
ನ್ಯೂ ಹ್ಯಾಂಪ್‌ಶೈರ್(ಜೂ.26): ಆಹಾರ ಅಥವಾ ಪಾನೀಯಗಳನ್ನು ಸೇವಿಸಿದ ನಂತರ ಜನರು ಸಾಕಷ್ಟು ಪ್ರಮಾಣದ ಟಿಪ್ಸ್ ಬಿಡುವ ಸಾಧ್ಯತೆಗಳಿವೆ. ಆ ಪಟ್ಟಿಗೆ ಈಗ ಹೊಸ ಸೇರ್ಪಡೆ ಇದೆ. ಉದಾರ ಗ್ರಾಹಕಕೊನೊಬ್ಬ ಮಾಡಿರೋದೇನು ನೋಡಿ.
ನ್ಯೂ ಹ್ಯಾಂಪ್‌ಶೈರ್‌ನ ಲಂಡನ್‌ಡೇರಿಯಲ್ಲಿರುವ ಸ್ಟಂಬಲ್ ಇನ್ ಬಾರ್ & ಗ್ರಿಲ್‌ನಲ್ಲಿ ಈ ಘಟನೆ ನಡೆದಿದೆ. ರೆಸ್ಟೋರೆಂಟ್ ಮಾಲೀಕ ಮೈಕ್ ಜರೆಲ್ಲಾ ಫೇಸ್‌ಬುಕ್‌ನಲ್ಲಿ ಈ ಘಟನೆಯನ್ನು ಶೇರ್ ಮಾಡಿದ್ದಾರೆ. $ 38 ಬಿಲ್‌ನಲ್ಲಿ, $16,000 ಟಿಪ್ಸ್ ಬಿಟ್ಟ ಡಿನ್ನರ್‌ಗೆ ಧನ್ಯವಾದ ಅರ್ಪಿಸಿದ್ದಾರೆ.
ಬಾಳೆ ದಿಂಡಿನ ರಸ ಕುಡಿದರೆ ಹೊಟ್ಟೆಲಿರೋ ಕೂದಲೂ ಹೊರ ಬರುತ್ತಂತೆ!
"ಒಬ್ಬ ಸಂಭಾವಿತ ವ್ಯಕ್ತಿಯು ಬಾರ್‌ಗೆ ಬಂದು ಬಿಯರ್ ಮತ್ತು ಒಂದೆರಡು ಮೆಣಸಿನ ಚೀಸ್ ಆರ್ಡರ್ ಮಾಡಿದರು. ನಂತರ ಉಪ್ಪಿನಕಾಯಿ ಚಿಪ್ಸ್ ಮತ್ತು ಟಕಿಲಾ ಪಾನೀಯವನ್ನು ಆದೇಶಿಸಿದರು ಎಂದು ಜರೆಲ್ಲಾ ತಿಳಿಸಿದ್ದಾರೆ.
ಸುಮಾರು 3: 30 ಕ್ಕೆ, ಅವರು ಬಾರ್ ಎಟೆಂಡರನ್ನುಕರೆದಿದ್ದಾರೆ. ಟಿಪ್ಟ್ ಕೊಟ್ಟು ಎಲ್ಲವನ್ನೂ ಒಂದೇ ಸ್ಥಳದಲ್ಲಿ ಖರ್ಚು ಮಾಡಬೇಡ ಎಂದು ಸೂಚನೆ ಕೊಟ್ಟಿದ್ದಾರೆ.
ಶಿಫ್ಟ್‌ನಲ್ಲಿ ಕೆಲಸ ಮಾಡುವಾಗ ವ್ಯಕ್ತಿ ಮೊದಲಿಗೆ ಇದನ್ನು ಗಮನಿಸಲಿಲ್ಲ. ನಂತರ ಅವರು ಉಳಿದ ಮೊತ್ತವನ್ನು ಗಮನಿಸಿದಾಗ ಶಾಕ್ ಆಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