ಆಕೆ ಸತ್ತಿಲ್ಲ, ಶವಪೆಟ್ಟಿಗೆಯಿಂದ ರಾಣಿ ಎಲಿಜಬೆತ್ ಏಳಿಸಲು ಹೊರಟವ ಅಂದರ್

By Anusha KbFirst Published Sep 21, 2022, 11:50 AM IST
Highlights

ರಾಣಿ ಸತ್ತಿಲ್ಲ ಎಂದು ಹೇಳಿ ಆಕೆಯನ್ನು ಶವಪೆಟ್ಟಿಗೆಯಿಂದ ಏಳಿಸುವೆ ಎಂದು ಹೇಳಿ ವಿಚಿತ್ರವಾಗಿ ವರ್ತಿಸಿದ ವ್ಯಕ್ತಿಯೋರ್ವನನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ. 
 

ಬಂಕಿಂಗ್‌ಹ್ಯಾಮ್‌: ರಾಣಿ ಎಲಿಜಬೆತ್ ನಿಧನದಿಂದ ಬಂಕಿಂಗ್‌ಹ್ಯಾಮ್ ಅರಮನೆ ಸ್ತಬ್ಧವಾಗಿದೆ. ಸೆಪ್ಟೆಂಬರ್ 8 ರಂದು ನಿಧನರಾದ ರಾಣಿ ಎಲಿಜಬೆತ್ ಅಂತ್ಯಸಂಸ್ಕಾರವನ್ನು ಬರೋಬ್ಬರಿ 10 ದಿನಗಳ ನಂತರ ಸೆಪ್ಟೆಂಬರ್ 18ರಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು. ಆದರೆ ಈ ನಡುವೆ ರಾಣಿ ಸತ್ತಿಲ್ಲ ಎಂದು ಹೇಳಿ ಆಕೆಯನ್ನು ಶವಪೆಟ್ಟಿಗೆಯಿಂದ ಏಳಿಸುವೆ ಎಂದು ಹೇಳಿ ವಿಚಿತ್ರವಾಗಿ ವರ್ತಿಸಿದ ವ್ಯಕ್ತಿಯೋರ್ವನನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ. 

ಬ್ರಿಟನ್ ಅನ್ನು ಬಹಳ ಸುಧೀರ್ಘ ಕಾಲ ಆಳಿದ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಾಣಿ ಎಲಿಜಬೆತ್ 96 ವರ್ಷಗಳ ತುಂಬು ಜೀವನವನ್ನು ನಡೆಸಿ ನಿಧನರಾಗಿದ್ದರು. ಇದಾದ ಬಳಿಕ ಇಡೀ ಬ್ರಿಟನ್ ರಾಣಿಯ ಅಗಲಿಕೆಯ ಶೋಕದಲ್ಲಿ ಮುಳುಗಿದೆ. ರಾಣಿಯ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರಾತ್ರಿ ಹಗಲೆನ್ನದೇ ಲಕ್ಷಾಂತರ ಜನ ಆಗಮಿಸಿ ರಾಣಿಗೆ ಅಂತಿಮ ನಮನ ಸಲ್ಲಿಸಿದ್ದರು. ಈ ನಡುವೆ ರಾಣಿ  ಇನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲದ ವ್ಯಕ್ತಿ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದು ಆತನನ್ನು ಬಂಧಿಸಲಾಗಿದೆ.

Queen Elizabeth II Funeral: ಬ್ರಿಟನ್‌ ರಾಣಿಗೆ ಕಣ್ಣೀರ ವಿದಾಯ; ದ್ರೌಪದಿ ಮುರ್ಮು ಸೇರಿ 2000 ಗಣ್ಯರು ಭಾಗಿ

ಮಾರ್ಕ್ ಹಗ್ (Mark Hague) ಎಂಬಾತನೇ ಬಂಧಿತ ವ್ಯಕ್ತಿ. ಈ ಮಾಧ್ಯಮ ಸಿಬ್ಬಂದಿಗೆ, 'ತಾನು ರಾಣಿಗೆ ಶವಪಟ್ಟಿಗೆಯಿಂದ ಹೊರಬರುವಂತೆ ಹೇಳಲು ಹೋಗುತ್ತಿದ್ದೇನೆ. ರಾಣಿ ಮೃತಪಟ್ಟಿಲ್ಲ. ಆಕೆ ಜೀವಂತವಾಗಿದ್ದಾಳೆ' ಎಂದು ಹೇಳಿದ ಆತ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ದಾನೆ. ಇದಾದ ಬಳಿಕ ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಆತನನ್ನು ಬಂಧಿಸಿದ್ದು, ಆತನ ಈ ವಿಚಿತ್ರ ವರ್ತನೆಗೆ 10 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ. 

