ಶ್ರೀಲಂಕಾ ನಾಗರಿಕರು ಉದ್ರಿಕ್ತ ಪ್ರಧಾನಿ ರನಿಲ್ ಬಿಕ್ರಮಸಿಂಘೆ ನಿವಾಸ ಧಗಧಗ!

By Suvarna News  |  First Published Jul 9, 2022, 10:37 PM IST

* ಆರ್ಥಿಕ ಬಿಕ್ಕಟ್ಟಿನಿಂದ ನಲುಗುಗಿರುವ ಶ್ರೀಲಂಕಾ

* ಈಗಾಗಲೇ ರಾಷ್ಟ್ರಪತಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದ ಶ್ರೀಲಂಕಾ ಜನತೆ

* ಉದ್ರಿಕ್ತರಿಂದ ಪ್ರಧಾನಿ ರನಿಲ್‌ಸಿಂಗ್ ನಿವಾಸಕ್ಕೆ ಬೆಂಕಿ


ಕೊಲಂಬೋ(ಜು.09): ಆರ್ಥಿಕ ಬಿಕ್ಕಟ್ಟಿನಿಂದ ನಲುಗುಗಿರುವ ಶ್ರೀಲಂಕಾದಲ್ಲಿ ನಾಗರಿಕರನ್ನು ನಿಯಂತ್ರಿಸಲು ಅಸಾಧ್ಯವಾಗುತ್ತಿದೆ. ಈಗಾಗಲೇ ಅಧ್ಯಕ್ಷರ ನಿವಾಸವನ್ನು ಆಕ್ರಮಿಸಿಕೊಂಡ ಪ್ರತಿಭಟನಾಕಾರರ ಗುಂಪು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ಇನ್ನು ಸರ್ವಪಕ್ಷಗಳ ಜಂಟಿ ಸರ್ಕಾರ ಘೋಷಣೆಯೊಂದಿಗೆ ಪ್ರಧಾನಿ ರನಿಲ್‌ಸಿಂಗ್ ಅವರು ಕೆಲವು ಗಂಟೆಗಳ ಹಿಂದಷ್ಟೇ ರಾಜೀನಾಮೆ ನೀಡಿದ್ದರು ಎಂಬುವುದು ಉಲ್ಲೇಖನೀಯ.

ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಕೂಡಾ ರಾಜೀನಾಮೆ, ದ್ವೀಪ ರಾಷ್ಟ್ರದಲ್ಲಿನ್ನು ಸರ್ವಪಕ್ಷ ಸರ್ಕಾರ!

Tap to resize

Latest Videos

ಸಂಜೆಯ ವೇಳೆಗೆ ಪ್ರಧಾನಿ ನಿವಾಸಕ್ಕೆ ನುಗ್ಗಿದ ಜನಸಂದಣಿ:  ಶ್ರೀಲಂಕಾದಲ್ಲಿ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನ ನಡುವೆ ಜನಸಂದಣಿಯು ನಿಯಂತ್ರಣಕ್ಕೆ ಸಿಗದಾಗಿದೆ. ಸಿಟ್ಟಿಗೆದ್ದ ಜನರು ಶನಿವಾರ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಆದರೆ ಇದಕ್ಕೂ ಮುನ್ನ ಭದ್ರತಾ ಸಿಬ್ಬಂದಿ ಹಾಗೂ ಜನಸಮೂಹದ ನಡುವೆ ಮಾತಿನ ಚಕಮಕಿ ನಡೆದಿದೆ. ಭದ್ರತಾ ಪಡೆಗಳು ಉದ್ರಿಕ್ತರನ್ನು ತಡೆಯಲು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರೂ ಪ್ರಯೋಜನವಾಗಿಲ್ಲ. 

ಪ್ರಧಾನಿ ರನಿಲ್ ವಿಕ್ರಮಸಿಂಘೆ ರಾಜೀನಾಮೆಗೆ ಸಿದ್ಧ

ಪಿಎಂಒ ಪರವಾಗಿ ಇದೀಗ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ವಪಕ್ಷ ಸರ್ಕಾರ ರಚನೆ ಮಾಡಲು ಸಿದ್ಧ ಎಂದು ಪಕ್ಷದ ನಾಯಕರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಸ್ಪೀಕರ್ ಮಹಿಂದಾ ಯಾಪಾ ಅಭಯವರ್ಧನೆ ಅವರ ಮನೆಯಲ್ಲಿ ಈ ಕುರಿತು ನಡೆದ ನಾಯಕರ ಜೂಮ್ ವರ್ಚುವಲ್ ಸಭೆಯಲ್ಲಿ ಅಧ್ಯಕ್ಷ ಮತ್ತು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಪ್ರಸ್ತಾವನೆ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸಂದರಿಂದ ಟ್ವೀಟ್‌

