ಪಾಪ ಪುಣ್ಯದ ಮಾತೇ ಇಲ್ಲ, ಲೈಂಗಿಕ ಅಪರಾಧಿಗಳಿಗೆ ಪುರುಷತ್ವ ಹರಣ, ಯುಕೆ ಸರ್ಕಾರದ ಹೊಸ ಪ್ಲಾನ್

Published : Jun 08, 2025, 10:55 PM IST
peru govt chemical castration

ಸಾರಾಂಶ

ಕರುಣೆ, ಮೂಲಭೂತ ಹಕ್ಕು ಸೇರಿದಂತೆ ಬೊಗಳೇ ಮಾತುಗಳಿಗೆ ಅವಕಾಶವಿಲ್ಲ. ಲೈಂಗಿಕ ಅಪರಾಧಿಗಳ ಪುರುಷತ್ವ ಹರಣ ಇಂಜೆಕ್ಷನ್ ನೀಡಲು ಯುಕೆ ಸರ್ಕಾರ ಹೊಸ ಪ್ಲಾನ್ ಮಾಡಿದೆ.

ಲಂಡನ್(ಜೂ.08) ಯುಕೆ ಸರ್ಕಾರ ಹೊಸ ಯೋಜನೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಅತ್ಯಾ*ರ ಸೇರಿದಂತೆ ಹಲವು ಲೈಂಗಿಕ ಅಪರಾಧಿಗಳ ಮೇಲೆ ಯಾವುದೇ ದಯೇ ತೋರಿಸದಿರಲು ಸರ್ಕಾರ ನಿರ್ಧರಿಸಿದೆ. ಲೈಂಗಿಕ ಅಪರಾಧಿಗಳ ಪುರುಷತ್ವ ಹರಣ ಇಂಜೆಕ್ಷನ್ ನೀಡಲು ಮುಂದಾಗಿದೆ. ಈ ಲೈಂಗಿಕ ಹರಣ ಪರೀಕ್ಷೆಯಿಂದ ಅಪರಾಧಿಗಳಲ್ಲಿ ಲೈಂಗಿಕ ಹಾರ್ಮೋನ್ ಉತ್ಪಾದನೆಯಾಗುವುದಿಲ್ಲ. ಲೈಂಗಿಕ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಪ್ರಾಯೋಗಿಕ ಹಂತದ ಈ ಯೋಜನೆಯನ್ನು ಯುಕೆಯ 20 ಜೈಲುಗಳಿಗೆ ವಿಸ್ತರಿಸಲು ಯುಕೆ ಸರ್ಕಾರ ಮುಂದಾಗಿದೆ.

ಅಮೆರಿಕದ ಕೆಲ ಜೈಲುಗಳಲ್ಲಿ ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ ಎಂದು ವರದಿಗಳು ಹೇಳುತ್ತಿದೆ. ಇದೇ ಮಾದರಿಯನ್ನು ಇದೀಗ ಯುಕೆ ಸರ್ಕಾರ ಪ್ರಯೋಗಿಕವಾಗಿ ಜಾರಿಗೊಳಿಸಲು ಮುಂದಾಗಿದೆ. ಈ ಮಾದರಿಯನ್ನು ಕಡ್ಡಾಯಗೊಳಿಸುವ ಬಗ್ಗೆಯೂ ಚಿಂತನೆಗಳು ನಡೆಯುತ್ತಿದೆ. ಆದರೆ ಈ ಯೋಜನೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಆದರೆ ಯುಕೆ ಸರ್ಕಾರ ಮೊದಲ ಹಂತದ ಯೋಜನೆ ಜಾರಿಗೆ ಸಿದ್ಧವಾಗಿದೆ.

ಲೈಂಗಿಕ ಅಪರಾಧಿಗಳಿಗೆ ಶಿಕ್ಷೆ ರೂಪದಲ್ಲಿ ಜೈಲು ವಾಸಕ್ಕಿಂತ ಲೈಂಗಿಕ ಹರಣ ಪರೀಕ್ಷೆ ಉತ್ತಮ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಕಾರಣ ಲೈಂಗಿಕ ಅಪರಾಧಿಗಳು ತಮ್ಮ ಜೈಲು ವಾಸ ಮುಗಿಸಿ ಬಿಡುಗಡೆಯಾದ ಬಳಿಕ ಮತ್ತದೆ ಅಪರಾಧ ಮಾಡುತ್ತಿದ್ದರೆ. ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಲೈಂಗಿಕ ಅಪರಾಧಿಗಳನ್ನು ಜೈಲಿನಲ್ಲಿ ಇಟ್ಟುಕೊಳ್ಳುವ ಬದಲು ಅವರ ಲೈಂಗಿಕ ಪುರುಷತ್ವ ಹರಣ ಮಾಡಿದರೆ ಮುಂದೆ ಈ ಅಪರಾಧಗಳು ಮಾಡಲು ಸಾಧ್ಯವಾಗುವಿದಿಲ್ಲ. ಜೊತೆಗೆ ಮಾಡಿದ ತಪ್ಪಿಗೆ ಜೀವನ ಇಡೀ ಪಶ್ಚಾತ್ತಾಪ ಪಡಲಿದ್ದಾರೆ ಎಂದು ಕಠಿಣ ಶಿಕ್ಷೆಗೆ ಮೊರೆ ಹೋಗಲಾಗುತ್ತಿದೆ.

ಕೆಲ ಯೂರೋಪಿಯನ್ನು ದೇಶಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಜರ್ಮನಿ, ಡೆನ್ಮಾರ್ಕ್‌ನಲ್ಲಿ ಇಂಜೆಕ್ಷನ್ ಮೂಲಕ ಲೈಂಗ ಅಪರಾಧಿಗಳ ಪುರುಷತ್ವ ಹರಣ ಮಾಡಲಾಗುತ್ತದೆ. ಇತ್ತ ಪೊಲೆಂಡ್‌ನಲ್ಲಿ ಲೈಂಗಿಕ ಅಪರಾಧಿಗಳಿಗೆ ಕಡ್ಡಾಯವಾಗಿ ಪುರುಷತ್ವ ಹರಣ ಇಂಜೆಕ್ಷನ್ ನೀಡಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!