೆ ಉಭಯ ದೇಶಗಳು ಒಪ್ಪಿಕೊಂಡಿದ್ದವು. 2 ದೇಶಗಳ ನಿಯೋಗಗಳು ಪರಸ್ಪರ ಹಲವು ಷರತ್ತುಗಳನ್ನು ವಿಧಿಸಿದ್ದರಿಂದ ಮೊದಲ ಸುತ್ತಿನ ಮಾತುಕತೆ ವಿಫಲವಾಗಿತ್ತು.

Russia Ukraine War : ಯುದ್ಧ ನಿಲ್ಲಿಸದ ರಷ್ಯನ್ನರಿಗೆ  ಹುಡುಕಿದರೂ 'ಆ'  ವಿಡಿಯೋ ಸಿಗಲ್ಲ, ಕೆಟಗರಿಯೂ ಇಲ್ಲ!
ರಷ್ಯಾ ದಾಳಿಗೆ ಜಗತ್ತಿನ ಅತಿದೊಡ್ಡ ಸರಕು ವಿಮಾನ ಸಂಪೂರ್ಣ ನಾಶ
ಕೀವ್‌:
ರಷ್ಯಾ ಪಡೆಗಳ ದಾಳಿಯಿಂದಾಗಿ ಉಕ್ರೇನಿನ ಗೋಸ್ಟೋಮೆಲ್‌ ವಿಮಾನ ನಿಲ್ದಾಣದಲ್ಲಿದ್ದ ಜಗತ್ತಿನ ಅತಿದೊಡ್ಡ ವಿಮಾನ ಆ್ಯಂಟೋನೋವ್‌ ಎಎನ್‌-225 (Antonov an-225) ಸಂಪೂರ್ಣ ನಾಶವಾಗಿದೆ. ಫೆ.29ರಂದೇ ರಷ್ಯಾ ನಡೆಸಿದ ದಾಳಿಯಲ್ಲಿ ಇದು ಸಂಪೂರ್ಣ ನಾಶವಾಗಿದೆ. ಆದರೆ ಸಂಪೂರ್ಣ ನಾಶವಾಗಿದೆ ಎಂದು ಉಕ್ರೇನ್‌ ಹೇಳಿರಲಿಲ್ಲ. ಬದಲಾಗಿ ಅದನ್ನು ಮರುನಿರ್ಮಾಣ ಮಾಡಲಾಗುವುದು ಎಂದಿತ್ತು. ಆದಾಗ್ಯೂ, ಇದರ ಮರುನಿರ್ಮಾಣ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಹಾನಿಯಾಗಿದೆ ಎಂಬ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿವೆ. ಈ ವಿಮಾನವನ್ನು ‘ಮ್ರಿಯಾ’ (Mriya) ಎಂದು ಕರೆಯಲಾಗುತ್ತಿದ್ದು, ಉಕ್ರೇನಿ ಭಾಷೆಯಲ್ಲಿ ಇದರ ಅರ್ಥ ‘ಕನಸು’ ಎಂಬುದಾಗಿದೆ.

News Hour ಜನವಸತಿ ಮೇಲೆ ರಷ್ಯಾ ದಾಳಿ, ಮುಗಿಲು ಮುಟ್ಟಿದ ಆಕ್ರಂದನ!
ವಿಶೇಷತೆ:
ಎಎನ್‌-225 ಮ್ರಿಯಾ ಜಗತ್ತಿನ ಅತಿದೊಡ್ಡ ಸಾರಿಗೆ ವಿಮಾನವಾಗಿತ್ತು. ಮರುಬಳಕೆ ಮಾಡಬಹುದಾದ ಏರೋಸ್ಪೇಸ್‌ ಸಾರಿಗೆ ವ್ಯವಸ್ಥೆಯಲ್ಲಿ ಬಾಹ್ಯಾಕಾಶ ಉಡಾವಣಾ ತಾಣವಾಗಿ ಬಳಸುವ ಉದ್ದೇಶದಿಂದ ಈ ವಿಮಾನವನ್ನು ಅಭಿವೃದ್ಧಿ ಪಡಿಸಲಾಗಿತ್ತು.

Tap to resize

Latest Videos

click me!