ವಿಕ್ರಮಸಿಂಘೆ ಅವರ ಸರ್ಕಾರದಲ್ಲಿ ಸಂಸದ ರೌಫ್ ಹಕೀಮ್ ಅವರು ಟ್ವೀಟ್ ಮಾಡಿದ್ದು, ನಾಯಕರು ಪ್ರಧಾನಿ ಮತ್ತು ಅಧ್ಯಕ್ಷರಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಈ ಪ್ರಸ್ತಾವನೆ ಕುರಿತು ಸ್ಪೀಕರ್ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಹೊಸ ಸರ್ಕಾರ ರಚನೆ ಮತ್ತು ಆಯ್ಕೆಗೆ ಒಮ್ಮತ ಮೂಡಿತು

ಏತನ್ಮಧ್ಯೆ, ಅಧ್ಯಕ್ಷ ಮತ್ತು ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಬಹುತೇಕ ಪಕ್ಷದ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ನ್ಯಾಯ ಸಚಿವ ವಿಜೇದಸ್ಸ ರಾಜಪಕ್ಸೆ ಹೇಳಿದ್ದಾರೆ. ಸ್ಪೀಕರ್ ಒಂದು ವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕು ಎಂಬುದಕ್ಕೆ ಪಕ್ಷದ ಮುಖಂಡರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವರು ತಿಳಿಸಿದರು. ಪಾರ್ಲಿಮೆಂಟನ್ನು ಕರೆದು ಸರ್ವಪಕ್ಷ ಸರ್ಕಾರ ರಚಿಸಬೇಕು, ನಂತರ ಹಂಗಾಮಿ ಅಧ್ಯಕ್ಷರನ್ನು ನೇಮಿಸಬೇಕು ಎಂದು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು. ಆದಾಗ್ಯೂ, ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಪ್ರಸ್ತಾವನೆಗಳನ್ನು ಒಪ್ಪಲಿಲ್ಲ ಎಂದು ನ್ಯಾಯ ಸಚಿವರು ಹೇಳಿದರು.

Sri Lanka Economic Crisis: ನಿವಾಸಕ್ಕೆ ಪ್ರತಿಭಟನಾಕಾರರ ಮುತ್ತಿಗೆ, ದೇಶದಿಂದ ಕಾಲ್ಕಿತ್ತ ಅಧ್ಯಕ್ಷ ಗೋಟಬ ರಾಜಪಕ್ಸ

ಪಕ್ಷದ ಸಭೆಯಲ್ಲಿ ನಾಲ್ಕು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ

ಈ ಸಭೆಯಲ್ಲಿ ಸ್ಪೀಕರ್ ಮಹಿಂದ ಯಾಪಾ ಅಭಯವರ್ಧನ ಮತ್ತು ಆಡಳಿತ ಪಕ್ಷದ ಉನ್ನತ ನಾಯಕರು ಭಾಗವಹಿಸಿದ್ದರು. ಸಮಗಿ ಜನ ಬಲವೇಗಯ ಪಕ್ಷದ ಮುಖಂಡರ ಸಭೆಯಲ್ಲಿ ತೆಗೆದುಕೊಂಡ ನಾಲ್ಕು ಪ್ರಮುಖ ನಿರ್ಧಾರಗಳನ್ನು ಸಂಸದ ಡಾ.ಹರ್ಷ ಡಿ ಸಿಲ್ವಾ ಬಹಿರಂಗಪಡಿಸಿದ್ದಾರೆ.

1- ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ತಕ್ಷಣವೇ ರಾಜೀನಾಮೆ ನೀಡುತ್ತಾರೆ.
2- ಸ್ಪೀಕರ್ ಗರಿಷ್ಠ 30 ದಿನಗಳವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.
3- ಸಂಸತ್ತು ಉಳಿದ ಅವಧಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ.
4- ಶೀಘ್ರದಲ್ಲೇ ಮಧ್ಯಂತರ ಸರ್ವಪಕ್ಷ ಸರ್ಕಾರವನ್ನು ನೇಮಿಸಲಾಗುವುದು ಮತ್ತು ಶೀಘ್ರದಲ್ಲೇ ಚುನಾವಣೆಯೂ ನಡೆಯಲಿದೆ.

click me!