ಹೆರಿಗೆ ಕೋಣೆ 2ರಲ್ಲಿ 22/2/2022 ರಂದು 2:22 ರ ಸಮಯದಲ್ಲಿ ಜನಿಸಿದ ಮಿರಾಕಲ್‌ ಬೇಬಿ ಈಕೆ... ನೋಡಿ ಫೋಟೋ

Suvarna News   | Asianet News
Published : Feb 24, 2022, 12:10 PM IST
ಹೆರಿಗೆ ಕೋಣೆ 2ರಲ್ಲಿ 22/2/2022 ರಂದು 2:22 ರ ಸಮಯದಲ್ಲಿ ಜನಿಸಿದ ಮಿರಾಕಲ್‌ ಬೇಬಿ ಈಕೆ... ನೋಡಿ ಫೋಟೋ

ಸಾರಾಂಶ

ಕುಟುಂಬಕ್ಕೆ ಅದರಷ್ಟವಾಗಿ ಬಂದ ಕಂದ ಜುದಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜುದಾ ತಾಯಿ 22/2/2022 ರಂದು 2:22 ರ ಸಮಯದಲ್ಲಿ ಜನಿಸಿದ ಮಗು  

ಮೊನ್ನೆ ಮಂಗಳವಾರ 22/2/2022 ಈ ದಿನಾಂಕವಿತ್ತು. ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಜನ ಈ ಬಗ್ಗೆ ಪೋಸ್ಟ್‌ ಮಾಡಿದ್ದರು. ಈ ದಿನಾಂಕ ಇಂಗ್ಲೀಷ್‌ ಸಂಖ್ಯೆಯಾಗಿದ್ದು, ಮೇಲಿನಿಂದ ಅಥವಾ ತಲೆಕೆಳಗಾಗಿ, ಎಡದಿಂದ ಅಥವಾ ಬಲಕ್ಕೆ ಯಾವ ಬದಿಯಿಂದ ನೋಡಿದರು ಇದು ಯಾವುದೇ ವ್ಯತ್ಯಾಸವಿಲ್ಲದೇ ಒಂದೇ ರೀತಿ ತೋರಿಸುತ್ತಿತ್ತು. ಇಂಗ್ಲೀಷ್‌ನಲ್ಲಿ ಟ್ಯುಸ್‌ಡೇ ಎಂದು ಕರೆಯುವ ಮಂಗಳವಾರದಂದೇ ಈ 22//02/2022 ದಿನಾಂಕವೂ ಬಂದಿದ್ದು, ಜನ ಟೂಸ್‌ ಡೇ, ಹ್ಯಾಪಿ ಟೂಸ್‌ ಡೇ ಎಂದೆಲ್ಲಾ ಕರೆದುಕೊಂಡಿದ್ದರು. ಆದರೆ ವಿಷಯ ಈಗ ಈ ದಿನದಲ್ಲ. ಈ ದಿನದಂದು ಜನಿಸಿದ ಮಗುವಿನದ್ದು, ಹೌದು ಮಗುವೊಂದು 22/2/2022 ರಂದು ಸರಿಯಾಗಿ ಮಧ್ಯರಾತ್ರಿ 2:22 ರ ಸಮಯದಲ್ಲಿ ಜನಿಸಿದೆ. ಈ ಮಗುವಿನ ಹುಟ್ಟಿದ ಸಮಯ ಹುಟ್ಟಿದ ದಿನ ಎಲ್ಲವೂ ಎರಡು ಆಗಿದ್ದು, ಅಚ್ಚರಿಗೆ ಕಾರಣವಾಗಿದೆ. ಈ ಮಗುವಿಗೆ ಜುದಾ ಎಂದು ಹೆಸರಿಡಲಾಗಿದೆ. 

ಈ ವಿಶೇಷ ದಿನದಂದು ಕೆಲವು ಬ್ರಾಂಡ್‌ಗಳು ಕೆಲವು ಕಂಪನಿಗಳು ಕೆಲವು ಆಹಾರ ಹಾಗೂ ಉತ್ಪನ್ನ ಸಂಸ್ಥೆಗಳು ಗ್ರಾಹಕರಿಗೆ ಆಫರ್‌ಗಳನ್ನು ನೀಡಿದ್ದು ನಿಮ್ಮ ಗಮನಕ್ಕೆ ಬಂದಿರಬಹುದು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಜೀವನದಲ್ಲಿ ಹೊಸತನ್ನು ಆರಂಭಿಸಲು ಇದು ಒಳ್ಳೆಯ ಸಮಯ ಎಂದು ಕೆಲವರು ಹೇಳಿರುವುದನ್ನು ನೀವು ಗಮನಿಸಿರಬಹುದು. 

ಅದೆಲ್ಲದರ ಹೊರತಾಗಿ ಒಂದು ವಿಶೇಷವೆನಿಸುವ ಘಟನೆ ನಡೆದಿದೆ.  22//02/2022 ರಂದು ಸರಿಯಾಗಿ ಮಧ್ಯರಾತ್ರಿ 2:22ರ ಸಮಯದಲ್ಲಿ ಹೊಸ ಅಥಿತಿಯೊಬ್ಬರು ಭೂಮಿಗೆ ಆಗಮಿಸಿದ್ದಾರೆ. ಇನ್ನು ವಿಶೇಷವೆಂದರೆ ರೂಮ್‌ ನಂಬರ್‌  2 ರಲ್ಲಿ ಈ ಮಗುವಿನ ಜನನವಾಗಿದೆ. ನಾರ್ತ್‌ ಕೆರೊಲಿನಾದ ಆಸ್ಪತ್ರೆಯಲ್ಲಿ ಮಗು ಜುದಾ ಜನಿಸಿದ್ದಾಳೆ. ಪೋಷಕರಾದ ಅಬೆರ್ಲಿ (Aberli) ಮತ್ತು ಹ್ಯಾಂಕ್ ಸ್ಪಿಯರ್‌ (Hank Spear) ದಂಪತಿ 22//02/2022 ರಂದು ಸರಿಯಾಗಿ ಮಧ್ಯರಾತ್ರಿ 2:22ರ ಸಮಯಕ್ಕೆ ತಮ್ಮ ಹೊಸ ಮಗುವನ್ನು ಸ್ವಾಗತಿಸಿದರು. 

