ಬ್ರಿಟನ್‌ ಮೇಲೀಗ ಆಫ್ರಿಕಾ ಕೊರೋನಾ ದಾಳಿ: ದಾಖಲೆ ಪ್ರಮಾಣದ ಹೊಸ ಸೋಂಕು, ಸಾವು ದಾಖಲು!

Published : Dec 24, 2020, 09:51 AM ISTUpdated : Dec 24, 2020, 03:00 PM IST
ಬ್ರಿಟನ್‌ ಮೇಲೀಗ ಆಫ್ರಿಕಾ ಕೊರೋನಾ ದಾಳಿ:  ದಾಖಲೆ ಪ್ರಮಾಣದ ಹೊಸ ಸೋಂಕು, ಸಾವು ದಾಖಲು!

ಸಾರಾಂಶ

ಬ್ರಿಟನ್‌ ಮೇಲೀಗ ಆಫ್ರಿಕಾ ಕೊರೋನಾ ದಾಳಿ| ರೂಪಾಂತರಗೊಂಡ ಮತ್ತೊಂದು ಕೊರೋನಾ ಮಾದರಿ ಬ್ರಿಟನ್‌ನಲ್ಲಿ ಪತ್ತೆ| ಬ್ರಿಟನ್‌ನಲ್ಲಿ ನಿನ್ನೆ ದಾಖಲೆ ಪ್ರಮಾಣದ ಹೊಸ ಸೋಂಕು, ಸಾವು ದಾಖಲು

ಲಂಡನ್(ಡಿ.24)‌: ಹೊಸ ಮಾದರಿಯ ಕೊರೋನಾ ವೈರಸ್‌ ಪತ್ತೆಯಾಗುವ ಮೂಲಕ ಇಡೀ ವಿಶ್ವದಲ್ಲಿ ಹೊಸ ಆತಂಕ ಹುಟ್ಟುಹಾಕಿದ್ದ ಬ್ರಿಟನ್‌ ಇದೀಗ ಸ್ವತಃ ತಾನೇ ಮತ್ತೊಂದು ಕೊರೋನಾ ವೈರಸ್‌ ದಾಳಿಗೆ ತುತ್ತಾಗಿದೆ.

"

ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಕೊರೋನಾದ ರೂಪಾಂತರಗೊಂಡ ಹೊಸ ಮಾದರಿಯೊಂದು ಇದೀಗ ಬ್ರಿಟನ್‌ನ ವಿವಿಧ ಭಾಗಗಳಲ್ಲೂ ಪತ್ತೆಯಾಗಿದೆ. ಇದು ಕೂಡಾ ತೀವ್ರ ಸ್ವರೂಪದಲ್ಲಿ ಹಬ್ಬುವ ತೀಕ್ಷ$್ಣತೆ ಹೊಂದಿರುವ ಕಾರಣ, ಬ್ರಿಟನ್‌ನಲ್ಲಿ ಭಾರೀ ಆತಂಕ ವ್ಯಕ್ತವಾಗಿದೆ.

ಅಲ್ಲದೆ ಈಗಾಗಲೇ ಪತ್ತೆಯಾಗಿರುವ ಸೋಂಕಿನ ಜೊತೆಗೆ ಪತ್ತೆಯಾದ ಹೊಸ ಸೋಂಕು ಸೇರಿಕೊಂಡು ದೇಶದಲ್ಲಿ ಕೊರೋನಾ 2ನೇ ಅಲೆಯನ್ನು ಇನ್ನಷ್ಟುಭೀಕರಗೊಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಕಳೆದ 3-4 ದಿನಗಳಿಂದ ಜಾರಿಗೊಳಿಸಿದ್ದ ಕೋವಿಡ್‌ ನಿಯಂತ್ರಣಾ ಕ್ರಮಗಳನ್ನು ಮತ್ತಷ್ಟುಬಿಗಿಗೊಳಿಸಲಾಗಿದೆ.

ಈ ಕುರಿತು ಬುಧವಾರ ಮಾಹಿತಿ ನೀಡಿರುವ ಆರೋಗ್ಯ ಸಚಿವ ಮ್ಯಾಟ್‌ ಹ್ಯಾಂಕಾಕ್‌, ಇದುವರೆಗಿನ ತಪಾಸಣೆ ಅನ್ವಯ ಇಬ್ಬರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಸೋಂಕಿನ ಮಾದರಿ ಪತ್ತೆಯಾಗಿದೆ. ಇದು ಬ್ರಿಟನ್‌ನಲ್ಲಿ ಪತ್ತೆಯಾದ ವೈರಸ್‌ ಹೊಂದಿರುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ರೂಪಾಂತರಗೊಂಡಿರುವ ಕಾರಣ, ಹೆಚ್ಚು ಅಪಾಯಕಾರಿಯಾಗಿ ಗೋಚರಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದಿಂದ ಎಲ್ಲಾ ರೀತಿಯ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಬ್ರಿಟನ್‌ನಲ್ಲಿ ಬುಧವಾರ ದಾಖಲೆಯ 39237 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 744 ಜನರು ಸಾವನ್ನಪ್ಪಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?