ಆ ವ್ಯಕ್ತಿ, ನಾನು ಆಕೆಗೆ (ರಾಣಿ ಎಲಿಜಬೆತ್‌ಗೆ) ಶವಪೆಟ್ಟಿಗೆಯಿಂದ ಹೊರ ಬರುವಂತೆ ಹೇಳುತ್ತೇನೆ. ಏಕೆಂದರೆ ಆಕೆ ಸತ್ತಿಲ್ಲ ಎಂದು ನಿರಂತರವಾಗಿ ಹೇಳುತ್ತಿದ್ದ ಎಂದು ನ್ಯಾಯಾಧೀಶ ಲೂಯಿಸ್ ಬರ್ನೆಲ್ (Louise Burnell) ಹೇಳಿದ್ದಾರೆ. ಈತನನ್ನು ನಂತರ ಪೊಲೀಸರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಕಾರಣಕ್ಕೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯ ಹಾಗೂ ಲೈಗಿಂಕ ಹಾನಿ ತಡೆ ಆದೇಶವನ್ನು ಉಲ್ಲಂಘಿಸಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ.

ಸಾರ್ವಜನಿಕರಿಗೆ ರಾಣಿಯ ಅಂತಿಮ ದರ್ಶನಕ್ಕೆ ಭಾನುವರದವರೆಗೆ ಅನುಮತಿ ನೀಡಲಾಗಿತ್ತು. ಅದರ ನಂತರವೂ 11 ಕಿಲೋ ಮೀಟರ್‌ವರೆಗೆ ರಾಣಿಯ ಅಂತಿಮ ದರ್ಶನ ಪಡೆಯಲು ಜನ ಸೇರಿದ್ದರು. ಕೊನೆಯದಾಗಿ ರಾಣಿಗೆ ರಾಯಲ್ ಏರ್‌ಪೋರ್ಸ್‌ನ (Royal Air Force) ಸದಸ್ಯ ಚೆರಿಸ್ ಹೆರ್ರಿ (Chrissy Heerey) ಅಂತಿಮ ವಿದಾಯ ಹೇಳಿದ್ದರು.

Queen Funeral: 14 ಗಂಟೆಗಳ ನಿರಂತರ ಕೆಲಸ: ಲೈವ್‌ನಲ್ಲೇ ನಿದ್ದೆಗೆ ಜಾರಿದ ನಿರೂಪಕಿ

ಆತ್ಮೀಯರ ಪ್ರೀತಿಪಾತ್ರರ ಸಾವನ್ನು ಅಷ್ಟು ಸುಲಭವಾಗಿ ಎಲ್ಲರಿಗೂ ಒಪ್ಪಿಕೊಳ್ಳಲಾಗುವುದಿಲ್ಲ. ತಮ್ಮ ಆತ್ಮೀಯರು ಮೃತಪಟ್ಟಾಗ ಬಹುತೇಕರು ಆ ಘಟನೆಯನ್ನು ಅರಗಿಸಿಕೊಳ್ಳಲಾಗದೇ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾರೆ ಕೆಲವರು ಖಿನ್ನತೆಗೆ ಜಾರುತ್ತಾರೆ. ಕೆಲವೊಮ್ಮೆ ಖ್ಯಾತ ವ್ಯಕ್ತಿಗಳು ಅಚಾನಕ್ ಆಗಿ ಸಾವಿಗೀಡಾದ ವೇಳೆ, ದುಃಖ ತಾಳಲಾಗದೇ ಅವರ ಅಭಿಮಾನಿಗಳು ಕೂಡ ಆತ್ಮಹತ್ಯೆಗೆ ಯತ್ನಿಸಿದಂತಹ ಘಟನೆಗಳು ಈ ಹಿಂದೆ ನಡೆದಿವೆ. ಅದೇ ರೀತಿ ಇಲ್ಲಿ ರಾಣಿಯ ಸಾವನ್ನು ನಂಬಲಾಗದ ಮಾರ್ಕ್ ಹಗ್ ವಿಚಿತ್ರವಾಗಿ ವರ್ತಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. 

ಎಲಿಜಬೆತ್‌ ಅಂತ್ಯಸಂಸ್ಕಾರಕ್ಕೆ ವಿಶ್ವದ ವಿವಿಧ ಮೂಲೆಗಳಿಂದ ಲಂಡನ್‌ಗೆ ಕನಿಷ್ಠ 10 ಲಕ್ಷ ಜನರು ಆಗಮಿಸಿದ್ದರು.  ವಿಶ್ವದ ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಿಗಳು, ರಾಜರು, ರಾಣಿಯರು, ಸಚಿವರು ಸೇರಿದಂತೆ 500ಕ್ಕೂ ಹೆಚ್ಚು ಗಣ್ಯರು ಲಂಡನ್‌ಗೆಎ ತೆರಳಿ ಅಗಲಿದ ರಾಣಿಗೆ ಅಂತಿಮ ವಿದಾಯ ತಿಳಿಸಿದ್ದರು. 

click me!