Bitcoin Search : ಕಸದ ಪಾಲಾದ 3000 ಕೋಟಿ ಮೊತ್ತದ ಬಿಟ್ ಕಾಯಿನ್‌ಗೆ ನಿತ್ಯ ಹುಡುಕಾಟ

By Kannadaprabha NewsFirst Published Dec 17, 2021, 4:06 AM IST
Highlights

* ಕಸದ ಪಾಲಾದ 3000 ಕೋಟಿ  ಮೌಲ್ಯದ ಬಿಟ್ ಕಾಯಿನ್‌ಗೆ 8 ವರ್ಷಗಳಿಂದ ಹುಡುಕಾಟ
* 2013ರಲ್ಲಿ 3,000 ಕೋಟಿ ಮೌಲ್ಯದ ಬಿಟ್‌ಕಾಯಿನ್‌ಗಳಿರುವ ಹಾರ್ಡ್‌ಡ್ರೈವ್‌ ಕಳೆದುಕೊಂಡಿದ್ದ
*  ಕೃತಕ ಬುದ್ಧಿಮತ್ತೆ ಸಾಧನ ಬಳಸಿ 8 ವರ್ಷಗಳ ನಂತರವೂ ಹಾರ್ಡ್‌ಡ್ರೈವ್‌ ಹುಡುಕುವ ಸಾಹಸ

ಲಂಡನ್‌(ಡಿ. 17)  ಆಕಸ್ಮಿಕವಾಗಿ ಕಸದರಾಶಿ ಸೇರಿದ 3000 ಕೋಟಿ ಮೌಲ್ಯದ ಬಿಟ್‌ಕಾಯಿನ್‌ನನ್ನು(Bitcoin) ಬ್ರಿಟನ್‌ನ ವ್ಯಕ್ತಿಯೊಬ್ಬ ಕಳೆದ 8 ವರ್ಷಗಳಿಂದ ಹುಡುಕುತ್ತಿದ್ದಾನೆ. ಇಂಗ್ಲೆಂಡ್ (England) ಜೇಮ್ಸ್‌ ಹೋವೆಲ್‌ ಎಂಬ ವ್ಯಕ್ತಿ 2013ರಲ್ಲಿ 3,000 ಕೋಟಿ ಮೌಲ್ಯದ ಬಿಟ್‌ಕಾಯಿನ್‌ಗಳಿರುವ ಹಾರ್ಡ್‌ಡ್ರೈವ್‌ನ್ನು ಆಕಸ್ಮಿಕವಾಗಿ ಕಳೆದುಕೊಂಡಿದ್ದ.

ಆ ಹಾರ್ಡ್‌ಡ್ರೈವ್‌ ನ್ಯೂಪೋರ್ಟ್‌ನಲ್ಲಿ ನೆಲದಡಿಯಲ್ಲಿ ಹುಗಿದಿರುವ ಕಸದ ರಾಶಿಯಲ್ಲಿರುವ ಸಾಧ್ಯತೆ ಹಿನ್ನೆಲೆ, ನ್ಯೂಪೋರ್ಟ್‌ನ ನಗರ ಪಾಲಿಕೆ ಬಳಿ ಅದನ್ನು ಹುಡುಕುವ ಅನುಮತಿ ಕೇಳಿದ್ದ. ಜೊತೆಗೆ ಸಂಪತ್ತಿನ ಕಾಲು ಭಾಗವನ್ನು ನೀಡುವ ಆಮಿಷವೊಡ್ಡಿದ್ದ. ಒಂದುವೇಳೆ ಹಾರ್ಡ್‌ಡ್ರೈವ್‌ ಸಿಗದೇ ಹೋದಲ್ಲಿ ಅದರ ಹುಡುಕಾಟಕ್ಕಾಗಿ ಭರಿಸಬೇಕಾದ ವೆಚ್ಚದ ಕುರಿತು ಪಾಲಿಕೆ ಕಳವಳ ವ್ಯಕ್ತಪಡಿಸಿತ್ತು. ಆದರೂ ಎದೆಗುಂದದೇ ಹೋವೆಲ್‌ ತಜ್ಞರ ಸಮಗ್ರ ತಂಡದೊಂದಿಗೆ ಎಕ್ಸ್‌ರೇ ಸ್ಕಾ್ಯನರ್‌, ಕೃತಕ ಬುದ್ಧಿಮತ್ತೆ ಸಾಧನ ಬಳಸಿ 8 ವರ್ಷಗಳ ನಂತರವೂ ಹಾರ್ಡ್‌ಡ್ರೈವ್‌ ಹುಡುಕುವ ಸಾಹಸಕ್ಕೆ ಮುಂದಾಗಿದ್ದಾನೆ. ‘ಒನ್‌ಟ್ರಾಕ್‌’ ಡೇಟಾ ರಿಕವರಿ ಕಂಪನಿಯ ಸಿಬ್ಬಂದಿಗಳೂ ತಜ್ಞರ ತಂಡದಲ್ಲಿದ್ದು, ಹಾರ್ಡ್‌ಡ್ರೈವ್‌ ಮುರಿಯದಿದ್ದಲ್ಲಿ ಮಾತ್ರ ಮತ್ತೆ ಬಿಟ್‌ಕಾಯಿನ್‌ ಸಂಪತ್ತನ್ನು ಹೋವೆಲ್‌ ಮರಳಿ ಪಡೆಯುವ ಸಾಧ್ಯತೆಯಿದೆ ಎಂದಿದ್ದಾರೆ

ಬಿಟ್‌ ಕಾಯಿನ್‌ ಹಗರಣದಲ್ಲಿ ಯಾರ ರಕ್ಷಣೆಯೂ ಇಲ್ಲ:   ಬಿಟ್‌ ಕಾಯಿನ್‌ ಹಗರಣದಲ್ಲಿ ಯಾರನ್ನೂ ರಕ್ಷಿಸುವ ಅಗತ್ಯ ಸರ್ಕಾರಕ್ಕಿಲ್ಲ. ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿದ ಬಳಿಕ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra)ಹೇಳಿದ್ದಾರೆ.

