Russia Ukraine Crisis: ರಷ್ಯಾದ ಐದು ವಿಮಾನಗಳು, ಹೆಲಿಕಾಪ್ಟರ್‌ ನೆಲಸಮ: ಉಕ್ರೇನ್ ಸೇನೆ!

By Suvarna News  |  First Published Feb 24, 2022, 12:40 PM IST

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು  ದೇಶದಾದ್ಯಂತ ಸ್ಫೋಟಗಳು ಕೇಳಿಬಂದಿವೆ.  ಅಲ್ಲದೇ ರಷ್ಯಾ ವಿದೇಶಾಂಗ ಸಚಿವರು "ಪೂರ್ಣ ಪ್ರಮಾಣದ ಆಕ್ರಮಣ" ನಡೆಯುತ್ತಿದೆ ಎಂದು ಎಚ್ಚರಿಸಿದ್ದಾರೆ.


ಮಾಸ್ಕೋ (ಫೆ. 24): ನಿರೀಕ್ಷೆಯಂತೆಯೇ ಉಕ್ರೇನ್ ಮೇಲೆ ರಷ್ಯಾ ಅಧಿಕೃತವಾಗಿ ಯುದ್ಧ ಘೋಷಣೆ ಮಾಡಿದೆ. ಪಾಶ್ಚಿಮಾತ್ಯ ದೇಶಗಳ ಒತ್ತಡ ಹಾಗೂ ಹಲವು ರಾಜತಾಂತ್ರಿಕ ಸಂದಾನಗಳ  ನಡುವೆಯೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಗುರುವಾರ 'ಸೇನಾ ಕಾರ್ಯಾಚರಣೆ' ಘೋಷಣೆ ಮಾಡಿದ್ದಾರೆ. ಈಗಾಗಲೇ ರಷ್ಯಾ ಉಕ್ರೇನ್‌ ವಾಯುನೆಲೆಯನ್ನು ನಿಷ್ಕ್ರಿಯಗೊಳಿಸಿದೆ ಎಂದು ವರದಿಗಳು ತಿಳಿಸಿವೆ. ಆದರೆ  ಬಂಡುಕೋರರ ಹಿಡಿತದಲ್ಲಿರುವ ಎನ್‌ಕ್ಲೇವ್ ಬಳಿ ದೇಶದ ಪೂರ್ವದಲ್ಲಿ ಐದು ರಷ್ಯಾದ ವಿಮಾನಗಳು ಮತ್ತು ಹೆಲಿಕಾಪ್ಟರಗಳನ್ನು  ಹೊಡೆದುರುಳಿಸಿದೆ ಎಂದು ಉಕ್ರೇನಿಯನ್ ಮಿಲಿಟರಿ ಗುರುವಾರ ಹೇಳಿಕೊಂಡಿದೆ.

"ಜಂಟಿ ಫೋರ್ಸ್ ಕಮಾಂಡ್ ಪ್ರಕಾರ, ಇಂದು, ಫೆಬ್ರವರಿ 24, ಜಂಟಿ ಪಡೆಗಳ ಕಾರ್ಯಾಚರಣೆಯ ಪ್ರದೇಶದಲ್ಲಿ, ಆಕ್ರಮಣಕಾರರ ಐದು ವಿಮಾನಗಳು ಮತ್ತು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ" ಎಂದು ಸೇನಾ  ಸಿಬ್ಬಂದಿ ತಿಳಿಸಿದ್ದಾರೆ.

Latest Videos

undefined

ಇದನ್ನೂ ಓದಿ: Russia Ukraine Crisis: ಉಕ್ರೇನ್ ವಾಯುನಲೆ ಮೇಲೆ ರಷ್ಯಾ ದಾಳಿ: ವಾಯುಸೇನೆ ನಿಷ್ಕ್ರಿಯ: ವರದಿ

"ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ" ಎಂದು ಪುಟಿನ್ ರ ದೂರದರ್ಶನ ಪ್ರಕಟಣೆಯಲ್ಲಿ ಹೇಳಿದ್ದರು. ಆದರೆ ಇದನ್ನು  ಯುಎಸ್ ಅಧ್ಯಕ್ಷ ಜೋ ಬಿಡೆನ್ ಸೇರಿದಂತೆ ಇತರ ಪಾಶ್ಚಿಮಾತ್ಯ  ಖಂಡಿಸಿದ್ದರು. ಇನ್ನು ಉಕ್ರೇನ್‌ ಮೇಲೆ ರಷ್ಯಾ ದಾಳಿಯಿಂದ ಜಾಗತಿಕ ಹಣಕಾಸು ಮಾರುಕಟ್ಟೆಗಳನ್ನು ಪ್ರಕ್ಷುಬ್ಧತೆಗೆ ತಲುಪಿದೆ.

