ಯುದ್ಧದ ನಡುವೆ ಅಧ್ಯಕ್ಷ ಝೆಲೆನ್ಸ್ಕಿ ಮಹತ್ವದ ಕ್ರಮ, ಭಾರತ ಸೇರಿ 5 ದೇಶಗಳ ರಾಯಭಾರಿ ವಜಾ!

Published : Jul 10, 2022, 12:15 AM ISTUpdated : Jul 10, 2022, 01:37 AM IST
ಯುದ್ಧದ ನಡುವೆ ಅಧ್ಯಕ್ಷ ಝೆಲೆನ್ಸ್ಕಿ ಮಹತ್ವದ ಕ್ರಮ, ಭಾರತ ಸೇರಿ 5 ದೇಶಗಳ ರಾಯಭಾರಿ ವಜಾ!

ಸಾರಾಂಶ

* ಉಕ್ರೇನ್‌ ರಷ್ಯಾ ಯುದ್ಧದ ನಡುವೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶಾಕಿಂಗ್ ನಿರ್ಧಾರ * ಏಕಾಏಕಿ ಭಾರತ ಸೇರಿ ಐದು ರಾಷ್ಟ್ರಗಳ ರಾಯಭಾರಿಗಳಿಗೆ ಗೇಟ್‌ಪಾಸ್‌ * ಈ ಕಠಿಣ ಕ್ರಮದ ಹಿಂದಿನ ಕಾರಣ ಇನ್ನೂ ನಿಗೂಢ

ಕೈವ್‌(ಜು.10): ಉಕ್ರೇನ್-ರಷ್ಯಾ ಯುದ್ಧದ ಮಧ್ಯೆ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಹತ್ವದ ಹೆಜ್ಜೆ ಇರಿಸಿದ್ದಾರೆ. ಭಾರತ ಸೇರಿದಂತೆ ಐದು ದೇಶಗಳಲ್ಲಿ ನಿಯೋಜಿಸಲಾಗಿದ್ದ ತನ್ನ ರಾಯಭಾರಿಗಳನ್ನು ಅವರು ವಜಾಗೊಳಿಸಿದ್ದಾರೆ. ಉಕ್ರೇನ್ ಅಧ್ಯಕ್ಷರ ವೆಬ್‌ಸೈಟ್‌ನಲ್ಲಿ ಜಾರಿ ಮಾಡಲಾದ ಆದೇಶದ ಪ್ರಕಾರ, ಅವರು ಜರ್ಮನಿಯಲ್ಲಿರುವ ಉಕ್ರೇನ್ ರಾಯಭಾರಿ ಆಂಡ್ರಿ ಮೆಲ್ನಿಕ್ ಅವರನ್ನೂ ವಜಾಗೊಳಿಸಿದ್ದಾರೆ.

ಇದಲ್ಲದೆ, ಅವರು ಹಂಗೇರಿ, ಜೆಕ್ ರಿಪಬ್ಲಿಕ್, ನಾರ್ವೆ ಮತ್ತು ಭಾರತದಲ್ಲಿ ನಿಯೋಜಿಸಲಾದ ತಮ್ಮ ರಾಯಭಾರಿಗಳನ್ನು ಸಹ ತೆಗೆದುಹಾಕಿದ್ದಾರೆ. ಆದರೆ, ಶನಿವಾರ ಹೊರಡಿಸಿರುವ ಈ ಆದೇಶದಲ್ಲಿ ಕ್ರಮಕ್ಕೆ ಕಾರಣ ಏನು ಎಂಬುವುದು ಮಾತ್ರ ಇನ್ನೂ ನಿಗೂಢವಾಗಿದೆ. ಈ ರಾಯಭಾರಿಗಳು ಬೇರೆ ಯಾವುದಾಧರೂ ಸ್ಥಳದಲ್ಲಿ ಪೋಸ್ಟಿಂಗ್ ಪಡೆಯುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಆದೇಶದಲ್ಲಿ ತಿಳಿಸಲಾಗಿಲ್ಲ. ಅದೇ ಸಮಯದಲ್ಲಿ, ಅಧ್ಯಕ್ಷ ಝೆಲೆನ್ಸ್ಕಿ ತನ್ನ ಆದೇಶದಲ್ಲಿ ಉಕ್ರೇನ್‌ಗೆ ಅಂತರರಾಷ್ಟ್ರೀಯ ಬೆಂಬಲ ಮತ್ತು ಮಿಲಿಟರಿ ಸಹಾಯವನ್ನು ಸಜ್ಜುಗೊಳಿಸಲು ರಾಜತಾಂತ್ರಿಕರನ್ನು ಒತ್ತಾಯಿಸಿದ್ದಾರೆ.

ಉಕ್ರೇನ್‌ನಲ್ಲಿ ಮಡಿದ ನವೀನ್ ಪೋಷಕರ ಭೇಟಿ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ಮೋದಿ!

ಟರ್ಬೈನ್‌ಗಳ ವಿಚಾರವಾಗಿ ಜರ್ಮನಿ-ಉಕ್ರೇನ್ ಮುಖಾಮುಖಿ

ಜರ್ಮನಿ ಹಾಗೂ ಕೈವ್‌ನ ಸಂಬಂಧಗಳು ಬಹಳ ಸೂಕ್ಷ್ಮವಾಗಿವೆ. ಜರ್ಮನಿಯು ರಷ್ಯಾದ ಇಂಧನ ಸರಬರಾಜಿನ ಮೇಲೆ ಅವಲಂಬಿತವಾಗಿದೆ, ಜೊತೆಗೆ ಯುರೋಪ್ನಲ್ಲಿ ಅತಿದೊಡ್ಡ ಆರ್ಥಿಕತೆಯಾಗಿದೆ. ಈಗ ಎರಡು ದೇಶಗಳು ಕೆನಡಾದಲ್ಲಿ ಜರ್ಮನ್ ನಿರ್ಮಿತ ಟರ್ಬೈನ್‌ಗಳೊಂದಿಗೆ ಮುಖಾಮುಖಿಯಾಗಿವೆ.

