
ಲಂಡನ್(ಡಿ.25): ಬ್ರೆಕ್ಸಿಟ್ ನಂತರದ ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಬ್ರಿಟನ್ ಮತ್ತು ಯುರೋಪಿಯನ್ ಒಕ್ಕೂಟಗಳು ಒಮ್ಮತಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಎರಡೂ ಬಣಗಳು ಡೊಡ್ಡ ಸಮಸ್ಯೆಯಿಂದ ಪಾರಾಗಲಿವೆ.
ಬ್ರೆಕ್ಸಿಟ್‌ಗೂ ಮುನ್ನ ಯುರೋಪಿಯನ್ ದೇಶದ ಭಾಗವಾಗಿದ್ದ ಬ್ರಿಟನ್, ಆ ದೇಶಗಳೊಂದಿಗೆ ವಿವಿಧ ವಸ್ತುಗಳ ವ್ಯಾಪಾರವನ್ನು ಹೆಚ್ಚಿನ ತೆರಿಗೆ ಭಾರವಿಲ್ಲದೇ ನಿರ್ವಹಿಸುತ್ತಿತ್ತು. ಆದರೆ ಯುರೋಪಿಯನ್ ಒಕ್ಕೂಟದಿಂದ ಹೊರಬಂದ ಬಳಿಕ ಮತ್ತೆ ಅಂಥದ್ದೇ ಅವಕಾಶ ಉಳಿಸಿಕೊಳ್ಳುವ ಸಲುವಾಗಿ ಬ್ರಿಟನ್ ಒಪ್ಪಂದವೊಂದಕ್ಕೆ ಬರಬೇಕಾಗಿತ್ತು.
ಹೆಚ್ಚು ಭಕ್ತರಿಗೆ ಪ್ರವೇಶ: ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇರಳ ಸುಪ್ರಿಂಗೆ
ಅದಕ್ಕೆ ಯುರೋಪಿಯನ್ ಒಕ್ಕೂಟ ಡಿ.31ರ ಗಡುವು ವಿಧಿಸಿತ್ತು. ಆದರೆ ಗಡುವು ಸಮೀಪಿಸಿದರೂ ಒಮ್ಮತ ಮೂಡದ ಹಿನ್ನೆಲೆಯಲ್ಲಿ, ಬ್ರಿಟನ್ ಭಾರೀ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿತ್ತು.
ಕಾರಣ, ಬ್ರಿಟನ್ ಶೇ.50ಕ್ಕಿಂತ ಹೆಚ್ಚು ವಹಿವಾಟು ಯುರೋಪಿಯನ್ ದೇಶಗಳ ಜೊತೆಗಿದೆ. ಆದರೆ ಒಕ್ಕೂಟದ ಜೊತೆಗೆ ಹಲವು ತಿಂಗಳಿನಿಂದ ನಡೆದ ಮಾತುಕತೆಯನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾಗಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಡೀಲ್ ಡನ್ ಎಂದು ಗುರುವಾರ ಘೋಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