ಪುಟಿನ್ ಪ್ರಕಟಣೆಯ ಸ್ವಲ್ಪ ಸಮಯದ ನಂತರ, ಉಕ್ರೇನ್‌ನ ರಾಜಧಾನಿ ಕೈವ್ ಮತ್ತು ಇತರ ಹಲವಾರು ನಗರಗಳಲ್ಲಿ ಸ್ಫೋಟಗಳು ಕೇಳಿಬಂದಿವೆ ಎಂದು ಎಎಫ್‌ಪಿ ವರದಿ ಮಾಡಿದೆ.  ಉಕ್ರೇನಿಯನ್ ಗಡಿ ಕಾವಲುಗಾರರು ರಷ್ಯಾದ ಮತ್ತು ಬೆಲರೂಸಿಯನ್ ಗಡಿಗಳಲ್ಲಿ ದಾಳಿ ನಡೆಸುತ್ತಿದ್ದಾರೆಂದು ವರದಿ ಮಾಡಿದ್ದಾರೆ.  ಇನ್ನು ಉಕ್ರೇನಿಯನ್ ನಾಯಕ ವೊಲೊಡಿಮಿರ್ ಝೆಲೆನ್ಸ್ಕಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ರಷ್ಯಾ ತನ್ನ ದೇಶದ "ಮಿಲಿಟರಿ ಮೂಲಸೌಕರ್ಯ" ದ ಮೇಲೆ ದಾಳಿ ಮಾಡುತ್ತಿದೆ ಎಂದು ಹೇಳಿದ್ದು, ಗಾಬರಿಯಾಗದಂತೆ ನಾಗರಿಕರನ್ನು ಒತ್ತಾಯಿಸಿದ್ದಾರೆ ಮತ್ತು ವಿಜಯದ ಪ್ರತಿಜ್ಞೆ ಮಾಡಿದ್ದಾರೆ.

ರಷ್ಯಾ ಮೇಲೆ ಮತ್ತಷ್ಟುದೇಶಗಳ ನಿರ್ಬಂಧ: ಉಕ್ರೇನ್‌ ಮೇಲೆ ಆಕ್ರಮಣಕ್ಕೆ ಮುಂದಾಗಿರುವ ರಷ್ಯಾಕ್ಕೆ ತೀಕ್ಷ$್ಣ ಪ್ರತಿಕ್ರಿಯೆ ನೀಡುವುದಕ್ಕಾಗಿ ಮತ್ತಷ್ಟುದೇಶಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿವೆ. ರಷ್ಯಾದೊಂದಿಗಿನ ವ್ಯಾಪಾರ ವಹಿವಾಟಿಗೆ ನಿರ್ಬಂಧ ವಿಧಿಸಿದ್ದ ಅಮೆರಿಕಾ ಆರ್ಥಿಕವಾಗಿ ಬುಧವಾರ ಮತ್ತಷ್ಟುನಿರ್ಬಂಧ ವಿಧಿಸಿದೆ. ಇದರೊಂದಿಗೆ ಜರ್ಮನಿ, ಜಪಾನ್‌, ಕೆನಡಾಗಳು ಸಹ ನಿರ್ಬಂಧ ಘೋಷಿಸಿವೆ.

ಇದನ್ನೂ ಓದಿ: Russia Ukraine Crisis: ಸೇನಾ ದಾಳಿ ತಡೆಯಿರಿ, ಶಾಂತಿಗೆ ಅವಕಾಶ ನೀಡಿ:‌ ಪುಟಿನ್‌ಗೆ ಯುಎನ್ ಮುಖ್ಯಸ್ಥ ಆಗ್ರಹ!