ರಷ್ಯಾದ ನೈಸರ್ಗಿಕ ಅನಿಲ ದೈತ್ಯ ಗಾಜ್‌ಪ್ರೊಮ್‌ಗೆ ಕೆನಡಾ ಟರ್ಬೈನ್‌ಗಳನ್ನು ನೀಡಬೇಕೆಂದು ಜರ್ಮನಿ ಬಯಸಿದೆ. ಅದೇ ಸಮಯದಲ್ಲಿ, ಉಕ್ರೇನ್ ಕೆನಡಾವನ್ನು ಟರ್ಬೈನ್ಗಳನ್ನು ನೀಡದಂತೆ ಒತ್ತಾಯಿಸಿದೆ. ಅಲ್ಲದೇ ಅದನ್ನು ರಷ್ಯಾಕ್ಕೆ ನೀಡಿದರೆ, ಅದು ತನ್ನ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

ಖೆರ್ಸನ್ ಗವರ್ನರ್‌ಗೆ ಗೇಟ್‌ಪಾಸ್‌

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ರಷ್ಯಾದ ಆಕ್ರಮಿತ ಖೆರ್ಸನ್ ಒಬ್ಲಾಸ್ಟ್ ಗವರ್ನರ್ ಹೆನಾಡಿ ಲಹುಟಾ ಅವರನ್ನು ಸಹ ತೆಗೆದುಹಾಕಿದ್ದಾರೆ. ಸರ್ವೆಂಟ್ ಆಫ್ ದಿ ಪೀಪಲ್ ಪಾರ್ಟಿಯಿಂದ ಖೆರ್ಸನ್ ಒಬ್ಲಾಸ್ಟ್‌ನ ಶಾಸಕಾಂಗದ ಸದಸ್ಯರಾದ ಡಿಮಿಟ್ರಿ ಬುಟ್ರಿ ಅವರನ್ನು ಅಧ್ಯಕ್ಷ ವೊಲೊಡಿಮಿರ್ ಅವರು ಹಂಗಾಮಿ ಗವರ್ನರ್ ಆಗಿ ನೇಮಿಸಿದ್ದಾರೆ.

ಉಕ್ರೇನ್‌ನಲ್ಲಿ ಮೃತಪಟ್ಟಿದ್ದ ವೈದ್ಯಕೀಯ ವಿದ್ಯಾರ್ಥಿ: ಪ್ರಧಾನಿ ಭೇಟಿಯಾಗಲಿರುವ ನವೀನ್‌ ಪೋಷಕರು

ಮರಿಯುಪೋಲ್‌ನಲ್ಲಿ ಎರಡು ಸ್ಫೋಟ, ಮೂವರು ಸಾವು

ಮರಿಯುಪೋಲ್‌ನ ಮೇಯರ್‌ನ ಸಹಾಯಕ ಪೆಟ್ರೋ ಆಂಡ್ರಿಶ್ಚೆಂಕೊ ಪ್ರಕಾರ, ಜುಲೈ 9 ರಂದು, ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರದ ಬಳಿ ಎರಡು ಸ್ಫೋಟಗಳು ಸಂಭವಿಸಿ, ಬೆಂಕಿ ಆವರಿಸಿಕೊಂಡಿತ್ತು. ಈ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

ದೇಶ ಬಿಟ್ಟು ಪರಾರಿಯಾಗಿರುವವರ ಬಗ್ಗೆ ತನಿಖೆ 

ಸಂಸತ್ತಿನ ಸ್ಪೀಕರ್ ರುಸ್ಲಾನ್ ಸ್ಟೆಫಾಂಚುಕ್ ಅವರು ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಬದಲು ದೇಶವನ್ನು ತೊರೆಯುವ ಪ್ರತಿನಿಧಿಗಳ ವಿಷಯವನ್ನು ತನಿಖೆ ಮಾಡಲು ತಾತ್ಕಾಲಿಕ ತನಿಖಾ ಆಯೋಗವನ್ನು ರಚಿಸಲಾಗುವುದು ಎಂದು ಹೇಳಿದರು.

ರಷ್ಯಾದಿಂದ ಮೈಕೋಲೈವ್ ಮೇಲೆ 6 ಕ್ಷಿಪಣಿಗಳು

ಮೈಕೊಲೈವ್ ಮೇಯರ್ ಅಲೆಕ್ಸಾಂಡರ್ ಸೆಂಕೆವಿಚ್ ಪ್ರಕಾರ, ಶನಿವಾರ ಬೆಳಿಗ್ಗೆ ರಷ್ಯಾದ ಸೈನ್ಯವು ಮೈಕೊಲೈವ್ ಮೇಲೆ ಆರು ಕ್ಷಿಪಣಿಗಳನ್ನು ಹಾರಿಸಿತು. ರಷ್ಯಾದ ಈ ದಾಳಿಯಲ್ಲಿ ಹಲವು ಕಟ್ಟಡಗಳು ನಾಶವಾದವು. ಆದರೂ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!