ತಾಯಿಯಾಗೋ ಕನಸು ಕಂಡಿದ್ದ ಮಹಿಳೆ ಜೀವನದಲ್ಲಿ ವಿಧಿಯಾಟ: ಒಂದೇ ದಿನ ತಾಯಿ-ಮಗು ಸಾವು

ಈ ಸಮಯದಲ್ಲಿ ಮಗು ಜನಿಸಿದ ಸುದ್ದಿ ಆಸ್ಪತ್ರೆಯ  ಸಾಮಾಜಿಕ ಮಾಧ್ಯಮವಾದ ಕೋನ್ ಹೆಲ್ತ್ ಮೂಲಕ ರಾಜ್ಯಾದ್ಯಂತ ವೈರಲ್‌ ಆಗಿದೆ. ಉತ್ತರ ಕೆರೊಲಿನಾದ ಬರ್ಲಿಂಗ್ಟನ್‌ನಲ್ಲಿರುವ ಅಲಮಾನ್ಸ್ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲಿ ಮಗು ಜನಿಸಿದೆ ಎಂದು ಪೋಸ್ಟ್‌ಗಳು ವಿವರಿಸಿವೆ. ಈ ನವಜಾತ ಶಿಶು ಮತ್ತು ಆಕೆಯ ಕುಟುಂಬಕ್ಕೆ ಇಂದು ಹೆಚ್ಚುವರಿ ವಿಶೇಷ 'ಟೂಸ್‌ಡೇ' ಆಗಿದೆ ಜುದಾ ಗ್ರೇಸ್ ಸ್ಪಿಯರ್ ಅವರು 2/22/22 ರಂದು 2:22 ಕ್ಕೆ ಅಲಮಾನ್ಸ್ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲಿ  ಹೆರಿಗೆ ಕೊಠಡಿ 2 ರಲ್ಲಿ ಜನಿಸಿದರು ಎಂದು ಟ್ವೀಟ್‌ನಲ್ಲಿ ಮಾಹಿತಿ ನೀಡಲಾಗಿದೆ. ನವಜಾತ ಶಿಶು ಜುದಾ ಅವರ ತಾಯಿ ಕ್ಯಾನ್ಸರ್ ವಿರುದ್ಧ ಹೋರಾಡಿ ಬದುಕಿದವರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಲಾಗಿದೆ.

Twitter CEO Paternity Leave: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಪಿತೃತ್ವ ರಜೆ ಪಡೆದ ಟ್ವಿಟ್ಟರ್‌ ಸಿಇಓ ಅಗರವಾಲ್‌
ಬೇಬಿ ಜುದಾ, ಅವರ ಕುಟುಂಬದ ಪ್ರಾರ್ಥನೆಗೆ ಸಿಕ್ಕ ಪ್ರತಿಫಲವಾಗಿದೆ. ಮಾಮ್ ಅಬೆರ್ಲಿ ಹಾಡ್ಗ್ಕಿನ್ಸ್ ಕ್ಯಾನ್ಸರ್‌ ಕಾಯಿಲೆ ಲಿಂಫೋಮಾದಿಂದ ಬದುಕುಳಿದಿದ್ದರು. ಮತ್ತು ಆಕೆಗೆ ಅಗತ್ಯವಾಗಿದ್ದ ಕ್ಯಾನ್ಸರ್ ಚಿಕಿತ್ಸೆಗಳಿಂದಾಗಿ ಆಕೆಗೆ ಗರ್ಭಾವಸ್ಥೆ ಉಳಿಸಿಕೊಳ್ಳುವುದು ಕಷ್ಟಸಾಧ್ಯ ಎಂಬುವಂತಾಗಿತ್ತು. ಆದರೆ ಕುಟುಂಬ ನಿರಂತರ ಈ ಮಗುವಿನ ಉಳಿವಿಗಾಗಿ ಪ್ರಾರ್ಥನೆ ಮಾಡಿತ್ತು. ಇವತ್ತು ಅವರ ಪ್ರಾರ್ಥನೆಗೆ ಪ್ರತಿಫಲ ಸಿಕ್ಕಿದೆ. ಮಗು ಜುದಾ ಆರೋಗ್ಯವಾಗಿ ಜನಿಸಿದ್ದು, ಆಕೆ  122 ಔನ್ಸ್‌ ಅಂದರೆ ಮೂರು ಕೆಜಿಗಿಂತ ಹೆಚ್ಚು ತೂಕವಿದ್ದಾಳೆ. ಜುದಾ (praise) ಎಂದರೆ ಪ್ರಶಂಸೆ ಎಂದರ್ಥ ಇಂದು ಜುದಾ ಆಶೀರ್ವಾದವಾಗಿ ಅವರ ಕುಟುಂಬಕ್ಕೆ ಬಂದಿದ್ದಾಳೆ. ನಾವು ಈ ಸುಂದರ ಕುಟುಂಬದ ಬಗ್ಗೆ ತುಂಬಾ ಖುಷಿಯಾಗಿದ್ದೇವೆ. ಹ್ಯಾಪಿ ಬರ್ತ್‌ಡೇ ಜುದಾ ಎಂದು ಆಸ್ಪತ್ರೆ ಟ್ವಿಟ್ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