ಅಮೆರಿಕ: ರಷ್ಯಾದ 2 ಬಹುದೊಡ್ಡ ಹಣಕಾಸು ಸಂಸ್ಥೆಗಳಾದ ವಿಇಬಿ ಮತ್ತು ಅವರ ಮಿಲಿಟರಿ ಬ್ಯಾಂಕ್‌ಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸುವುದಾಗಿ ಅಮೆರಿಕ ಹೇಳಿದೆ. ಈ ಮೂಲಕ ರಷ್ಯಾಗೆ ಪಾಶ್ಚಿಮಾತ್ಯ ಹಣಕಾಸು ಸೌಲಭ್ಯವನ್ನು ಕಡಿತಗೊಳಿಸಲಾಗುತ್ತಿದೆ. ಈ ನಿರ್ಧಾರದಿಂದಾಗಿ ಇನ್ನು ಮುಂದೆ ಅಮೆರಿಕ ಅಥವಾ ಯುರೋಪ್‌ನ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡಲು ರಷ್ಯಾಗೆ ಸಾಧ್ಯವಾಗುವುದಿಲ್ಲ.

ಜಪಾನ್‌: ರಷ್ಯಾದ ನಡೆಯನ್ನು ಟೀಕಿಸಿರುವ ಜಪಾನ್‌, ಉಕ್ರೇನ್‌ 2 ಬಂಡುಕೋರ ರಾಜ್ಯಗಳಿಗೆ ಸಂಬಂಧಿಸಿದವರ ಆಸ್ತಿಗಳು ಜಪಾನ್‌ನಲ್ಲಿದ್ದರೆ ಅದನ್ನು ಮುಟ್ಟಗೋಲು ಹಾಕಿಕೊಳ್ಳಲಾಗುವುದು. ಉಕ್ರೇನ್‌ನಲ್ಲಿ ರಷ್ಯಾ ಸ್ವತಂತ್ರ್ಯ ಎಂದು ಘೋಷಿಸಿರುವ ಉಕ್ರೇನ್‌ನ 2 ಪ್ರದೇಶಗಳೊಂದಿಗೆ ವ್ಯಾಪಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಜಪಾನ್‌ ಹೇಳಿದೆ.

ಕೆನಡಾ:ರಷ್ಯಾದ ಮೇಲೆ ಕೆನಡಾ ಸಹ ಮತ್ತಷ್ಟುವ್ಯಾಪಾರ ನಿರ್ಬಂಧವನ್ನು ವಿಧಿಸಿದೆ. ಇದರೊಂದಿಗೆ ನ್ಯಾಟೋ ಪಡೆಗೆ ಬೆಂಬಲ ನೀಡಲು 460 ಹೆಚ್ಚುವರಿ ಸೇನೆಯನ್ನು ಪೂರ್ವ ಯುರೋಪ್‌ಗೆ ಕಳುಹಿಸುವುದಾಗಿ ಹೇಳಿದೆ.

ಜರ್ಮನಿ: ರಷ್ಯಾದಿಂದ ಯುರೋಪ್‌ ದೇಶಗಳಿಗೆ ಗ್ಯಾಸ್‌ ಪೂರೈಕೆ ಮಾಡಲು ನಿರ್ಮಾಣ ಮಾಡಲಾಗುತ್ತಿರುವ ಯೋಜನೆ ಸಹಾಯ ಮಾಡುವುದನ್ನು ನಿಲ್ಲಿಸುವುದಾಗಿ ಜರ್ಮನಿ ಹೇಳಿದೆ. ಅಲ್ಲದೇ ಈ ಗ್ಯಾಸ್‌ಗೆ ಪ್ರಮಾಣಿಕರಣ ನೀಡುವುದನ್ನು ಸಹ ತಡೆಹಿಡಿಯಲಾಗುವುದು ಎಂದು ಹೇಳಿದೆ. ಇದರೊಂದಿಗೆ ಐರೋಪ್ಯ ಒಕ್ಕೂಟದ ದೇಶಗಳು, ಬ್ರಿಟನ್‌ ಸಹ ರಷ್ಯಾದೊಂದಿಗೆ ವ್ಯಾಪಾರ ಚಟುವಟಿಕೆಗಳನ್ನು ನಿರ್ಬಂಧಿಸಿವೆ.

click me!