Cryptocurrency Deadline : ಕ್ರಿಪ್ಟೋ ಕರೆನ್ಸಿ , ಬಿಟ್ ಕಾಯಿನ್ ಹೊಂದಿದವರಿಗೆ ಡೆಡ್‌ಲೈನ್?

ಕಾಂಗ್ರೆಸ್‌ (Congress) ಸದಸ್ಯ ಯು.ಬಿ.ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 11 ಪ್ರಕರಣಗಳು ದಾಖಲಾಗಿದ್ದು, ಪ್ರಮುಖ ಆರೋಪಿ ಶ್ರೀಕಿ ಸೇರಿದಂತೆ ಆಪಾದಿತರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಒಂದು ಪ್ರಕರಣದಲ್ಲಿ ಮಾತ್ರ ಬಿ ರಿಪೋರ್ಟ್‌ ಸಲ್ಲಿಸಲಾಗಿದೆ. ಐದು ಪ್ರಕರಣ ತನಿಖಾ ಹಂತದಲ್ಲಿದ್ದು, ಬಾಕಿ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಒಂದು ಪ್ರಕರಣದಲ್ಲಿ 2.50 ಲಕ್ಷ ರು. ವಶಕ್ಕೆ ಪಡೆಯಲಾಗಿದೆ ಎಂದರು.

ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಸದಸ್ಯ ಯು.ಬಿ.ವೆಂಕಟೇಶ್‌ ಅವರು, ಆರೋಪಿ ಶ್ರಿ ಕೃಷ್ಣ ಅಲಿಯಾಸ್‌ ಶ್ರೀಕಿಗೆ ಎಲ್ಲ ಪ್ರಕರಣಗಳಲ್ಲೂ ಜಾಮೀನು ಸಿಗುತ್ತವೆ ಎಂದರೆ ಸರ್ಕಾರ ಯಾವ ರೀತಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿರಬಹುದು. ಪ್ರಕರಣದಲ್ಲಿ ಹಿರಿಯ ಪೊಲೀಸ್‌ ಅ​ಧಿಕಾರಿಗಳು ಶಾಮೀಲಾಗಿರಬಹುದು. ಆತನಿಗೆ ಪೊಲೀಸರೇ ಡ್ರಗ್ಸ್‌ ನೀಡುತ್ತಿದ್ದಾರೆ ಎಂದು ಆರೋಪಿಯ ತಂದೆ ದೂರಿದ್ದಾರೆ. ಅಲ್ಲದೆ ಈ ಬಗ್ಗೆ ಕೋರ್ಟ್‌ ತಪಾಸಣೆಗೆ ಆದೇಶಿಸಿದಾಗ ಪೊಲೀಸರು ಆತನ ಮೂತ್ರ ಪರೀಕ್ಷೆಗೆ ಬದಲು ಆಸ್ಪತ್ರೆಗೆ ಕರೆದೊಯ್ದು ಹೊಟ್ಟೆತೊಳೆಸುತ್ತಾರೆ. ಅಲ್ಲದೆ, ಪೊಲೀಸರೇ ಅವನಿಗೆ ಹೆದರಿಸಿ ಸಾಕಷ್ಟುಹ್ಯಾಕ್‌ ಮಾಡಿಸಿ ಬೇಕಾದಷ್ಟುಹಣ ಮಾಡಿದ್ದಾರೆ ಎಂಬ ಆರೋಪಗಳಿವೆ ಎಂದು ಆರೋಪಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಪೊಲೀಸರು ಶ್ರೀಕಿಯನ್ನು ಬಿಎಂಸಿ ಆಸ್ಪತ್ರೆಗೆ ಕರೆದೊಯ್ದಿದ್ದರು, ಆದರೆ ಅದನ್ನು ಕೋವಿಡ್‌ ಆಸ್ಪತ್ರೆ ಮಾಡಿದ್ದರಿಂದ ನಂತರ ಬೌರಿಂಗ್‌ ಆಸ್ಪತ್ರೆಗೆ ಕರೆತಂದು ಪರೀಕ್ಷೆ ಮಾಡಿಸಿ ನಂತರ ಎಫ್‌ಎಸ್‌ಎಲ್‌ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿದರು. ಬಳಿಕ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಸದಸ್ಯರು ಆರೋಪಿಸುವಂತೆ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು. ಈ ಬಗ್ಗೆ ಇನ್ನಷ್ಟುಚರ್ಚೆಗೆ ಕಾಂಗ್ರೆಸ್‌ ಸದಸ್ಯರು ಕೇಳಿದಾಗ, ಅರ್ಧ ಗಂಟೆ ಚರ್ಚೆಗೆ ಮನವಿ ಮಾಡುವಂತೆ ಹೊರಟ್ಟಿಅವರು ಸೂಚನೆ ನೀಡಿದರು.

click me!